ಬಜೆಟ್ 2021: ವಿಮೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಶೇ.49 ರಿಂದ ಶೇ.74ಕ್ಕೆ ಏರಿಕೆ

ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಕೇಂದ್ರ ಸರ್ಕಾರ ಶೇಕಡಾ 74ಕ್ಕೆ ಹೆಚ್ಚಿಸಿದೆ, ಇದರಿಂದ ವಿದೇಶಗಳ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಕೇಂದ್ರ ಸರ್ಕಾರ ಶೇಕಡಾ 74ಕ್ಕೆ ಹೆಚ್ಚಿಸಿದೆ, ಇದರಿಂದ ವಿದೇಶಗಳ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ಮಾಡಿದೆ.

ಇಂದು ಲೋಕಸಭೆಯಲ್ಲಿ ಕಾಗದರಹಿತ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಎಲ್ಲಾ ಹಣಕಾಸು ಉತ್ಪನ್ನಗಳಲ್ಲಿ ಹಣಕಾಸು ಹೂಡಿಕೆದಾರರ ಹಕ್ಕುಗಳನ್ನು ಜಾರಿಗೆ ತರಲು ಹೂಡಿಕೆದಾರರ ಅಧ್ಯಾಯವನ್ನು ಜಾರಿಗೆ ತರಲಿದೆ ಎಂದು ಹೇಳಿದರು.

ಸರ್ಕಾರ ಇನ್ಸೂರೆನ್ಸ್ ಕಾಯ್ದೆ 1938ಕ್ಕೆ ತಿದ್ದುಪಡಿ ಮಾಡಲು ಸೂಚಿಸಿದ್ದು, ವಿಮಾ ಕಂಪೆನಿಗಳಲ್ಲಿ ಎಫ್ ಡಿಐ ಮಿತಿಯನ್ನು ಶೇಕಡಾ 49ರಿಂದ 74ಕ್ಕೆ ಹೆಚ್ಚಿಸಲು ಅನುಮತಿ ನೀಡಿದೆ. ವಿದೇಶಿ ಒಡೆತನ ಮತ್ತು ನಿಯಂತ್ರಣವನ್ನು ಸುರಕ್ಷತೆಯೊಂದಿಗೆ ಮಾಡಲು ಅವಕಾಶ ನೀಡಿದೆ.

ಹೊಸ ವ್ಯವಸ್ಥೆಯಡಿಯಲ್ಲಿ, ಮಂಡಳಿಯಲ್ಲಿನ ಹೆಚ್ಚಿನ ನಿರ್ದೇಶಕರು ಮತ್ತು ಪ್ರಮುಖ ನಿರ್ವಹಣಾ ವ್ಯಕ್ತಿಗಳು ಕನಿಷ್ಠ 50 ಪ್ರತಿಶತದಷ್ಟು ನಿರ್ದೇಶಕರು ಸ್ವತಂತ್ರ ನಿರ್ದೇಶಕರಾಗಿರುತ್ತಾರೆ ಮತ್ತು ನಿರ್ದಿಷ್ಟ ಶೇಕಡಾವಾರು ಲಾಭವನ್ನು ಸಾಮಾನ್ಯ ಮೀಸಲು ರೂಪದಲ್ಲಿ ಉಳಿಸಿಕೊಳ್ಳುತ್ತಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com