ಕರ್ನಾಟಕ ಬಜೆಟ್ 2021: ನೀರಾವರಿ ಕ್ಷೇತ್ರಕ್ಕೆ ದಕ್ಕಿದ್ದೆಷ್ಟು?

ಜಲಸಂಪನ್ಮೂಲ, ನೀರಾವರಿ ಇಲಾಖೆಗೆ ಕರ್ನಾಟಕ ವಿಕಾಸ ಪತ್ರ 2021ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ವಿಧಾನಸಭೆಯಲ್ಲಿ ಯಡಿಯೂರಪ್ಪ ಬಜೆಟ್ ಮಂಡನೆ
ವಿಧಾನಸಭೆಯಲ್ಲಿ ಯಡಿಯೂರಪ್ಪ ಬಜೆಟ್ ಮಂಡನೆ

ಬೆಂಗಳೂರು: ಜಲಸಂಪನ್ಮೂಲ, ನೀರಾವರಿ ಇಲಾಖೆಗೆ ಕರ್ನಾಟಕ ವಿಕಾಸ ಪತ್ರ 2021ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಈ ವರ್ಷ ರಾಜ್ಯದ ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲು ರಾಜ್ಯ ಸರ್ಕಾರ 20 ಸಾವಿರದ 996 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.

ಬೆಂಗಳೂರು ನಗರ,ಗ್ರಾಮಾಂತರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308 ಎಂ ಎಲ್ ಡಿ ನೀರು ತುಂಬಸುವ 500 ಕೋಟಿ ರೂಪಾಯಿ ವೆಚ್ಚದ ಯೋಜನೆ, ಮುಂದಿನ 5 ವರ್ಷಗಳಲ್ಲಿ 1,348 ಕೋಟಿ ರೂಪಾಯಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, 2021-22ನೇ ಸಾಲಿನಲ್ಲಿ 500 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ 300 ಕೋಟಿ ರೂ ವೆಚ್ಚದಲ್ಲಿ ನದಿಗಳಲ್ಲಿ ಪ್ರವಾಹ ಮತ್ತು ಭಾರಿ ಅಲೆಗಳಿಂದಾಗಿ ಉಪ್ಪು ನೀರು ಹಿಮ್ಮುಖವಾಗಿ ನುಗ್ಗುವುದನ್ನು ತಡೆಯಲು ಖಾರ್ ಲ್ಯಾಂಡ್ ಯೋಜನೆ ಜಾರಿ, ಬೇಡ್ತಿ ವರದಾ ನದಿ ಜೋಡಣೆಯಲ್ಲಿ ಒಟ್ಟು 22 ಟಿಎಂಸಿ ನೀರನ್ನು ಬಳಸಿಕೊಳ್ಳಲು ಯೋಜನಾ ವರದಿಯನ್ನು ನ್ಯಾಶನಲ್ ಪ್ರಾಸ್ಪೆಕ್ಟಿವ್ ಪ್ಲಾನ್ ಅಡಿಯಲ್ಲಿ ಸಿದ್ಧಪಡಿಸಲು ಎನ್ ಡಬ್ಲ್ಯು ಡಿಎಗೆ ಮನವಿ ಮಾಡಲಾಗಿದೆ. 

ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ವಿಶ್ವ ಬ್ಯಾಂಕ್ ನೆರವಿನ ಡ್ರಿಪ್ ಯೋಜನೆಯಡಿ 1500 ಕೋಟಿ ರೂಪಾಯಿ ಮೊತ್ತದಲ್ಲಿ ರಾಜ್ಯದ 58 ಅಣೆಕಟ್ಟುಗಳ ಪುನಶ್ಚೇತನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಿಎಂ ಘೋಷಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com