ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ: ಜಿಡಿಪಿ ಶೇ.6.5ಕ್ಕೆ ತಲುಪುವ ನಿರೀಕ್ಷೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಶುಕ್ರವಾರ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. 
ನಿನ್ನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಹ್ಮಣ್ಯನ್
ನಿನ್ನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಹ್ಮಣ್ಯನ್
Updated on

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಶುಕ್ರವಾರ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. 


ಆರ್ಥಿಕ ಸಮೀಕ್ಷೆ ವಾರ್ಷಿಕ ದಾಖಲೆಯಾಗಿದ್ದು ಅದನ್ನು ಕೇಂದ್ರ ಸರ್ಕಾರ ಬಜೆಟ್ ಗೆ ಮುನ್ನ ಸದನದಲ್ಲಿ ಮಂಡಿಸುತ್ತದೆ. ಹಿಂದಿನ ವರ್ಷ ದೇಶದ ಅರ್ಥ ವ್ಯವಸ್ಥೆಯ ಪರಾಮರ್ಶೆ ಇದಾಗಿರುತ್ತದೆ. ಅಲ್ಪ ಅವಧಿಯಿಂದ ಮಧ್ಯಮ ಅವಧಿಯ ಭವಿಷ್ಯಕ್ಕಾಗಿ ನೀತಿ ನಿಯಮವನ್ನು ಒದಗಿಸುತ್ತದೆ.


ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು: ಏಪ್ರಿಲ್ 1ರಿಂದ ಆರಂಭವಾಗುವ ಮುಂದಿನ ವರ್ಷದ ಹಣಕಾಸು ವರ್ಷದಲ್ಲಿ ಶೇಕಡಾ 6ರಿಂದ ಶೇಕಡಾ 6.5ರಷ್ಟು ಆರ್ಥಿಕ ಪ್ರಗತಿಯಾಗಬಹುದು ಎಂದು ಅಂದಾಜು.


ಪ್ರಸ್ತುತ ಹಣಕಾಸು ಬೆಳವಣಿಗೆಯನ್ನು ಶೇಕಡಾ 5ಕ್ಕೆ ಸಮೀಕ್ಷೆ ಅಂದಾಜಿಸಿದೆ. ಹಣಕಾಸು ಪ್ರಗತಿ ಪುನರುಜ್ಜೀವಗೊಳಿಸಲು ಪ್ರಸಕ್ತ ಹಣಕಾಸಿನ ಕೊರತೆಯ ಗುರಿಯನ್ನು ಸಡಿಲಿಸಬೇಕಾಗಬಹುದು.


ಇಂದಿನ ಆರ್ಥಿಕ ಸಮೀಕ್ಷೆಯ ವಿಶೇಷತೆಗಳು: ಇಂದು ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ದೇಶದ ಆರ್ಥಿಕ ಪ್ರಗತಿ ಮತ್ತೆ ಏರಿಕೆಯಾಗಲಿದ್ದು ಮುಂದಿನ ಹಣಕಾಸು ವರ್ಷಕ್ಕೆ ದೇಶದ ಜಿಡಿಪಿ ಶೇಕಡಾ 6ರಿಂದ ಶೇಕಡಾ 6.5ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.


ಲ್ಯಾವೆಂಡರ್(ನೇರಳೆ)ಬಣ್ಣದಲ್ಲಿ ಸಮೀಕ್ಷೆಯನ್ನು ಅಚ್ಚು ಮಾಡಲಾಗಿದ್ದು, ಹಣಕಾಸು ಕೊರತೆಯನ್ನು ಸಡಿಲಗೊಳಿಸುವಂತಹ ಕ್ರಮಗಳನ್ನು ಸೂಚಿಸಿದೆ. ಸರ್ಕಾರದ ವೆಚ್ಚ ಮತ್ತು ತೆರಿಗೆ ಕಡಿತಗಳು ಆರ್ಥಿಕ ಕುಸಿತದ ಸಂದರ್ಭದಲ್ಲಿ ಪ್ರತಿಕ್ರಮಗಳನ್ನು ಸಮೀಕ್ಷೆಯಲ್ಲಿ ಸೂಚಿಸಲಾಗಿದೆ. 


ಕಳೆದ ವರ್ಷ 2019-20ನೇ ಇಸವಿಯಲ್ಲಿ ಜಿಡಿಪಿ ಶೇಕಡಾ 5ರಷ್ಟು ಅಂದಾಜಿಸಲಾಗಿತ್ತು, ಆದರೆ ಮುಂದಿನ ಹಣಕಾಸು ವರ್ಷಕ್ಕೆ ಶೇಕಡಾ 6ರಿಂದ 6.5ಕ್ಕೆ ನಿಗದಿಪಡಿಸಲಾಗಿದೆ. 


ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು: 
ಸಂಪತ್ತು ಸೃಷ್ಟಿಕರ್ತರನ್ನು ಗೌರವಿಸಿ: ದೇಶದಲ್ಲಿ ತೆರಿಗೆ ಸಂಗ್ರಹ, ಆದಾಯ ಹೆಚ್ಚಳ, ಭಾರೀ ಹೂಡಿಕೆ, ಉದ್ಯಮಗಳಿಂದ ದೇಶದ ಸಂಪತ್ತು ಹೆಚ್ಚಿಸಿ ಜಿಡಿಪಿ ಪ್ರಗತಿಗೆ ಕಾರಣರಾಗುವವರನ್ನು ಗೌರವಿಸಬೇಕು.


ವಸ್ತುಗಳ ದರ ಕಡಿತದಲ್ಲಿ ವೈಫಲ್ಯ: ನಾಗರಿಕರ ಅಗತ್ಯದ ವಸ್ತುಗಳಾದ ಈರುಳ್ಳಿ ಸೇರಿದಂತೆ ಕೆಲ ವಸ್ತುಗಳ ಬೆಲೆ ಏರಿಕೆ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲ.


ಉದ್ಯೋಗ ಸೃಷ್ಟಿ ಸೇರಿದಂತೆ ದೇಶದ ಆರ್ಥಿಕ ಬೆಳವಣಿಗೆಗೆ ಉತ್ಪಾದನೆ ವಲಯದಲ್ಲಿ ಹೆಚ್ಚಳ ಮಾಡಲು ಜಗತ್ತಿನ ಮುಂದೆ ಭಾರತೀಯರ ಒಗ್ಗಟ್ಟು ಪ್ರದರ್ಶನ.


ಬಂದರುಗಳಲ್ಲಿ ರೆಡ್ ಟೇಪ್ ಗಳನ್ನು ತೆಗೆದುಹಾಕುವ ಮೂಲಕ ರಫ್ತು ಪ್ರಮಾಣವನ್ನು ಹೆಚ್ಚಿಸಬೇಕು, ಸ್ಟಾರ್ಟ್ ಆಫ್ ಬ್ಯುಸಿನೆಸ್ ಪ್ರಕ್ರಿಯೆ ಸುಗಮಗೊಳಿಸುವುದು, ಆಸ್ತಿ ದಾಖಲಾತಿ, ತೆರಿಗೆ ಪಾವತಿ ಮತ್ತು ಒಪ್ಪಂದಗಳನ್ನು ಜಾರಿಗೊಳಿಸುವ ಮೂಲಕ ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವುದು.


ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಆಡಳಿತ ವಿಧಾನ ಸುಧಾರಣೆ, ನಂಬಿಕೆ ವಿಶ್ವಾಸಾರ್ಹತೆ ಹೆಚ್ಚಿಸಲು ಹೆಚ್ಚೆಚ್ಚು ಮಾಹಿತಿ ಬಹಿರಂಗ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com