
ಗೋದ್ರೇಜ್ ಗ್ರೂಪ್‌ನ ಭಾಗವಾಗಿರುವ ಗೋದ್ರೇಜ್ ಪ್ರಾಪರ್ಟೀಸ್‌ನ ಸಂಚಿತ ಲಾಭ ಶೇ.9ರಷ್ಟು ಕುಸಿತಕಂಡಿದೆ. ಹೆಚ್ಚುತ್ತಿರುವ ವೆಚ್ಚದಿಂದಾಗಿ ಈ ಕುಸಿತ ದಾಖಲಾಗಿದೆ. ಕಳೆದ ವರ್ಷ ಕಂಪನಿಯು ರು. 53.21 ಕೋಟಿ ಲಾಭ ಗಳಿಸಿತ್ತು. ಆದರೆ, ಜನವರಿ- ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ ಶೇ. 38ರಷ್ಟು ಹೆಚ್ಚಳವಾಗಿತ್ತು. ಇದೇ ಅವಧಿಯಲ್ಲಿ ಕಳೆದ ವರ್ಷ ರು. 311.86 ಕೋಟಿ ಆದಾಯ ಗಳಿಸಿತ್ತು. ಆದರೆ, ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ವೆಚ್ಚ ಶೇ.65ರಷ್ಟು ಹೆಚ್ಚಾಗಿದೆ.
Advertisement