• Tag results for ವ್ಯಾಪಾರ

ಮಲ್ಲೇಶ್ವರಂ ಮಾರ್ಕೆಟ್ ಸ್ವಯಂ ಲಾಕ್ ಡೌನ್ ಮಾಡಲು 200 ವ್ಯಾಪಾರಿಗಳು ಮುಂದು!

ಕೊರೊನಾ ಕಾಟಕ್ಕೆ ಬೆಂಗಳೂರು ನಲುಗಿ ಹೋಗಿದ್ದು ಸರ್ಕಾರ ಲಾಕ್‍ಡೌನ್ ಮಾಡಲಿಲ್ಲ ಅಂದರೂ ನಾವೇ ಸ್ವಯಂ ಲಾಕ್‍ಡೌನ್ ಮಾಡಿಕೊಳ್ಳುತ್ತೇವೆ ಎಂದು ಬೆಂಗಳೂರಿನ ಮಲ್ಲೇಶ್ವರಂ ಮಾರುಕಟ್ಟೆ ವ್ಯಾಪಾರಿಗಳು ನಿರ್ಧರಿಸಿದ್ದಾರೆ.

published on : 2nd July 2020

ಕೊರೋನಾಗೆ ಮುಂಬೈ ಪಾನಿಪುರಿ ವ್ಯಾಪಾರಿ ಸಾವು; 2.50 ಲಕ್ಷ ರೂ. ಸಂಗ್ರಹಿಸಿ ಕುಟುಂಬಕ್ಕೆ ಸಹಾಯ ಮಾಡಿದ ನಾಗರಿಕರು

ತಮಗೆ ರುಚಿ ರುಚಿಯಾದ ಪಾನಿಪುರಿ ನೀಡುತ್ತಿದ್ದ ವ್ಯಾಪಾರಿ ಕೊರೋನಾ ಸೋಂಕಿಗೆ ಮೃತಪಟ್ಟಾಗ ದಕ್ಷಿಣ ಮುಂಬೈಯ ಜನರು 2.50 ಲಕ್ಷ ರೂಪಾಯಿ ಹಣ ಸಂಗ್ರಹಿಸಿ ಕುಟುಂಬಸ್ಥರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

published on : 25th June 2020

ತುಮಕೂರು: ಮಾವು ಹಣ್ಣಿನ ವ್ಯಾಪಾರಿ, ಬಟ್ಟೆ ಮಾರುತ್ತಿದ್ದ ಮಹಿಳೆಗೆ ಕೋವಿಡ್-19 ಸೋಂಕು

ಉತ್ತರ ಭಾರತ ಮತ್ತು ಮುಂಬೈಗಳಿಗೆ ಹಣ್ಣುಗಳನ್ನು ರವಾನಿಸಲಾಗುತ್ತಿದ್ದ ಚೇಳೂರು ಮಾವು ಮತ್ತು ಹಲಸಿನ ಹಣ್ಣು ಮಾರುಕಟ್ಟೆಯ 50 ವರ್ಷದ ವ್ಯಾಪಾರಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ.

published on : 23rd June 2020

ಚೀನಾ ಬ್ರ್ಯಾಂಡ್ ಗಳನ್ನು ಉತ್ತೇಜಿಸುವುದನ್ನು ಬಿಡಲು ಸೆಲೆಬ್ರಿಟಿಗಳಿಗೆ ವ್ಯಾಪಾರಿಗಳ ಮನವಿ

ಗಡಿಯಲ್ಲಿ ಕ್ಯಾತೆ ತೆಗೆದು ಭಾರತೀಯ ಯೋಧರು ಹುತಾತ್ಮರಾಗುವಂತೆ ಮಾಡಿದ ಚೀನಾದ ಉತ್ಪನ್ನಗಳನ್ನು ಉತ್ತೇಜಿಸುವುದನ್ನು ಬಿಡುವಂತೆ ಸೆಲಬ್ರಿಟಿಗಳಿಗೆ ವ್ಯಾಪಾರಗಳ ಸಂಸ್ಥೆ ಸಿಎಐಟಿ ಕರೆ ನೀಡಿದೆ. 

published on : 18th June 2020

ಬೆಂಗಳೂರಿನಲ್ಲಿ ಜಲ್ಲಿಕಲ್ಲು ವ್ಯಾಪಾರಿಯ ಭೀಕರ ಕೊಲೆ

ಎಂ ಸ್ಯಾಂಡ್ ಜಲ್ಲಿಕಲ್ಲು ವ್ಯಾಪಾರಿ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ತಲಘಟ್ಟಪುರದ ಆವಲಹಳ್ಳಿಯಲ್ಲಿ ನಡೆದಿದೆ.

published on : 29th May 2020

ಜಾಮೀನು ಇಲ್ಲದೇ ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ವರೆಗೂ ಸಾಲ: ಸಚಿವ ಸಿ.ಟಿ. ರವಿ

ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಯಾವುದೇ ಜಾಮೀನು ಇಲ್ಲದೇ 10 ಸಾವಿರ ರೂ.ಗಳ ವರೆಗೂ ಸಾಲ ನೀಡಲಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

published on : 16th May 2020

ಮದ್ಯ ಮಾರಾಟ ಆರಂಭ: ಎಳನೀರು ಮಾರಾಟದಲ್ಲಿ ಭಾರೀ ಇಳಿಕೆ

ಬರೋಬ್ಬರಿ 40 ದಿನಗಳ ಬಳಿಕ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ಮದ್ಯ ಖರೀದಿ ಮಾಡಲು ಮದ್ಯಪ್ರಿಯರಂತೂ ಕಿಲೋಮೀಟರ್'ಗಟ್ಟಲೆ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಎಳನೀರು ಕೊಳ್ಳುವವರ ಸಂಖ್ಯೆ ಮಾತ್ರ ಬೆರಳಣಿಕೆಯಷ್ಟಾಗಿದೆ. 

published on : 5th May 2020

ಲಾಕ್ ಡೌನ್ ಎಫೆಕ್ಟ್: ಆಭರಣ ಮಾರುವ ಕೈಗಳಿಂದ ತರಕಾರಿ ಮಾರಾಟ!

ಕಳೆದ 25 ವರ್ಷಗಳಿಂದ ಆಭರಣ ವ್ಯಾಪಾರಿಯಾಗಿದ್ದ ರಾಜಸ್ಥಾನದ ಹುಕುಮಚಂದ್ ಸೋನಿ ಅವರು ತಾನು ಜೀವನದಲ್ಲಿ ತರಕಾರಿ ಮಾರಿ ಜೀವನ ನಡೆಸಬೇಕಾದ ಸಮಯ ಬರುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲ. ಆದರೆ ಕೊವಿಡ್-19 ಲಾಕ್ ಡೌನ್ ಆಭರಣ ವ್ಯಾಪ್ಯಾರಿಯನ್ನೂ ಬೀದಿಗೆ ತಂದು ನಿಲ್ಲಿಸಿದ್ದು, ಸೋನಿ ಅವರು ಜೀವನಕ್ಕಾಗಿ ಈಗ ತರಕಾರಿ ಮಾರಾಟ ಮಾಡುತ್ತಿದ್ದಾರೆ.

published on : 2nd May 2020

ವ್ಯಾಪಾರದ ವ್ಯಾಖ್ಯೆಯನ್ನ ಬದಲಿಸಲಿದೆ ಕೋವಿಡ್-19!

ಹಣಕ್ಲಾಸು - ರಂಗಸ್ವಾಮಿ ಮೂಕನಹಳ್ಳಿ

published on : 16th April 2020

ಭಾರತಕ್ಕೆ ಅಮೆರಿಕಾ ದೊಡ್ಡ ವ್ಯಾಪಾರ ಪಾಲುದಾರ: 2ನೇ ಸ್ಥಾನಕ್ಕೆ ಕುಸಿದ ಚೀನಾ

2019-19ನೇ ಸಾಲಿನಲ್ಲಿ ಅಮೆರಿಕಾ ರಾಷ್ಟ್ರವು ಭಾರತದ ಅತೀದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಆ ಮೂಲಕ ಚೀನಾ ರಾಷ್ಟ್ರವನ್ನು ಹಿಂದಿಕ್ಕಿ ಅಮೆರಿಕಾ ಮೊದಲ ಸ್ಥಾನ ಪಡೆದುಕೊಂಡಿದೆ. 

published on : 24th February 2020

'ಭಾರತ-ಅಮೆರಿಕ ವ್ಯಾಪಾರ ಒಪ್ಪಂದ' ಸದ್ಯಕ್ಕೆ ಏರ್ಪಡುವುದು ಸಂಶಯ:ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು? 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಭಾರತಕ್ಕೆ ಎರಡು ದಿನಗಳ ಭೇಟಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉಭಯ ದೇಶಗಳ ಮಧ್ಯೆ ನಡೆಯಬಹುದಾದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಆರ್ಥಿಕ, ಉದ್ಯಮ ಮತ್ತು ಭಾರತ-ಅಮೆರಿಕ ಮಾಧ್ಯಮ ವಲಯಗಳಲ್ಲಿ ಬಹು ಚರ್ಚೆಗೆ ಒಳಪಡುತ್ತಿದೆ. 

published on : 19th February 2020

ಟ್ರಂಪ್ ಭಾರತ ಭೇಟಿ ವೇಳೆ ಉಭಯ ದೇಶಗಳಿಗೂ ಪ್ರಯೋಜನಕಾರಿ ಒಪ್ಪಂದಗಳು: ತಜ್ಞರ ನಿರೀಕ್ಷೆ

ಈ ತಿಂಗಳ ಕೊನೆವಾರದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದು, ಉಭಯ ದೇಶಗಳಿಗೂ ಪ್ರಯೋಜನಕಾರಿಯಾಗುವಂತಹ ಒಪ್ಪಂದವೇರ್ಪಡುವ ಸಾಧ್ಯತೆಗಳಿಗೆ ಎಂದು ಅಮೆರಿಕಾ- ಭಾರತ ತಜ್ಞರು ನಿರೀಕ್ಷಿಸುತ್ತಿದ್ದಾರೆ.

published on : 13th February 2020

ಕೊನೆಗೂ ಇಳಿದ ಚಿನ್ನದ ದರ, ಬರೋಬ್ಬರಿ ಸಾವಿರ ರೂ. ಕಡಿತ

ಗಗನದತ್ತ ಮುಖ ಮಾಡಿ ಮಧ್ಯಮ ವರ್ಗದ ಜನರ ಆತಂಕಕ್ಕೆ ಕಾರಣವಾಗಿದ್ದ ಚಿನ್ನದ ದರ ಕೊನೆಗೂ ಇಳಿಕೆಯಾಗಿದೆ.

published on : 10th January 2020

2019ರ ಡಿಸೆಂಬರ್ ನಲ್ಲಿ ಟಿವಿಎಸ್ ಕಂಪೆನಿಯ 231,57 ವಾಹನ ಮಾರಾಟ

2019ರ ಡಿಸೆಂಬರ್ ನಲ್ಲಿ ಟಿವಿಎಸ್ ಕಂಪೆನಿಯ 231,57 ವಾಹನಗಳು ಮಾರಾಟವಾಗಿವೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

published on : 2nd January 2020

Alert: ಮತ್ತೊಂದು ಬ್ಯಾಂಕ್ ಮುಷ್ಕರಕ್ಕೆ ಸಿದ್ದರಾಗಿ!

ಪ್ರಮುಖ ಬೆಳವಣಿಗೆಯಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಒಕ್ಕೂಟಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿವೆ.

published on : 23rd December 2019
1 2 3 4 >