ಕೇಂದ್ರ ಬಜೆಟ್ 2019: ಮುದ್ರಾ ಯೋಜನೆಯಡಿ 7 ಲಕ್ಷ ಕೋಟಿ ರೂ. ಮೊತ್ತದ ಸಾಲ!

ಮುದ್ರಾ ಯೋಜನೆಯಡಿ 7,23,000 ಕೋಟಿ ರೂಪಾಯಿಯ 15.56 ಕೋಟಿ ಸಾಲ ನೀಡಲಾಗಿದೆ ಎಂದು ಸರ್ಕಾರ ಶುಕ್ರವಾರ ಘೋಷಿಸಿದೆ.
ಪಿಯೂಶ್ ಗೋಯಲ್
ಪಿಯೂಶ್ ಗೋಯಲ್
ನವದೆಹಲಿ: ಮುದ್ರಾ ಯೋಜನೆಯಡಿ 7,23,000 ಕೋಟಿ ರೂಪಾಯಿಯ 15.56 ಕೋಟಿ ಸಾಲ ನೀಡಲಾಗಿದೆ ಎಂದು ಸರ್ಕಾರ ಶುಕ್ರವಾರ ಘೋಷಿಸಿದೆ.
ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮೂಲಕ ಒಂದು ಕೋಟಿಗೂ ಅಧಿಕ ಯುವಕರಿಗೆ ತರಬೇತಿ ನೀಡಲಾಗಿದ್ದು, ಈ ಮೂಲಕ ಅವರು ತಮ್ಮ ಜೀವನೋಪಾಯ ಕಂಡುಕೊಳ್ಳಲು ಸಾಧ್ಯವಾಗಿದೆ. ಮುದ್ರಾ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟಾಂಡ್ ಅಪ್ ಇಂಡಿಯಾ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಸ್ವ ಉದ್ಯೋಗ ನಡೆಸುವ ಮೂಲಕ ಯುವ ಶಕ್ತಿಯ ಸಾಮರ್ಥ್ಯದ ಸಮರ್ಥ ಸಾಧ್ಯವಾಗಿದೆ ಎಂದು ಹಣಕಾಸು ಸಚಿವ ಪಿಯೂಷ್ ಗೋಯಲ್ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.
ಉದ್ಯೋಗ ಕೋರುವವರು ಇದೀಗ ಉದ್ಯೋಗ ನೀಡುವವರಾಗುತ್ತಿದ್ದು, ಭಾರತ ವಿಶ್ವದ ಎರಡನೇ ಅತಿ ದೊಡ್ಡ ಸ್ಟಾರ್ಟ್ ಅಪ್‌ ತಾಣವಾಗಿದೆ. ದೇಶದ ಯುವಕರ ಪರಿಶ್ರಮ ಮತ್ತು ನಾವಿನ್ಯ ಪರಿಕಲ್ಪನೆಗೆ ಸರ್ಕಾರ ಹೆಮ್ಮೆಪಡುತ್ತದೆ ಎಂದರು.
ಕೃತಕ ಬುದ್ಧಿಮತ್ತೆ ಮತ್ತು ಸಂಬಂಧಿತ ತಂತ್ರಜ್ಞಾನಗಳ ಮೂಲಕ “ಕೃತಕ ಬುದ್ಧಿಮತ್ತೆ ಆಧರಿತ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಿದೆ.
ಶ್ರೇಷ್ಠತಾ ಕೇಂದ್ರಗಳ ಜೊತೆಗೆ ಕೃತಕ ಬುದ್ಧಿಮತ್ತೆ ಕುರಿತ ರಾಷ್ಟ್ರೀಯ ಕೇಂದ್ರ ಸ್ಥಾಪಿಸುವ ಮೂಲಕ ಇದಕ್ಕೆ ಚುರುಕು ನೀಡಲಾಗುವುದು. ಇದಕ್ಕಾಗಿ 9 ಆದ್ಯತಾ ವಲಯಗಳನ್ನೂ ಗುರುತಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸಾಮಾಜಿಕ ತಾಣ ಕೂಡ ಶೀಘ್ರವೇ ರೂಪಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com