ಕ್ಲೇಮ್ ಸ್ಟೋರಿ

ಕ್ಲೇಮ್ ಸ್ಟೋರಿ

ಕ್ಲೇಮುಗಳನ್ನು ಶೀಘ್ರ ಇತ್ಯರ್ಥ ಮಾಡಿಕೊಡುವುದು ಆಯಾ ವಿಮಾ ಕಂಪನಿಯ ಕಾರ್ಯ ತತ್ಪರತೆಯನ್ನು ತೋರಿಸುತ್ತದೆ. ವಿಮೆ ಮಾಡುವ ವೇಳೆ ಗ್ರಾಹಕನಿಗೆ ಕಂಪನಿ ನೀಡಿದ ಮಾತನ್ನು ಎಷ್ಟು ಸಾಧ್ಯವೋ ಅಷ್ಟು ಶೀಘ್ರ ಉಳಿಸಿಕೊಳ್ಳಬೇಕು. ಮೂರು ಹಂತಗಳಲ್ಲಿ ಕ್ಲೇಮುಗಳು ಬರಬಹುದು.
ಡೆತ್ ಕ್ಲೇಮು
ಇದು ಅತಿ ಮುಖ್ಯ ವಿಚಾರ. ಪಾಲಿಸಿ ಮಾಡಿಸಿಕೊಂಡ ವ್ಯಕ್ತಿ ಹಠಾತ್ತನೆ ಸತ್ತರೆ ಆತನ ಕುಟುಂಬಕ್ಕೆ ಹಣದ ಅಗತ್ಯವಿರುತ್ತದೆ. ಒಂದು ವೇಳೆ ವ್ಯಕ್ತಿಯ ಕುಟುಂಬಕ್ಕೆ ಪಾಲಿಸಿಯ ಮೊತ್ತವೇ ಜೀವನಾಧಾರವಾಗಿದ್ದರೆ ವಿಮಾ ಕಂಪನಿಯು ಶೀಘ್ರವೇ ಸಂಬಂಧಿಸಿದ ಕ್ರಮಗಳನ್ನು ಪೂರ್ತಿಗೊಳಿಸಿ, ವಿಮಾ ಹಣವನ್ನು ನೀಡಬೇಕಾಗುತ್ತದೆ.
ಆದರೆ ಇದಕ್ಕಾಗಿ ವಿಮೆದಾರನೂ ಕೊಂಚ ಹೊಣೆಯರಿತು ಕೆಲಸ ಮಾಡಬೇಕು. ವಿಮೆ ಮಾಡಿದ ಬಳಿಕ ನಿರಂತರವಾಗಿ ಪ್ರೀಮಿಯಂ ಅನ್ನು ಪಾವತಿಸಬೇಕು. ಈ ಮೂಲಕ ವಿಮೆ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಾಮ ನಿರ್ದೇಶಿತನಾದ ವ್ಯಕ್ತಿ ಅಸುನೀಗಿದರೆ ಪಾಲಿಸಿದಾರ ನಾಮ ನಿರ್ದೇಶನಗೊಳ್ಳಲಿರುವ ವ್ಯಕ್ತಿಯ ಹೆಸರನ್ನು ಕಂಪನಿ ಜತೆ ಪರಿಷ್ಕರಿಸಬೇಕು. ಇದರ ಜತೆಗೆ ವಿಮೆ ಮಾಡಿದ ವ್ಯಕ್ತಿ ಅದನ್ನು ತನ್ನ ಕುಟುಂಬ ಸದಸ್ಯರ ಜತೆ ಹಂಚಿಕೊಳ್ಳಬೇಕು.
ಮೆಚ್ಯುರಿಟಿ ಕ್ಲೇಮು
ಸಾಮಾನ್ಯವಾಗಿ ನಡೆದುಕೊಂಡು ಬರುವ ಅಂಶವಿದು. ಯಾವುದೇ ಪಾಲಿಸಿಯ ಅವಧಿ ಮುಕ್ತಾಯದ ಬಳಿಕ ಕಂಪನಿಯು ಪಾಲಿಸಿದಾರನಿಗೆ ಬರಬೇಕಾದ ಮೊತ್ತ ಪಾವತಿಸುತ್ತದೆ. ಇದಕ್ಕಾಗಿ ಕಂಪನಿಯು 3-4 ತಿಂಗಳು ಮೊದಲೇ ಸೂಚನೆ ನೀಡುತ್ತದೆ. ಪಾಲಿಸಿದಾರ ತನ್ನ ವಿಮೆ ಪಾಲಿಸಿಯನ್ನು ವಿಮೆ ಮಾಡಿಸಿದ ದಿನದಿಂದ ಕೊನೆಯ ವರೆಗೂ ಇರಿಸಿಕೊಳ್ಳಬೇಕು.
ರೈಡರ್ಸ್‌ಗಳ ಕ್ಲೇಮು
ವಿಮೆ ಮಾಡಿಸಿಕೊಳ್ಳುವ ವ್ಯಕ್ತಿ ತನ್ನ ಯಾವುದೇ ಅಗತ್ಯ ಬಿದ್ದಾಗ ಪಾಲಿಸಿಯಿಂದ ಹಣ ಪಡೆದುಕೊಳ್ಳಬೇಕಾಗುತ್ತದೆ. ಉದಾ: ಆರೋಗ್ಯದ ವಿಚಾರವನ್ನೇ ತೆಗೆದುಕೊಳ್ಳೋಣ. ಆರೋಗ್ಯ ವಿಮೆ ಹೊಂದಿರುವ ವ್ಯಕ್ತಿ ಹಣ ಮತ್ತೆ ಪಡೆದುಕೊಳ್ಳುವ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಬೇಕು. ಹೀಗಿದ್ದಾಗ ಮಾತ್ರ ಆತನಿಗೆ ಹಣ ಹಿಂತಿರುಗಿ ಬರುತ್ತದೆ.
(ಲೇಖಕರು: ಬಜಾಜ್ ಲೈಫ್ ಇನ್ಶೂರೆನ್ಸ್‌ನ ತಾಂತ್ರಿಕ ವಿಭಾಗದ ಮುಖ್ಯಸ್ಥರು)

= ಪಿ. ರವಿಕುಟುಂಬ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com