ರಕ್ಷಣಾ ಬಜೆಟ್ ಶೇ.7.81 ಕ್ಕೆ ಏರಿಕೆ, ಆದರೆ 1965 ನಂತರ ಮೊದಲ ಬಾರಿಗೆ ಅತ್ಯಂತ ಕಡಿಮೆ!
2018-19 ನೇ ಸಾಲಿನ ಬಜೆಟ್ ನಲ್ಲಿ ರಕ್ಷಣಾ ಬಜೆಟ್ ನ್ನು ಶೇ.7.81 ಕ್ಕೆ ಏರಿಕೆ ಮಾಡಲಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 2,74,114 ಕೋಟಿ ರೂಪಾಯಿಯಷ್ಟಿದ್ದ ಬಜೆಟ್ ಅನುದಾನವನ್ನು 2,95,511 ಕೋಟಿ
ನವದೆಹಲಿ: 2018-19 ನೇ ಸಾಲಿನ ಬಜೆಟ್ ನಲ್ಲಿ ರಕ್ಷಣಾ ಬಜೆಟ್ ನ್ನು ಶೇ.7.81 ಕ್ಕೆ ಏರಿಕೆ ಮಾಡಲಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 2,74,114 ಕೋಟಿ ರೂಪಾಯಿಯಷ್ಟಿದ್ದ ಬಜೆಟ್ ಅನುದಾನವನ್ನು 2,95,511 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
ಈ ಬಾರಿಯ ಬಜೆಟ್ ನಲ್ಲಿ ಜಿಡಿಪಿಯ ಶೇ.1 ರಷ್ಟನ್ನು ಮಾತ್ರ ರಕ್ಷಣಾ ಇಲಾಖೆಗೆ ಮೀಸಲಿಡಲಾಗಿದ್ದು, ಗಡಿಯಲ್ಲಿ ಪಾಕಿಸ್ತಾನ-ಚೀನಾ ಉಪಟಳದ ನಡುವೆಯೂ ರಕ್ಷಣಾ ಇಲಾಖೆಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಲಿದೆ ಎಂಬ ನಿರೀಕ್ಷೆ ಇತ್ತು.
2018-19 ನೇ ಸಾಲಿನ ಜಿಡಿಪಿಯ ಶೇ.1.58 ರಷ್ಟನ್ನು ಮಾತ್ರ ರಕ್ಷಣಾ ವಿಭಾಗಕ್ಕೆ ನೀಡಲಾಗಿದ್ದು, 1962 ರ ಚೀನಾ ಯುದ್ಧದ ವೇಳೆ ನೀಡಲಾಗಿದ್ದಕ್ಕಿಂತಲೂ ಕಡಿಮೆಯಾಗಿದೆ. ಭಾರತೀಯ ಸೇನೆಯ ಬಲವರ್ಧನೆಯ ದೃಷ್ಟಿಯಿಂದ ಕನಿಷ್ಠ ಜಿಡಿಪಿಯ ಶೇ.2.5 ರಷ್ಟನ್ನು ರಕ್ಷಣಾ ಇಲಾಖೆಗೆ ಅನುದಾನ ನೀಡಬೇಕಿತ್ತು ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.