ನೋವು ನಿವಾರಕ ಎಮ್ಯುಲ್ ಜೆಲ್

Updated on

ನೋವಾಟರ್ಸ್ ಇಂಡಿಯಾ ಕಂಪನಿಯ ಒಟಿಸಿ ವಿಭಾಗ ಹೊಸದಾಗಿ ವಿಶ್ವದ ನಂ.1 ಶ್ರೇಷ್ಠ ನೋವು ನಿವಾರಕ ವೋಲ್ಟಾರೆನ್ ಎಮ್ಯುಲ್ ಜೆಲ್ ಉತ್ಪನ್ನವನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದು ದೇಶದ ಎಲ್ಲ ಪ್ರಮುಖ ಔಷಧ ಮಳಿಗೆಗಳಲ್ಲಿ ಲಭ್ಯವಿವೆ. 5 ಗ್ರಾಂ, 50 ಮತ್ತು 30 ಗ್ರಾಂ ರು. 95ರಷ್ಟು ಕಡಿಮೆ ಬೆಲೆ ಇದೆ. ಈ ಎಮ್ಯುಲ್ ಜೆಲ್ ಫಾರ್ಮ್ಯುಲಾ ದೇಹದ ನೋವುಗಳನ್ನು ಕ್ಷಣಮಾತ್ರದಲ್ಲಿ ನಿವಾರಿಸುವಂಥದ್ದು. ಅಷ್ಟೇ ವೇಗದಲ್ಲಿ ದೇಹದಲ್ಲಿ ಚೇತರಿಕೆ ತರುತ್ತದೆ. ಇದನ್ನು ಬಳಸಿದವರ ದೇಹ ಎಂದಿನ ಚಟುವಟಿಕೆಯ ಸ್ಥಿತಿಗೆ ಬಹಳ ವೇಗವಾಗಿ ಮರಳುವಂತೆ ಮಾಡುತ್ತದೆ.


ಹೆಲೋ ಕೆನಡಾ ಐಸಿಐಸಿಐ ಹೊಸ ಸೇವೆ
ದೇಶದ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ತನ್ನ ಕೆನಡಾ ಗ್ರಾಹಕರಿಗೆ ಹೊಸ ಸೇವೆಯನ್ನು ಆರಂಭಿಸಿದೆ. ಜಾಗತಿಕ ಬ್ಯಾಂಕ್ ಆಗಿ ರೂಪುಗೊಳ್ಳುತ್ತಿರುವ ಐಸಿಐಸಿಐ 'ಹೆಲೋ ಕೆನಡಾ' ಸೇವೆಯನ್ನು ಜಾರಿಗೆ ತಂದಿದೆ. ಇದರಿಂದ ಕೆನಡಾ ಮಾತ್ರವಲ್ಲದೆ ಎನ್‌ಆರ್‌ಐಗಳಿಗೂ ತುಂಬಾ ಸಹಾಯಕವಾಗಲಿದೆ ಎಂಬುದು ಬ್ಯಾಂಕಿನ ಹೇಳಿಕೆ. ಗ್ರಾಹಕರು ಎನ್‌ಆರ್‌ಐ ಉಳಿತಾಯ ಖಾತೆಯ ಜತೆಯಲ್ಲಿ ಕೆನಡಿಯನ್ ಡಾಲರ್ ಅಕೌಂಟ್ ತೆಗೆಯಲು ಈ ಸೇವೆ ನೆರವಾಗಲಿದೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಆಕಾಶ್‌ಗೆ ಫ್ರಿ ಇಂಟರ್ನೆಟ್
ಅಗ್ಗದ ಆಕಾಶ್ ಟ್ಯಾಬ್ಲೆಟ್ ತಯಾರಕಾ ಕಂಪನಿ ಡಾಟಾವಿಂಡ್ ತನ್ನ ಗ್ರಾಹಕರಿಗೆ ಒಂದು ವರ್ಷದವರೆಗೂ ಅನ್‌ಲಿಮಿಟೆಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ತನ್ನ ಟ್ಯಾಬ್ಲೆಟ್‌ಗಳನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಹೊರಟಿದೆ. ದಕ್ಷಿಣ ಭಾರತದಲ್ಲಿ ಯುನಿವರ್‌ಸೆಲ್ ಮೂಲಕ ಟ್ಯಾಬ್ಲೆಟ್ ಮಾರುಕಟ್ಟೆಗೆ ಪರಿಚಯಿಸಿದೆ. ಯುನಿವರ್‌ಸೆಲ್ ಜತೆಗಿನ ಒಪ್ಪಂದಿಂದಾಗಿ ತಮ್ಮ ಮಾರುಕಟ್ಟೆ ವಿಸ್ತಾರವಾಗಲಿದೆ ಎಂಬುದು ಡಾಟಾವಿಂಡ್‌ನ ಅಭಿಪ್ರಾಯ.

ಅಕ್ಸೆಂಚರ್ ತೊರೆದ ವರ್ಮಾ
ಆ್ಯಕ್ಸೆಂಚರ್ ಇಂಡಿಯಾ ಹೆಲ್ತ್ ಮತ್ತು ಸಾರ್ವಜನಿಕ ಸೇವಾ ವಿಭಾಗದ ಮುಖ್ಯಸ್ಥ ನಿಲಯ್ ವರ್ಮಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ವಿಶೇಷ ಎಂದರೆ, ಇದೇ ವಿಭಾಗದ ಇತರ 10 ಅಧಿಕಾರಿಗಳು ಕೂಡಾ ಅಕ್ಸೆಂಚರ್‌ಗೆ ಗುಡ್‌ಬೈ ಹೇಳಿದ್ದಾರೆ. ವರ್ಮಾ ಅವರು ಮೂರು ವರ್ಷಗಳ ಹಿಂದೆ ಅಕ್ಸೆಂಚರ್ ಸೇರಿದ್ದರು. ಇದಕ್ಕೂ ಮೊದಲು ಅವರು ಅಕ್ಸೆಂಚರ್‌ನ ಹೆಲ್ತ್ ಮತ್ತು ಸಾರ್ವಜನಿಕ ಸೇವಾ ವಿಭಾಗ ಕಾರ್ಯನಿರ್ವಾಹಕ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದರು. ಅಕ್ಸೆಂಚರ್ ಹೆಲ್ತ್ ವಿಭಾಗ ದೇಶದ ಪ್ರಮುಖ ಆರೋಗ್ಯ ಯೋಜನೆಗಳನ್ನು ನಿಭಾಯಿಸುತ್ತಿದೆ.

ಕೇರಳಕ್ಕೆ ಪಿಎಟಿಎ ಗರಿ
ಕೇರಳವು ಪ್ರವಾಸೋದ್ಯಮದಲ್ಲಿ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಪೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ (ಪಿಎಟಿಎ) ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕುಮಾರಕೊಮ್ ರೆಸ್ಪಾನ್ಸೆಬಲ್ ಟೂರಿಸಂ ಯೋಜನೆಗೆ ಪಿಎಟಿಎ ಗೋಲ್ಡ್ ಮತ್ತು ಮಾರ್ಕೆಟಿಂಗ್ ಮೀಡಿಯಾ ವಿಭಾಗದಲ್ಲಿ ಕೇರಳ ಪ್ರವಾಸೋದ್ಯಮದ ಇ-ನ್ಯೂಸ್‌ಸ್ಲೇಟರ್‌ಗೆ ಮತ್ತೊಂದು ಪ್ರಶಸ್ತಿ ದೊರೆತಿದೆ. ವಿಶೇಷ ಎಂದರೆ, ಇ ನ್ಯೂಸ್‌ಸ್ಲೇಟರ್‌ಗೆ ಸತತ ಎರಡನೇ ಬಾರಿಗೆ ಪಿಎಟಿಎಂ ಪ್ರಶಸ್ತಿ ದೊರೆತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com