ಮಗನ ವಿರುದ್ಧ ಯುವತಿ ವಂಚನೆ ಕೇಸ್: ಬಳ್ಳಾರಿ ಸಂಸದ ದೇವೇಂದ್ರಪ್ಪ ಹೇಳಿದ್ದೇನು?

ಬಳ್ಳಾರಿ ಸಂಸದ ದೇವೇಂದ್ರಪ್ಪ  ಅವರ ಪುತ್ರ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಪ್ರೊ. ರಂಗನಾಥ್‌  ಅವರ ವಿರುದ್ಧ ಯುವತಿಗೆ ವಂಚನೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಸಂಸದ ದೇವೇಂದ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ದೇವೇಂದ್ರಪ್ಪ
ದೇವೇಂದ್ರಪ್ಪ

ದಾವಣಗೆರೆ: ಬಳ್ಳಾರಿ ಸಂಸದ ದೇವೇಂದ್ರಪ್ಪ  ಅವರ ಪುತ್ರ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಪ್ರೊ. ರಂಗನಾಥ್‌  ಅವರ ವಿರುದ್ಧ ಯುವತಿಗೆ ವಂಚನೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಸಂಸದ ದೇವೇಂದ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಆ ಯುವತಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾಳೆ. ನನ್ನ ಮಗ ಸಾಕಷ್ಟು ಹಣ ಕಳೆದುಕೊಂಡಿದ್ದಾನೆ ಎಂದು ಪ್ರಕರಣದ ಬಗ್ಗೆ ಸಂಸದ ಆರ್‌ ದೇವೇಂದ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಹರಪನಹಳ್ಳಿ ತಾಲೂಕಿನ ಅರಸಿಕೆರೆ ನಿವಾಸದಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಸಮಿತಿ ಸಭೆಗಾಗಿ ಕಾರಿನಲ್ಲಿ ಹೋಗುವಾಗ ಯುವತಿಯ ಕರೆ ಬಂದಿತ್ತು.

ನಿಮ್ಮ ಮಗ ಮದುವೆ ಆಗುತ್ತೇನೆ ಎಂದು ಹೇಳಿ ಒಂದೂವರೆ ವರ್ಷದಿಂದ ವಂಚನೆ ಮಾಡಿದ್ದಾನೆ. ನೀವು ದೊಡ್ಡವರು ಅಂತ ಕರೆ ಮಾಡಿದ್ದೇನೆ ಎಂದಳು. ನಾನು ಕಾನೂನು ಪ್ರಕಾರ ಹೋಗು ಅಂತ ಹೇಳಿದ್ದೇನೆ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆ, ಭರಮಸಾಗರ ಸಮೀಪದ ಕೊಳಹಾಳ್ ಗ್ರಾಮದ ಕಲ್ಲೇಶ್ ಎಂಬಾತನ ಮೂಲಕ ಈ ಯುವತಿ ರಂಗನಾಥ್‌ಗೆ ಪರಿಚಯವಾಗಿದ್ದಾಳೆ. ಇದೊಂದು ಬ್ಲ್ಯಾಕ್‌ಮೇಲಿಂಗ್‌ ಟೀಮ್‌ ಅನಿಸುತ್ತದೆ. ಕಲ್ಲೇಶ್ ಅಂಡ್ ಟೀಂ ಮಾಡಿರಬಹುದು ಅಂತ ಅನುಮಾನ ಇದೆ ಎಂದು ದೇವೇಂದ್ರಪ್ಪ ಹೇಳಿದ್ದಾರೆ.

ಆ ಯುವತಿ ಬ್ಲಾಕ್ ಮೇಲ್ ಮಾಡ್ತಿದ್ದಾಳೆ. ಚೈನು, ಉಂಗುರ ಎಲ್ಲ‌ ಕಳೆದುಕೊಂಡಿದ್ದೇನೆ ಎಂದು ಮಗ ಹೇಳಿದ್ದಾನೆ. ನನ್ನ ಮಗನಿಗೆ ಮದ್ವೆ ಮಾಡಿ 10-12 ವರ್ಷ ಆಯ್ತು. ಮಗ-ಸೊಸೆ ಚನ್ನಾಗಿದ್ದಾರೆ ಎಂದು ಹೇಳಿರುವ ದೇವೇಂದ್ರಪ್ಪ, ಕಾನೂನು ಪ್ರಕಾರ ಎಲ್ಲರೂ ಒಂದೇ, ಹೆಣ್ಣು, ಗಂಡು ಎರಡೂ ಒಂದೇ ಎಂದರು. ಈ ಪ್ರಕರಣದಲ್ಲಿ ರಾಜಕಾರಣ ಕೂಡ ಮಿಕ್ಸ್ ಆದ ಹಾಗೆ ಕಾಣಿಸುತ್ತಿದೆ. ಯಾರೋ ಬೇಕು ಅಂತ ಪ್ಲಾನ್ ಮಾಡಿ ಟ್ರಾಪ್ ಮಾಡಿದ್ದಾರೆ ಎಂದು ದೇವೇಂದ್ರಪ್ಪ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com