ನವದೆಹಲಿ; ಪ್ರಧಾನ ಮಂತ್ರಿ ಕರಮ್ ಯೋಗಿ ಮನ್ ಧನ್ ಯೋಜನೆಯಡಿ ವಾರ್ಷಿಕ ಒಂದೂವರೆ ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇಂದು ಲೋಕಸಭೆಯಲ್ಲಿ ವಿತ್ತೀಯ ಬಜೆಟ್ ಮಂಡಿಸಿದ ಅವರು, ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರಿಗೆ ಪ್ರಧಾನ ಮಂತ್ರಿ ಕರಮ್ ಯೋಗಿ ಮನ್ ಧನ್ ಯೋಜನೆಯಡಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದು.
ಎಲ್ಲಾ ಜಿಎಸ್ ಟಿ ದಾಖಲಾತಿ ಹೊಂದಿದ ಮಧ್ಯಮ ಗಾತ್ರದ ಚಿಲ್ಲರೆ ವ್ಯಾಪಾರದಾರರಿಗೆ ಶೇಕಡಾ 2ರಷ್ಟು ಬಡ್ಡಿ ದರದಲ್ಲಿ ರಿಯಾಯಿತಿಗೆ 350 ಕೋಟಿ ಅನುದಾನ ನೀಡಲಾಗುವುದು ಎಂದು ಹೇಳಿದರು.