ಭಾರತ- ಬ್ರೆಜಿಲ್ ಐದು ವರ್ಷಗಳಲ್ಲಿ $20 ಬಿಲಿಯನ್ ಗೂ ಹೆಚ್ಚಿನ ವ್ಯಾಪಾರದ ಗುರಿ!

ಅಧ್ಯಕ್ಷ ಲೂಲಾ ಅವರ ದೂರದೃಷ್ಟಿಯ ದೃಷ್ಟಿಕೋನ ಮತ್ತು ಸ್ಪೂರ್ತಿದಾಯಕ ನಾಯಕತ್ವದಿಂದ ಭಾರತ ಮತ್ತು ಬ್ರೆಜಿಲ್ ನಡುವಿನ ಸಂಬಂಧಗಳು ದೀರ್ಘಕಾಲದಿಂದ ಪ್ರಯೋಜನ ಪಡೆದಿವೆ.
PM Modi with Brazilian President Luiz Inacio Lula da Silva
ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರೊಂದಿಗೆ ಪ್ರಧಾನಿ ಮೋದಿ
Updated on

ನವದೆಹಲಿ: ಭಾರತ ಮತ್ತು ಬ್ರೆಜಿಲ್ ಮುಂದಿನ ಐದು ವರ್ಷಗಳಲ್ಲಿ $20 ಬಿಲಿಯನ್ ಗೂ ಹೆಚ್ಚಿನ ದ್ವಿಪಕ್ಷೀಯ ವ್ಯಾಪಾರದ ಗುರಿಯನ್ನು ಶನಿವಾರ ನಿಗದಿಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರೊಂದಿಗೆ ನಿರ್ಣಾಯಕ ಖನಿಜಗಳು ಮತ್ತು ಭದ್ರತೆ ಸೇರಿದಂತೆ ಮತ್ತಿತರ ವಿಷಯಗಳಲ್ಲಿ ವ್ಯಾಪಕ ಮಾತುಕತೆ ನಡೆಸಿದ ನಂತರ ಈ ಗುರಿ ನಿಗದಿಪಡಿಸಲಾಗಿದೆ.

ಅಧ್ಯಕ್ಷ ಲೂಲಾ ಅವರ ದೂರದೃಷ್ಟಿಯ ದೃಷ್ಟಿಕೋನ ಮತ್ತು ಸ್ಪೂರ್ತಿದಾಯಕ ನಾಯಕತ್ವದಿಂದ ಭಾರತ ಮತ್ತು ಬ್ರೆಜಿಲ್ ನಡುವಿನ ಸಂಬಂಧಗಳು ದೀರ್ಘಕಾಲದಿಂದ ಪ್ರಯೋಜನ ಪಡೆದಿವೆ. ಭಾರತ ಮತ್ತು ಬ್ರೆಜಿಲ್ ಒಟ್ಟಾಗಿ ಕೆಲಸ ಮಾಡಿದಾಗ, ಜಾಗತಿಕ ದಕ್ಷಿಣದ ಧ್ವನಿ ಬಲಗೊಳ್ಳುತ್ತದೆ ಎಂದು ಮೋದಿ ಹೇಳಿದರು.

"ಜಾಗತಿಕ ವೇದಿಕೆಯಲ್ಲಿ ಭಾರತ ಮತ್ತು ಬ್ರೆಜಿಲ್‌ನ ಪಾಲುದಾರಿಕೆ ಪ್ರಬಲ ಮತ್ತು ಪ್ರಭಾವಶಾಲಿಯಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ನಾವು ಜಾಗತಿಕ ದಕ್ಷಿಣದ ಆದ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಮುಂದುವರಿಸುತ್ತೇವೆ. ಭಾರತ ಮತ್ತು ಬ್ರೆಜಿಲ್ ಒಟ್ಟಾಗಿ ಕೆಲಸ ಮಾಡಿದಾಗ, ಜಾಗತಿಕ ದಕ್ಷಿಣದ ಧ್ವನಿಗೆ ಹೆಚ್ಚಿನ ಧ್ವನಿ ಮತ್ತು ಬಲ ಬರಲಿದೆ ಎಂದು ಮಾತುಕತೆ ಬಳಿಕ ಮಾಧ್ಯಮ ಹೇಳಿಕೆಯಲ್ಲಿ ಮೋದಿ ತಿಳಿಸಿದರು.

ಬ್ರೆಜಿಲ್ ಲ್ಯಾಟಿನ್ ಅಮೆರಿಕದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತ ಮತ್ತು ಬ್ರೆಜಿಲ್ ವ್ಯಾಪಾರವನ್ನು $20 ಬಿಲಿಯನ್ ಮೀರಿಸುವ ಗುರಿಗೆ ಬದ್ದವಾಗಿದ್ದೇವೆ. ಭಯೋತ್ಪಾದನೆ ಮತ್ತು ಅದನ್ನು ಬೆಂಬಲಿಸುವವರು ಮಾನವೀಯತೆ ವಿರೋಧಿಗಳು ಎಂದು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ತಿಳಿಸಿದರು.

ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ನಮ್ಮ ಕಾಲದ ಸವಾಲುಗಳನ್ನು ಎದುರಿಸಲು ಜಾಗತಿಕ ಸಂಸ್ಥೆಗಳ ಸುಧಾರಣೆ ಅತ್ಯಗತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಆರೋಗ್ಯ, ಔಷಧ ಕ್ಷೇತ್ರದಲ್ಲಿ ಸಹಕಾರ ಅಗತ್ಯವಾಗಿದೆ. ಭಾರತದಿಂದ ಭ್ರಜಿಲ್ ಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಔಷಧ ಪೂರೈಕೆ ಹೆಚ್ಚಿಸುವ ನಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

PM Modi with Brazilian President Luiz Inacio Lula da Silva
AI ಭಾರತದ ಭವಿಷ್ಯ, ಅದಕ್ಕೆ ಮುಕ್ತ ಅವಕಾಶ ಕೊಡಿ, ನಿಯಂತ್ರಣ ನಮ್ಮ ಕೈಯಲ್ಲಿರಲಿ, ಮಕ್ಕಳ ಸುರಕ್ಷತೆಯಿರಲಿ: ಪ್ರಧಾನಿ ಮೋದಿ; Video

ಇದಕ್ಕೂ ಮುನ್ನಾ ರಾಷ್ಟ್ರಪತಿ ಭವನದಲ್ಲಿ ಬ್ರೆಜಿಲ್ ಅಧ್ಯಕ್ಷರಿಗೆ ಸ್ವಾಗತ ಕೋರಲಾಯಿತು. ಬಳಿಕ ಬ್ರೆಜಿಲ್ ಅಧ್ಯಕ್ಷರು ರಾಜ್ ಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com