ಕೇಂದ್ರ ಬಜೆಟ್ 2022: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತೆರಿಗೆ ವಿನಾಯಿತಿ ಮಿತಿ ಶೇ.10 ರಿಂದ ಶೇ.14ಕ್ಕೆ ಹೆಚ್ಚಳ

ಕೇಂದ್ರ ಬಜೆಟ್ 2022ರಲ್ಲಿ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ನೀಡಿದ್ದು, ತೆರಿಗೆ ವಿನಾಯಿತಿ ಮಿತಿಯನ್ನು ಶೇ.10 ರಿಂದ ಶೇ.14ಕ್ಕೆ ಹೆಚ್ಚಳ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಬಜೆಟ್ 2022ರಲ್ಲಿ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ನೀಡಿದ್ದು, ತೆರಿಗೆ ವಿನಾಯಿತಿ ಮಿತಿಯನ್ನು ಶೇ.10 ರಿಂದ ಶೇ.14ಕ್ಕೆ ಹೆಚ್ಚಳ ಮಾಡಿದೆ.

ಕೇಂದ್ರ ಸರ್ಕಾರಿ ನೌಕರರು ಪಿಂಚಣಿ ನಿಧಿಗಾಗಿ ಪಾವತಿಸುತ್ತಿದ್ದ ಮೊತ್ತದಲ್ಲಿ ಸಿಗುತ್ತಿದ್ದ ತೆರಿಗೆ ವಿನಾಯ್ತಿಯ ಮಿತಿಯನ್ನು ಕಡಿತಗೊಳಿಸಲಾಗಿದೆ.  ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme – NPS) ಹೂಡಿಕೆಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಮುಂದಿನ ದಿನಗಳಲ್ಲಿ ಆದಾಯ ತೆರಿಗೆಯಲ್ಲಿ ಶೇ 14ರ ಮಿತಿ ಸಿಗಲಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಕೇಂದ್ರ ಸರ್ಕಾರಿ ಮಾಡುವ ಹೂಡಿಕೆಗೆ ಈವರೆಗೆ ಶೇ 18ರಷ್ಟು ತೆರಿಗೆ ವಿನಾಯ್ತಿ ಸಿಗುತ್ತಿತ್ತು. ಈ ಮೊತ್ತವನ್ನು ಇದೀಗ ಶೇ 15ಕ್ಕೆ ಇಳಿಸಲಾಗಿದೆ.

 ಈಗ ಎನ್‌ಪಿಎಸ್‌ನಲ್ಲಿ (NPS) ಶೇ.10ರ ಬದಲು ಶೇ.14ರಷ್ಟು ಕೊಡುಗೆ ನೀಡಲಾಗುವುದು ಎಂದು ಹಣಕಾಸು ಸಚಿವರು (Niramala Sitharaman) ತಿಳಿಸಿದ್ದಾರೆ. ಅಂದರೆ ಸರ್ಕಾರಿ ನೌಕರರಿಗೆ ಎನ್ ಪಿಎಸ್ ಯೋಜನೆಯಲ್ಲಿ ತೆರಿಗೆ ವಿನಾಯಿತಿ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ ಹೊಸ ತೆರಿಗೆ ಸುಧಾರಣೆ ತರುವ ಯೋಜನೆಯನ್ನು ಹಣಕಾಸು ಸಚಿವರು ಪ್ರಕಟಿಸಿದ್ದಾರೆ. ನೌಕರರು ಪಿಂಚಣಿ (Pension) ಮೇಲೆಯೂ  ತೆರಿಗೆ ವಿನಾಯಿತಿ ಪಡೆಯಲಿದ್ದಾರೆ. ಈಗ ಎನ್‌ಪಿಎಸ್‌ನಲ್ಲಿ ಕೇಂದ್ರ ಮತ್ತು ರಾಜ್ಯದ ಕೊಡುಗೆ 14% ರಷ್ಟು ಆಗಿರುತ್ತದೆ.

ಅಂತೆಯೇ ಈ ಬಾರಿಯ ಬಜೆಟ್ ನಲ್ಲಿ (Budget 2022) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ಸ್ಯಾಲರೀಡ್ ಕ್ಲಾಸ್ ಗೆ ಸಂಬಂಧಿಸಿದಂತೆ, ದೊಡ್ಡ ಘೋಷಣೆಗಳನ್ನು ಮಾಡಿದ್ದು, ಈಗ ತೆರಿಗೆದಾರರು  2 ವರ್ಷಗಳ ಹಿಂದಿನ IT return ಅನ್ನು  ಸಲ್ಲಿಸಬಹುದು ಎಂದು ಹೇಳಿದ್ದಾರೆ. ಅಲ್ಲದೆ,  ಈಗ NPS ಮೇಲೆ 10% ಬದಲಿಗೆ 14%ದಷ್ಟು ಕೊಡುಗೆ ನೀಡಲಾಗುವುದು ಎಂದು ಹೇಳಿದ್ದಾರೆ. 

ಕಾರ್ಪೊರೇಟ್ ತೆರಿಗೆ ಕಡಿತ ಪ್ರಸ್ತಾಪ
ಇದೇ ವೇಳೆ ಬಜೆಟ್ ಭಾಷಣದ ವೇಳೆ ಹಣಕಾಸು ಸಚಿವರು ಕಾರ್ಪೊರೇಟ್ ತೆರಿಗೆಯನ್ನು (Corporate Tax) ಶೇ.18ರಿಂದ ಶೇ.15ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಸರ್ಚಾರ್ಜ್ ಶೇ.12ರಿಂದ ಶೇ.7ಕ್ಕೆ ಇಳಿಕೆಯಾಗಲಿದೆ. ಸಹಕಾರಿ ಸಂಸ್ಥೆಗಳಿಗೂ ಉತ್ತೇಜನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com