ರಾಷ್ಟ್ರೀಯ ಕಾಮಧೇನು ಆಯೋಗ
ರಾಷ್ಟ್ರೀಯ ಕಾಮಧೇನು ಆಯೋಗ

ಗೋವುಗಳ ರಕ್ಷಣೆ: ರಾಷ್ಟ್ರೀಯ ಕಾಮಧೇನು ಆಯೋಗ ಹೇಗೆ ಕಾರ್ಯನಿರ್ವಹಿಸಲಿದೆ ಗೊತ್ತೇ?

ದೇಶದ ಭಾವನಾತ್ಮಕ ವಿಚಾರಗಳಲ್ಲಿ ಗೋ ರಕ್ಷಣೆಯೂ ಒಂದು. ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಸಹ ಗೋ ರಕ್ಷಣೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ವಿಷಯ ಅತಿ ಹೆಚ್ಚು ಚರ್ಚೆಯಾಗಿದೆ.
ನವದೆಹಲಿ: ದೇಶದ ಭಾವನಾತ್ಮಕ ವಿಚಾರಗಳಲ್ಲಿ ಗೋ ರಕ್ಷಣೆಯೂ ಒಂದು. ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಸಹ ಗೋ ರಕ್ಷಣೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ವಿಷಯ ಅತಿ ಹೆಚ್ಚು ಚರ್ಚೆಯಾಗಿದೆ. ಇದಕ್ಕೆಲ್ಲಾ ಉತ್ತರವಾಗಬಹುದಾದ ರೀತಿಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ  ಕಾಮಧೇನು ಆಯೋಗವನ್ನು ಬಜೆಟ್ ನಲ್ಲಿ ಘೋಷಿಸಿದೆ. 
ಗೋ ಮಾತೆಯ ಘನತೆಯನ್ನು ಕಾಪಾಡುವುದರಲ್ಲಿ ನಮ್ಮ ಸರ್ಕಾರ ಎಂದಿಗೂ ಹಿಂದೆ ಬೀಳುವುದಿಲ್ಲ ಎಂದು ಬಜೆಟ್ ಮಂಡನೆ ವೇಳೆ ಹೇಳಿರುವ ಪಿಯೂಷ್ ಗೋಯಲ್, ಗೋವುಗಳ ಕಲ್ಯಾಣಕ್ಕಾಗಿ ರಾಷ್ಟ್ರೀಯ ಕಾಮಧೇನು ಆಯೋಗ ರಚನೆಯನ್ನು ಘೋಷಿಸಿದ್ದಾರೆ. 
ರಾಷ್ಟ್ರೀಯ ಕಾಮಧೇನು ಆಯೋಗ ಗೋವುಗಳಿಗೆ ಸಂಬಂಧಪಟ್ಟ ಕಾನೂನಾತ್ಮಕ ವಿಷಯಗಳ ಬಗ್ಗೆ ಗಮನಹರಿಸಲಿದ್ದು, ಗೋ ಸಾಕಣೆ, ಗೋ ಉತ್ಪನ್ನ, ಸಂಪನ್ಮೂಲ, ಗೋ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಅಷ್ಟೇ ಅಲ್ಲದೇ ಗೋವುಗಳಿಗೆ ಸಂಬಂಧಪಟ್ಟ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಹೊಣೆಗಾರಿಕೆಯೂ ಕಾಮಧೇನು ಆಯೋಗದ್ದೇ ಆಗಿರಲಿದೆ. ರಾಷ್ಟ್ರೀಯ ಗೋಕುಲ್ ಮಿಷನ್ ಗೆ ಕೇಂದ್ರ ಸರ್ಕಾರ ಈ ವರ್ಷದಿಂದಲೇ 750 ಕೋಟಿ ಅನುದಾನ ನೀಡಲಿದೆ. 

Related Stories

No stories found.

Advertisement

X
Kannada Prabha
www.kannadaprabha.com