ಕೇಂದ್ರ ಬಜೆಟ್: ಎಲ್ಲ ಭಾರತೀಯರಿಗೆ 5 ಲಕ್ಷ ರೂ. ಆರೋಗ್ಯ ವಿಮೆ ಘೋಷಣೆ ಸಂಭವ

ಕೇಂದ್ರ ಸರ್ಕಾರ 2018ರ ಬಜೆಟ್ ನಲ್ಲಿ ದೇಶದ ಪ್ರತಿ ನಾಗರಿಕರಿಗೂ 5 ಲಕ್ಷ ರೂ. ವರೆಗೂ ಆರೋಗ್ಯ ವಿಮೆ ನೀಡುವ ಯೋಜನೆಯನ್ನು ಘೋಷಿಸುವ ಸಾದ್ಯತೆ ಇದೆ ಎಂದು ಪ್ರಸಿದ್ದ ಹಿಂದಿ ದಿನಪತ್ರಿಕೆ...
ನರೇಂದ್ರ ಮೋದಿ ಮತ್ತು ಅರುಣ್ ಜೇಟ್ಲಿ
ನರೇಂದ್ರ ಮೋದಿ ಮತ್ತು ಅರುಣ್ ಜೇಟ್ಲಿ
ನವದೆಹಲಿ: ಕೇಂದ್ರ ಸರ್ಕಾರ 2018ರ ಬಜೆಟ್ ನಲ್ಲಿ ದೇಶದ ಪ್ರತಿ ನಾಗರಿಕರಿಗೂ 5 ಲಕ್ಷ ರೂ. ವರೆಗೂ ಆರೋಗ್ಯ ವಿಮೆ ನೀಡುವ ಯೋಜನೆಯನ್ನು ಘೋಷಿಸುವ ಸಾದ್ಯತೆ ಇದೆ ಎಂದು ಪ್ರಸಿದ್ದ ಹಿಂದಿ ದಿನಪತ್ರಿಕೆ ಪ್ರಭಾತ್ ಖಬರ್ ವರದಿ ಮಾಡಿದೆ. 
ಫೆ.1ಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಿ ಕೇಂದ್ರ ಬಜೆಟ್ ಮಂಡಿಸಲಿದ್ದು ಈ ವೇಳೆ ಸರ್ಕಾರದ ವತಿಯಿಂದ ದೇಶದ ನಾಗರಿಕರಿಗೆ ಐದು ಲಕ್ಷ ರೂ. ಆರೋಗ್ಯ ವಿಮೆಯನ್ನು ನೀಡಬಹುದೆಂದು ಎಂದು ಪತ್ರಿಕೆ ವರದಿ ಹೇಳಿದೆ. ಕೇಂದ್ರ ಸ ರ್ಕಾರದ ಪ್ರವರ್ತಿತ ಯೋಜನೆಗಳ ಡಿಯಲ್ಲಿ ಈ ವಿಮಾ ಸೌಲಭ್ಯ ಜಾರಿಯಾಗಲಿದೆ.
ಪ್ರವರ್ತಿತ ಯೋಜನೆಗಳಿಗೆ ಕೇಂದ್ರ ಸರ್ಕಾರವು ಬಹುಪಾಲು ಹಣ ಒಅದಗಿಸಲಿದ್ದು ಉಳಿದ ಭಾಗಕ್ಕಿಎ ಆಯಾ ರಾಜ್ಯ ಸರ್ಕಾರಗಳು ಹಣ ನೀಡಬೇಕಾಗುವುದು. ಇದರಂತೆ ಈ ಆರೋಗ್ಯ ವಿಮಾ ಯೋಜನೆಯ ಶೇ.60ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದ್ದು ಉಳಿದ ಶೇ.40ರ ಖರ್ಚು ರಾಜ್ಯಗಳ ಪಾಲಿಗೆ ಬರಲಿದೆ.ಈ ವಿಮಾ ಯೋಜನೆ ಜಾರಿಗಾಗಿ ಸರ್ಕಾರ ಟ್ರಸ್ಟ್ ಒಂದನ್ನು ರೂಪಿಸಲಿದ್ದು ಇದರಡಿಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೆ 3ರಿಂದ 5 ಲಕ್ಷ ರೂ. ವಿಮೆ ಸೌಲಭ್ಯ ದೊರೆಯಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com