• Tag results for ಪ್ರತಿಕ್ರಿಯೆ

ಭಾರತದ ಪ್ರತಿದಾಳಿಗೆ 11 ಪಾಕಿ ಸೈನಿಕರು ಸಾವು, 16 ಮಂದಿಗೆ ತೀವ್ರ ಗಾಯ!

ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಪುಂಡಾಟಕ್ಕೆ ಭಾರತೀಯ ಸೇನೆ ನಡೆಸಿದ ಪ್ರತಿದಾಳಿಗೆ 11 ಪಾಕಿ ಸೈನಿಕರು ಸಾವನ್ನಪ್ಪಿದ್ದು 16 ಮಂದಿಗೆ ತೀವ್ರ ಗಾಯಗಳಾಗಿವೆ ಎಂದು ಸೇನಾಪಡೆಯ ಮೂಲಗಳು ತಿಳಿಸಿವೆ.

published on : 14th November 2020

ಇಂಡೋ-ಯುಎಸ್ ಒಪ್ಪಂದಗಳಿಗೆ ಬಲವಾದ ದ್ವಿಪಕ್ಷೀಯ ಬೆಂಬಲವಿದೆ: ಬೈಡನ್ ಗೆಲುವಿನ ಸನಿಹದಲ್ಲಿರುವಂತೆ ಭಾರತದ ಪ್ರತಿಕ್ರಿಯೆ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕಾಗಿ ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿರುವಂತೆಯೇ ಉಭಯ ದೇಶಗಳ ನಡುವಿನ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆಗೆ ಅಮೆರಿಕದಲ್ಲಿ ಬಲವಾದ ದ್ವಿಪಕ್ಷೀಯ ಬೆಂಬಲವಿದೆ.

published on : 7th November 2020

ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ, ಕೊನೆಯುಸಿರಿರುವವರೆಗೂ ಕನ್ನಡ ಪರ ನಿಲ್ಲುತೇವೆ: ದರ್ಶನ್

ಕನ್ನಡದ ಹಲವಾರು ಕಲಾವಿದರು ಈಗಾಗಲೇ ಹಿಂದಿ ದಿವಸ್ ಆಚರಣೆಗೆ, ಹಿಂದಿ ಹೇರಿಕೆ ವಿರುದ್ಧ ಮಾತನಾಡಿದ್ದರು. ಈಗ 'ಚಾಲೆಂಜಿಂಗ್ ಸ್ಟಾರ್‌' ದರ್ಶನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

published on : 16th September 2020

ಡ್ರಗ್ಸ್ ಮಾಫಿಯಾ ತನಿಖೆಯ ಹಾದಿತಪ್ಪಬಾರದು: ಹೆಚ್.ಡಿ.ಕುಮಾರಸ್ವಾಮಿ

ಡ್ರಗ್ಸ್ ದಂಧೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ತನಿಖೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ ನಡೆದುಕೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

published on : 13th September 2020

"ಒಂದು ಯುಗದ ಅಂತ್ಯ" ಧೋನಿ ನಿವೃತ್ತಿ ಬಗ್ಗೆ ಸೌರವ್ ಗಂಗೂಲಿ ಪ್ರತಿಕ್ರಿಯೆ  

ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ  ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್  ಗಂಗೂಲಿ,ಯುಗದ ಅಂತ್ಯ ಎಂದು ಕರೆದಿದ್ದಾರೆ.ಒಂದು ಯುಗವು ಅಂತ್ಯಗೊಂಡಿದೆ" ಎಂದು ಗಂಗೂಲಿ  ಶನಿವಾರ ಹೇಳಿಕೆ ನೀಡಿದ್ದಾರೆ.

published on : 16th August 2020

ಭಾರತ ಕ್ರಿಕೆಟ್ ಗೆ ಧೋನಿ ನೀಡಿದ ಕೊಡುಗೆ ಮರೆಯಲಾಗದು: ಸಚಿನ್  

ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಸ್ವಾತಂತ್ರ್ಯ ದಿನದಂದು ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ದಂತಕಥೆ ಮತ್ತು ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಕ್ರಿಕೆಟ್‌ಗೆ ಧೋನಿ ನೀಡಿದ ಕೊಡುಗೆ ಮರೆಯಲಾಗದು ಎಂದು ಹೇಳಿದ್ದಾರೆ.

published on : 15th August 2020

ಸಿಇಟಿ ಪರೀಕ್ಷೆ ಸುಖಾಂತ್ಯ: ಕೋವಿಡ್ ಆತಂಕದ ನಡುವೆಯೂ ಅತ್ಯುತ್ತಮ ಹಾಜರಾತಿ-ಡಾ.ಸಿ.ಎನ್.ಅಶ್ವತ್ಥನಾರಾಯಣ 

ಎರಡನೇ ದಿನವೂ ರಾಜ್ಯದ 497 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು,  ಒಂದು ಸಣ್ಣ ಸಮಸ್ಯೆ ಹಾಗೂ ಲೋಪದೋಷವೂ ಇಲ್ಲದೆ ಸಮಾಪ್ತಿಯಾಗಿದೆ.ಕೋವಿಡ್ ಪಾಸಿಟಿವ್ ಇದ್ದ 63 ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆದಿದ್ದಾರೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

published on : 31st July 2020

ಶಾಂತಿ ಮಾತುಕತೆ ಸಂದರ್ಭದಲ್ಲಿ ಆಕ್ರಮಣಕಾರಿ ವರ್ತನೆ ಸಲ್ಲದು: ಪ್ರಧಾನಿ ಮೋದಿ ಲಡಾಖ್ ಭೇಟಿ ಬಗ್ಗೆ ಚೀನಾ ಪ್ರತಿಕ್ರಿಯೆ 

ಪ್ರಧಾನಿ ನರೇಂದ್ರ ಮೋದಿ ಅವರ ಹಠಾತ್  ಲಡಾಖ್ ಭೇಟಿ ಕುರಿತಂತೆ ಪ್ರತಿಕ್ರಿಯಿಸಿರುವ ಚೀನಾ, ಗಡಿ ಘರ್ಷಣೆ ಹಾಗೂ ಗಡಿ ತಕರಾರಿನ ಕುರಿತು ಭಾರತದೊಂದಿಗೆ ಶಾಂತಿಯುತ ಮಾತುಕತೆಗಳು ಮುಂದುವರೆದಿವೆ ಎಂದು ಹೇಳಿದೆ.

published on : 3rd July 2020

ಟಿಕೆಟ್ ಸಿಕ್ಕಿದ ಖುಷಿಯಲ್ಲಿ ಆರ್. ಶಂಕರ್ ಕಣ್ಣೀರು: ಎಚ್.ವಿಶ್ವನಾಥ್ ಅಳಲು ಕೇಳೋರು ಯಾರು?

ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್‌ ಸಿಗುತ್ತಿದ್ದಂತೆ ಮಾಜಿ ಸಚಿವ ಆರ್. ಶಂಕರ್ ಗಳಗಳನೆ ಕಣ್ಣೀರು ಹಾಕಿದ್ದಾರೆ. ಸಂತೋಷದಿಂದ ಕಣ್ಣೀರು ಹಾಕಿದ ಅವರು ಕ್ಷೇತ್ರದ ಜನರನ್ನು ನೆನಪಿಸಿಕೊಂಡರು. ತಮ್ಮನ್ನು ಪಕ್ಷೇತರ ಶಾಸಕನಾಗಿ ಗೆಲ್ಲಿಸಿದ್ದ ಜನರಿಗೆ ಕೃತಜ್ಞನಾಗಿದ್ದೇನೆ. ಮತ್ತೆ ಅವರ ಸೇವೆ ಮಾಡಲು ಅವಕಾಶ ಸಿಕ್ಕಿದೆ.

published on : 18th June 2020

'ವೀರ ಸೈನಿಕರ ತ್ಯಾಗ ವ್ಯರ್ಥವಾಗಬಾರದು; ಆಳುವವರ ಮೌನ ಜನದ್ರೋಹ ಮಾತ್ರವಲ್ಲ, ದೇಶದ್ರೋಹವೂ ಹೌದು'

ದೇಶಕ್ಕಾಗಿ ಬೆವರು - ರಕ್ತ ಹರಿಸಿದ ನಾಯಕರ ಪಕ್ಷವಾದ ಕಾಂಗ್ರೆಸ್ ಪಕ್ಷ ಭಾರತದ ಏಕತೆ , ಅಖಂಡತೆ ಮತ್ತು ಸಾರ್ವಭೌಮತೆಗೆ ಸದಾ ಬದ್ಧವಾಗಿದ್ದು, ವೀರ ಸೈನಿಕರ ಬಲಿದಾನ ವ್ಯರ್ಥವಾಗಬಾರದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ

published on : 17th June 2020

ತೊಂದರೆ ಕೊಡಬೇಡಿ; ಏಕಪಕ್ಷೀಯ ಕ್ರಮ ಸರಿಯಲ್ಲ: ಭಾರತಕ್ಕೆ ಚೀನಾ ಎಚ್ಚರಿಕೆ

ಪೂರ್ವ ಲಡಾಕ್ ನಲ್ಲಿ ನಿನ್ನೆ ರಾತ್ರಿ ಕರ್ನಲ್ ಸೇರಿದಂತೆ ಮೂವರು ಭಾರತೀಯ ಯೋಧರನ್ನು ಹತ್ಯೆಗೈದ ಬಳಿಕ, ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳದಂತೆ ಅಥವಾ ತೊಂದರೆ ಕೊಡದಂತೆ  ಚೀನಾ ವಿದೇಶಾಂಗ ಸಚಿವಾಲಯ ಭಾರತಕ್ಕೆ ಎಚ್ಚರಿಕೆ ನೀಡಿದೆ.

published on : 16th June 2020

ಲಾಕ್ ಡೌನ್ ಮುಂದುವರಿಕೆ ಕುರಿತ ವರದಿಗಳು ಕಪೋಲಕಲ್ಪಿತ: ಕೇಂದ್ರ ಗೃಹಸಚಿವಾಲಯ

ಮೇ 31ಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ದೇಶಾದಾದ್ಯಂತ ಜಾರಿಗೊಳಿಸಿದ ಲಾಕ್‌ಡೌನ್ ಐದನೇ ಅವಧಿಗೂ ವಿಸ್ತರಿಸುವುದೆಂಬ ವರದಿಗಳನ್ನು ನಿರಾಕರಿಸಿರುವ ಗೃಹ ವ್ಯವಹಾರಗಳ ಸಚಿವಾಲಯ ಇದು ಸಂಪೂರ್ಣ ಸುಳ್ಳು ಎಂದು ಹೇಳಿದೆ

published on : 28th May 2020

ಆತ್ಮ ನಿರ್ಭರ್ ಭಾರತ್ ” ಪ್ಯಾಕೇಜ್‍ನ ಐದನೇ ಹಂತ ಆರ್ಥಿಕ ಸುಧಾರಣೆಗೆ ಒತ್ತು-ಯಡಿಯೂರಪ್ಪ

ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್‍ನ 5 ನೇ ದಿನದ ಘೋಷಣೆಗಳು, ಕಾರ್ಮಿಕರಿಗೆ ಉದ್ಯೋಗ ಸೃಜನೆ, ಆರೋಗ್ಯ, ಶಿಕ್ಷಣ ಕ್ಷೇತ್ರದ ಸುಧಾರಣೆಗಳು, ಕೈಗಾರಿಕೆ ವಲಯದ ಕಾನೂನು ಸುಧಾರಣೆ ಹಾಗೂ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿಪ್ರಾಯ ಪಟ್ಟಿದ್ದಾರೆ. 

published on : 17th May 2020

ನ್ಯಾಯಸಮ್ಮತವಾಗಿ ಮೈಮುಲ್ ಹುದ್ದೆಗಳ ನೇಮಕವಾಗಲಿ: ಸಾ.ರಾ. ಮಹೇಶ್ ಆರೋಪಕ್ಕೆ ಜಿಟಿಡಿ ಪ್ರತಿಕ್ರಿಯೆ

ಮೈಮುಲ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸಾ. ರಾ ಮಹೇಶ್ ಅವರೇ ಪ್ರಯತ್ನಿಸಿದ್ದರು. ಹುದ್ದೆಗಳ ನೇಮಕಾತಿ ವೇಳೆ ಜನಪ್ರತಿನಿಧಿಗಳ ಮೇಲೆ ಒತ್ತಡಗಳು ಬರುವುದು ಸರ್ವೇ ಸಾಮಾನ್ಯ. ಆದರೂ ನ್ಯಾಯಸಮ್ಮತವಾಗಿ ಹುದ್ದೆಗಳ ನೇಮಕಾತಿ ಮಾಡಬೇಕು

published on : 16th May 2020

ರೈತ, ದಿನಗೂಲಿಗಳಿಗೆ ವಿಶೇಷ ಪ್ಯಾಕೇಜ್ ಇಲ್ಲದಿರುವುದು ನಿರಾಸೆ: ಸಿದ್ದರಾಮಯ್ಯ

ಕೊರೋನ ಸಂಕಷ್ಟ ನಿವಾರಣೆಗಾಗಿ ಮೇ. 3 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಸಂಕಷ್ಟದಲ್ಲಿರುವ ರೈತ ವರ್ಗ ಮತ್ತು ದಿನಗೂಲಿ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡದಿರುವುದು ನಿರಾಸೆ ತಂದಿದೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

published on : 14th April 2020
1 2 3 4 >