• Tag results for ಬಳ್ಳಾರಿ

ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ ಶೈಲಿಯಲ್ಲಿ ನೂತನ ಆಡಳಿತ ಕಟ್ಟಡ ನಿರ್ಮಾಣ!

ರಾಜ್ಯದ 31 ನೇ ಜಿಲ್ಲೆಯಾಗಿರುವ ವಿಜಯನಗರದ ಹೊಸ ಆಡಳಿತ ಕಟ್ಟಡ, ವಿಜಯನಗರ ರಾಜವಂಶಸ್ಥರ ವಾಸ್ತುಶಿಲ್ಪದ ಶೈಲಿಯಲ್ಲಿ ಇರಲಿದೆ. ಜಿಲ್ಲಾಧಿಕಾರಿ, ಎಸ್ ಪಿ, ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಕಚೇರಿಯನ್ನು ಒಂದೇ ಕಡೆ ನಿರ್ಮಾಣ ಮಾಡಲಾಗುತ್ತಿದೆ. 

published on : 18th February 2021

ಹಂಪಿಯಲ್ಲಿ ಮಾರ್ಗಸೂಚನಾ ಫಲಕ ಹಾಕದೆ ಅಧಿಕಾರಿಗಳ ನಿರ್ಲಕ್ಷ್ಯ: ದಾರಿ ಕಂಡುಕೊಳ್ಳಲು ಪ್ರವಾಸಿಗರಿಗೆ ತ್ರಾಸ!

ಮಾರ್ಗಸೂಚನಾ ಫಲಕ ಹಾಕದೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಹಂಪಿಗೆ ತೆರಳುವ ಪ್ರವಾಸಿಗರು ಗೊಂದಲಕ್ಕೆ ಸಿಲುಕುವಂತೆ ಮಾಡಿದೆ.

published on : 8th February 2021

ಫೆಬ್ರವರಿ 5ಕ್ಕೆ ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆ?

ವಿಜಯನಗರ ಜಿಲ್ಲೆ ಘೋಷಣೆ ಈಗಾಗಲೇ ಆಗಿದ್ದು, ಫೆಬ್ರವರಿ 5 ರಂದು ಅಂತಿಮ ಅಧಿಸೂಚನೆ ಹೊರಬೀಳಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

published on : 31st January 2021

ಬಳ್ಳಾರಿ: ಉಪವಲಯ ಅರಣ್ಯಾಧಿಕಾರಿ ನೇಣಿಗೆ ಶರಣು!

ಗಣಿನಾಡು ಬಳ್ಳಾರಿಯ ಉಪವಲಯ ಅರಣ್ಯಾಧಿಕಾರಿಯೊಬ್ಬರು ತಮ್ಮ ಬಾಡಿಗೆ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

published on : 5th January 2021

ಬಳ್ಳಾರಿ: ಎತ್ತಿನ ಬಂಡಿಗೆ ಬೈಕ್ ಡಿಕ್ಕಿ, ನವ ದಂಪತಿ‌ ಸಾವು

ಎತ್ತಿನ ಗಾಡಿಗೆ ಬೈಕ್ ವೊಂದು ಡಿಕ್ಕಿಯಾದ ಪರಿಣಾಮ ದಂಪತಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಬೆನಕನಹಳ್ಳಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.

published on : 4th January 2021

ಚರ್ಚಿನ ಪಾದ್ರಿಯನ್ನೇ ಪ್ರೀತಿಸಿ ಎಂಜಿನಿಯರಿಂಗ್ ಪದವೀಧರೆ ವಿವಾಹ, ಪೋಷಕರಿಂದ ನಾಪತ್ತೆ ಪ್ರಕರಣ ದಾಖಲು!

ಎಂಜಿನಿಯರಿಂಗ್ ಪದವೀಧರೆಯಾಗಿದ್ದ ಯುವತಿಯೊಬ್ಬಳು ಚರ್ಚ್‌ನ 54 ವರ್ಷದ ಪಾದ್ರಿಯೊಬ್ಬರೊಡನೆ ವಿವಾಹವಾಗಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದು ಈ ಸಂಬಂಧ ಯುವತಿಯ ಪೋಷಕರು "ಮಗಳ ನಾಪತ್ತೆ" ಪ್ರಕರಣ ದಾಖಲಿಸಿದ್ದಾರೆ. 

published on : 31st December 2020

ಬಳ್ಳಾರಿಗೆ ಅಮಿತ್ ಶಾ ಭೇಟಿ: ವಿಜಯನಗರ ಜಿಲ್ಲೆ ಘೋಷಣೆ ಸಾಧ್ಯತೆ

ಕೇಂದ್ರ ಗೃಹಸಚಿವ ಅಮಿತ್ ಶಾ ಎರಡು ದಿನಗಳ ಭೇಟಿಗಾಗಿ ಜನವರಿ ಮೂರನೇ ವಾರದಲ್ಲಿ ಕರ್ನಾಟಕಕ್ಕೆ ಬರಲಿದ್ದಾರೆ. ಈ ವೇಳೆ ಪ್ರಸಿದ್ಧ ಪ್ರವಾಸಿ ತಾಣ ಹಂಪಿಗೂ ಭೇಟಿ ನೀಡುವ ಸಾಧ್ಯತೆಯಿದ್ದು, ಅಗತ್ಯ ಭದ್ರತೆ ವ್ಯವಸ್ಥೆ ಶೀಘ್ರವೇ ಮಾಡಲಾಗುವುದು

published on : 26th December 2020

ಬಳ್ಳಾರಿ ವಿಭಜನೆ ತಂತ್ರ: ಆಂಧ್ರಪ್ರದೇಶದ ರಾಜಕೀಯ ಪಕ್ಷಗಳಿಗೆ ರಹದಾರಿ

ಬಳ್ಳಾರಿ ಜಿಲ್ಲೆಯನ್ನು ಎರಡು ಸಣ್ಣ ಭಾಗವಾಗಿ ವಿಭಜಿಸುವುದರಿಂದ ಆಡಳಿತವನ್ನು ಸುಗಮಗೊಳಿಸಬಹುದು ಎಂಬ ಆಲೋಚನೆಯಿದ್ದು ಅದರಿಂದ ಹಲವಾರು ಪ್ರಯೋಜನಗಳಿವೆ ಎಂಬುದನ್ನು ವಕೀಲರು ತಿಳಿಸುತ್ತಾರೆ.

published on : 22nd December 2020

ಮೈಲಾರ ಲಿಂಗೇಶ್ವರನಿಗೆ ಬೆಳ್ಳಿಯ ಹೆಲಿಕಾಪ್ಟರ್ ಹರಕೆ ಒಪ್ಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಜಿಲ್ಲೆಯ ಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.

published on : 18th December 2020

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಖಾಸಗಿ ಕಾರ್ಯದರ್ಶಿಯಾಗಿ ಬಳ್ಳಾರಿ ಜಿಲ್ಲಾಧಿಕಾರಿ ನಕುಲ್ ನೇಮಕ

ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಎಸ್.ಎಸ್.ನಕುಲ್ ಅವರನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

published on : 17th December 2020

ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣ; ಸ್ಥಳೀಯ ಪ್ರತಿಭೆಗಳಿಗೆ ಸಹಾಯ

ಗಣಿ ನಾಡು ಬಳ್ಳಾರಿಯಲ್ಲಿ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣವಾಗಲಿದ್ದು, ಇದರಿಂದ ಸ್ಥಳೀಯ ಕ್ರಿಕೆಟ್ ಪ್ರತಿಭೆಗಳಿಗೆ ನೆರವಾಗಲಿದೆ.

published on : 12th December 2020

ಬಳ್ಳಾರಿಯ ಮಡೆರೆ ಗ್ರಾಮಸ್ಥರ ಪಾಡು ಕೇಳುವವರಿಲ್ಲ: ಮೃತರ ಶವಸಂಸ್ಕಾರ ಮಾಡಲು ಹೊಳೆ ದಾಟಿ ಹೋಗಬೇಕು!

ಜಿಲ್ಲೆಯ ಕುರುಗೋಡು ತಾಲ್ಲೂಕಿನ ಮಡೆರೆ ಗ್ರಾಮದಲ್ಲಿ ಯಾರಾದರೂ ತೀರಿಹೋದರೆ ಮನೆಯವರಿಗೆ ತಮ್ಮವರನ್ನು ಕಳೆದುಕೊಂಡ ದುಃಖ ಮಾತ್ರವಲ್ಲದೆ ಶವವನ್ನು ಅಂತ್ಯ ಸಂಸ್ಕಾರಕ್ಕೆ ಸಾಗಿಸಲು ವಿಪರೀತ ಕಷ್ಟಪಡಬೇಕಾಗುತ್ತದೆ.

published on : 12th December 2020

ಖ್ಯಾತ ಹೃದಯ ತಜ್ಞ ಡಾ. ಬಿ.ಕೆ. ಶ್ರೀನಿವಾಸಮೂರ್ತಿ ವಿಧಿವಶ

ಖ್ಯಾತ ಹೃದಯ ತಜ್ಞರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಡಾ. ಬಿ.ಕೆ. ಶ್ರೀನಿವಾಸಮೂರ್ತಿ (80) ಇಂದು ನಿಧನರಾದರು.

published on : 3rd December 2020

ರೈತರ 'ದೆಹಲಿ ಚಲೋ' ಪ್ರತಿಭಟನೆಗೆ ಬೆಂಬಲ; ಹೊಸಪೇಟೆ-ಬಳ್ಳಾರಿ‌ ಹೆದ್ದಾರಿಯಲ್ಲಿ‌ ರಸ್ತೆ ತಡೆದು ಪ್ರತಿಭಟನೆ

ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಹಾಗೂ ನವದೆಹಲಿಯಲ್ಲಿ ರೈತರು ನಡೆಸುತ್ತಿರುವ ಧರಣಿಯನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು‌ ಸೇನೆಯ ಕಾರ್ಯಕರ್ತರು ಹೊಸಪೇಟೆ-ಬಳ್ಳಾರಿ‌ ಹೆದ್ದಾರಿಯಲ್ಲಿ‌ ರಸ್ತೆತಡೆದು ಬುಧವಾರ ಪ್ರತಿಭಟನೆ ನಡೆಸಿದರು.

published on : 2nd December 2020

ಬಳ್ಳಾರಿ: ಮಣ್ಣಿನ ಗೋಡೆ ಕುಸಿದು ದಂಪತಿ ಸಾವು

ಜಿಟಿ ಜಿಟಿ ಮಳೆಗೆ ಮಣ್ಣಿನ ಗೋಡೆ ಕುಸಿದ ಪರಿಣಾಮ ದಂಪತಿ ಮೃತಪಟ್ಟಿರುವ ದಾರುಣ ಘಟನೆ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದ ಅದೋನಿ ಸ್ಟ್ರೀಟ್ ನಲ್ಲಿ ಸಂಭವಿಸಿದೆ. 

published on : 1st December 2020
1 2 3 >