ಸೆನ್ಸೆಕ್ಸ್ 88 ಅಂಕ ಏರಿಕೆ

ಮಿಶ್ರ ವಹಿವಾಟು ಕಂಡುಬಂದಿರುವ ದಿನದಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕವು ಚೇತರಿಕೆಯನ್ನು...
ಭಾರತೀಯ ಷೇರುಮಾರುಕಟ್ಟೆ
ಭಾರತೀಯ ಷೇರುಮಾರುಕಟ್ಟೆ

ಮುಂಬೈ: ಮಿಶ್ರ ವಹಿವಾಟು ಕಂಡುಬಂದಿರುವ ದಿನದಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕವು ಚೇತರಿಕೆಯನ್ನು ಕಂಡಿವೆ.

ಮುಂಬೈ ಷೇರು ಮಾರುಕಟ್ಟೆ ಬಿಎಸ್‌ಇ ಸೂಚ್ಯಂಕ ಸೆನ್ಸ್‌ಕ್ಸ್ ಶುಕ್ರವಾರ 88.93 ಅಂಕಗಳ ಏರಿಕೆ ದಾಖಲಿಸಿದ್ದು, 28,651.75ಕ್ಕೆ ತಲುಪಿದೆ. ಜಾಗತಿಕ ವಲಯದಲ್ಲಿ ಉತ್ತಮ ವಹಿವಾಟು ದಾಖಲಾಗಿರುವುದು ಮಾರುಕಟ್ಟೆಗೆ ಶುಭವಾಗಿ ಪರಿಣಮಿಸಿದೆ.

ಹಿಂದಿನ ದಿನದಲ್ಲಿ 120.11 ಪಾಯಿಂಟ್ ಏರಿಕೆ ಕಂಡಿದ್ದ ಮುಂಬೈನ್ ಶೇರು ಸೂಚ್ಯಂಕ, ಈ ದಿನವೂ ಕೂಡಾ ವಹಿವಾಟು ಆರಂಭವಾದ ಕೆಲವೇ ಗಂಟೆಗಳಲ್ಲಿ 88.83 ಅಂಕ ಏರಿಕೆಯಾಗಿ 28,651.75ಗೆ ತಲುಪಿದೆ.

ವಿದೇಶಿ ಬಂಡವಾಳದ ಒಳಹರಿವು ಮತ್ತು ತೈಲ ಅನಿಲ ಮತ್ತು ಲೋಹ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 15.15 ಪಾಯಿಂಟ್‌ಗಳ ಏರಿಕೆ ಕಂಡು 8,579.55. ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com