ನಾಗರಿಕ, ಅಭಿವೃದ್ಧಿ ಸ್ನೇಹಿ ಹಾಗೂ ದೂರದೃಷ್ಟಿಯ ಬಜೆಟ್ - ಪ್ರಧಾನಿ ಮೋದಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್ ನಾಗರಿಕ , ಅಭಿವೃದ್ಧಿ ಸ್ನೇಹಿ ಹಾಗೂ ದೂರದೃಷ್ಟಿಯ ಬಜೆಟ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್ ನಾಗರಿಕ , ಅಭಿವೃದ್ಧಿ ಸ್ನೇಹಿ ಹಾಗೂ ದೂರದೃಷ್ಟಿಯ ಬಜೆಟ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಬಡವರ ಸಬಲೀಕರಣ ಹಾಗೂ ಯುವಕರಿಗೆ ಉತ್ತಮ ಭವಿಷ್ಯವನ್ನು ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.
ಹಸಿರು ಬಜೆಟ್ ಎಂದು ವರ್ಣಿಸಿದ ಪ್ರಧಾನಿ ಮೋದಿ, ಪರಿಸರ ಹಾಗೂ ಶುದ್ಧ ಇಂಧನದ ಬಗ್ಗೆ ಗಮನ ಹರಿಸಿದೆ. ಸರ್ಕಾರದ ನೀತಿಗಳು ದೀನ ದಲಿತರಿಗೆ ಅಧಿಕಾರವನ್ನು ನೀಡಲಿದ್ದು, ದೇಶದ ಅಭಿವೃದ್ಧಿಗೆ ಅವರನ್ನು ಶಕ್ತಿಯ ಕೇಂದ್ರಗಳಾಗಿ ಪರವರ್ತಿಸಲಿವೆ ಎಂದರು.
ಬಜೆಟ್ ಕೃಷಿ ಕ್ಷೇತ್ರದಲ್ಲಿ ರಚನಾತ್ಮಕ ಸುಧಾರಣೆಗೆ ಒತ್ತು ನೀಡಿದೆ. ಕೃಷಿ ಕ್ಷೇತ್ರದ ಪರಿವರ್ತನೆ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾರ್ಗಸೂಚಿಯನ್ನು ಹೊಂದಿದೆ ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟರು.