
ಮುಂಬೈ:ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಮಂಡಿಸಲಿರುವ 2018-19 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕಾರ್ಪೋರೇಟ್ ತೆರಿಗೆ ಶೇಕಡಾ 25 ರಷ್ಟು ಕಡಿತವಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ವೃತ್ತಿಪರ ತೆರಿಗೆದಾರರು.
ಡಿಲೋಯಿಟ್ ಸರ್ವೆ ಪ್ರಕಾರ ವಿವಿಧ ವಲಯದ 120 ವೃತ್ತಿಪರ ತೆರಿಗೆದಾರರಲ್ಲಿ ಶೇಕಡಾ 50 ರಷ್ಟು ಮಂದಿ ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ಪದ್ಧತಿಯಲ್ಲಿ ಸುಧಾರಣೆಯಾಗಲಿದ್ದು, ಈಗಿರುವ ಕಾರ್ಪೋರೇಟ್ ತೆರಿಗೆ ಶೇಕಡಾ 30ರಿಂದ 25 ರಷ್ಟು ಇಳಿಯುವ ಸಾಧ್ಯತೆ ಇದೆ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ.
ಹಣದುಬ್ಬರ ಮತ್ತು ಜೀವನಮಟ್ಟ ಪ್ರಮಾಣ ಹೆಚ್ಚಾಗುತ್ತಿದ್ದು, ಕಪ್ಪು ಹಣ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಂಡಿರುವಂತೆ ತೆರಿಗೆ ದರವೂ ಕಡಿಮೆಯಾಗಬೇಕಿದೆ.
ವೈಯಕ್ತಿಕ ಮಟ್ಟದ ತೆರಿಗೆಯಲ್ಲೂ ಕಡಿಮೆಯಾಗಬೇಕಾದ ಅಗತ್ಯವಿದೆ ಎಂಬಂತಹ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರಸ್ತುತದಲ್ಲಿನ ತೆರಿಗೆ ದರ ದುಬಾರಿ ಎನಿಸಿದ್ದು,ಕನಿಷ್ಠ ಪಕ್ಷ ಶೇಕಡ 5 ರಷ್ಟು ಇಳಿಕೆಯಾಗಬೇಕೆಂಬುದು ಹಲವರ ಅಭಿಪ್ರಾಯವಾಗಿದೆ. ಆರ್ಥಿಕ ಬೆಳವಣಿಗೆ ದರ ಶೇಕಡ 7ಕ್ಕಿಂತಲೂ ಹೆಚ್ಚಾಗಲಿದೆ ಎಂದು ಬಹುತೇಕ ಮಂದಿ ಪ್ರತಿಕ್ರಿಯಿಸಿದ್ದಾರೆ.
Advertisement