ಸಂಸತ್ ನಲ್ಲಿ ವಿತ್ತ ಸಚಿವ ಪಿಯೂಶ್ ಗೋಯಲ್ ರಿಂದ 2019ನೇ ಸಾಲಿನ ಬಜೆಟ್ ಮಂಡನೆ

ಸಂಸತ್ ನಲ್ಲಿ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು 2019ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಆರಂಭಿಸಿದ್ದು, ಇದು ಅವರ ಚೊಚ್ಚಲ ಬಜೆಟ್ ಮಂಡನೆಯಾಗಿದೆ.
ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವ ಪಿಯೂಶ್ ಗೋಯಲ್
ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವ ಪಿಯೂಶ್ ಗೋಯಲ್
ನವದೆಹಲಿ: ಸಂಸತ್ ನಲ್ಲಿ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು 2019ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಆರಂಭಿಸಿದ್ದು, ಇದು ಅವರ ಚೊಚ್ಚಲ ಬಜೆಟ್ ಮಂಡನೆಯಾಗಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಅನಾರೋಗ್ಯದ ಹಿನ್ನಲೆಯಲ್ಲಿ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಅನುಪಸ್ಥಿತಿಯಲ್ಲಿ ಹಂಗಾಮಿ ವಿತ್ತ ಸಚಿವರಾಗಿ ಜವಾಬ್ದಾರಿ ಸ್ವೀಕರಿಸಿರುವ ಪಿಯೂಶ್ ಗೋಯಲ್ ಅವರು 2019ನೇ ಸಾಲಿನ ಆಯವ್ಯಯ ಮಂಡಿಸುತ್ತಿದ್ದಾರೆ. 
2022ರ ವೇಳೆಗೆ ನವಭಾರತ ನಿರ್ಮಾಣ ಘೋಷ ವಾಕ್ಯದೊಂದಿಗೆ ಬಜೆಟ್ ಮಂಡನೆ ಆರಂಭಿಸಿದ ಗೋಯಲ್ ಅವರು, 5 ವರ್ಷಗಳಲ್ಲಿ ಜಾಗತಿಕವಾಗಿ ಭಾರತ ಪ್ರಕಾಶಿಸುತ್ತಿದೆ. ಹಣದುಬ್ಬರ ದರ ನಿಯಂತ್ರಣ; ಆರ್ಥಿಕವಾಗಿ ಮುನ್ನಡೆಯುತ್ತಿರುವ ಭಾರತ ಜಾಗತಿಕವಾಗಿ 6ನೇ ಸ್ಥಾನದಲ್ಲಿದೆ. ತಮ್ಮ ಸರ್ಕಾರ ರಚನೆಯಾದ ಬಳಿಕ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ(ಎಫ್‌ಡಿಐ) ಹರಿವು ಬರುತ್ತಿದ್ದು, ಜಿಎಸ್‌ಟಿ ಹಾಗೂ ಇತರೆ ತೆರಿಗೆಗಳ ಮೂಲಕ ದೇಶದ ಆದಾಯ ಮೂಲ ಹೆಚ್ಚಳವಾಗಿದೆ ಎಂದು ಹೇಳಿದರು.
ತಾವು 5 ವರ್ಷ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದ್ದು, ಜಾತಿವಾದ, ಭಯೋತ್ಪಾದನೆ ನಿಯಂತ್ರಣದಲ್ಲಿದೆ. ಬಡವರ ಹೊಟ್ಟೆಯ ಮೇಲೆ ಹೊಡೆಯುವ ಹಣದುಬ್ಬರ ಕಣ್ಣಿಗೆ ಕಾಣದ ತೆರಿಗೆ. ಕಳೆದ ಐದು ವರ್ಷಗಳಲ್ಲಿ ಹಣದುಬ್ಬರವನ್ನು ಯಶಸ್ವಿಯಾಗಿ ನಿಯಂತ್ರಣದಲ್ಲಿಟ್ಟಿದ್ದೇವೆ. ಆಯುಷ್ಮಾನ್‌ ಭಾರತ್ ಮೂಲಕ 50 ಕೋಟಿ ಜನರಿಗೆ ಸಹಾಯವಾಗುತ್ತಿದೆ ಎಂದು ಪಿಯೋಷ್ ಗೋಯಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com