ಪ್ರಧಾನಿ ಮೋದಿ 2.0 ಸರ್ಕಾರದ ಬಜೆಟ್‌ನಲ್ಲಿ ಕೃಷಿಗರಿಗೆ ಸಿಕ್ಕಿದ್ದೇನು?

ಪ್ರಧಾನಿ ಮೋದಿ ನೇತೃತ್ವದ ನೂತನ ಕೇಂದ್ರ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದ್ದು ಇದರಲ್ಲಿ ಕೃಷಿಕರಿಗೆ ಏನೆಲ್ಲಾ ಸಿಕ್ಕಿದೆ.
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ನೂತನ ಕೇಂದ್ರ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದ್ದು ಇದರಲ್ಲಿ ಕೃಷಿಕರಿಗೆ ಏನೆಲ್ಲಾ ಸಿಕ್ಕಿದೆ.
ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ ನಲ್ಲಿ 2019-20ರ ಸಾಲಿನ ಹಣಕಾಸು ಬಜೆಟ್ ಮಂಡನೆ ಮಾಡಿದರು. 
ಬಜೆಟ್ ನಲ್ಲಿ ಕೃಷಿಕರಿಗೆ ಸಿಕ್ಕಿದ್ದು
* ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ. 
* ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಒತ್ತು.
* ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಗೆ 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪಿಸಲು ನಿರ್ಧಾರ.
* ಸಾಂಪ್ರದಾಯಿಕ ಉದ್ದಿಮೆಗಳಿಗೆ ಉತ್ತೇಜನ ನೀಡಲು ನಿರ್ಧಾರ, ಜೇನು, ಬಿದಿರು ಖಾದಿ ಉದ್ಯಮಗಳಿಗೆ ಸರ್ಕಾರದ ಉತ್ತೇಜನ, ಪ್ರತಿ ವರ್ಷ 50 ಸಾವಿರ ಜನರಿಗೆ ನೆರವು.
* ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಚಾಲನೆ, ಪಿಎಂಜಿಎಸ್ ವೈ ಯೋಜನೆ ಗ್ರಾಮೀಣ ಜನರಲ್ಲಿ ಬದಲಾವಣೆ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com