ಮುಂಬೈನಲ್ಲಿ ಅತಿ ಹೆಚ್ಚು ಇಂಟರ್‏ನೆಟ್ ಬಳಕೆದಾರರು

ದೇಶದ ೨೪೩ ಮಿಲಿಯನ್ ಅಂತರ್ಜಾಲ ಬಳಗೆದಾರರಲ್ಲಿ ಮುಂಬೈ ನದ್ದೇ ಸಿಂಹಪಾಲು....
ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ

ನವದೆಹಲಿ: ದೇಶದ ೨೪೩ ಮಿಲಿಯನ್ ಅಂತರ್ಜಾಲ ಬಳಕೆದಾರಲ್ಲಿ ಮುಂಬೈ ನದ್ದೇ ಸಿಂಹಪಾಲು. ಒಂದು ಅಧ್ಯಯನದ ಪ್ರಕಾರ ಅಲ್ಲಿ ಇಂಟರ್‏ನೆಟ್ ಬಳಕೆದಾರರ ಸಂಖ್ಯೆ  ೧೬.೪ ಮಿಲಿಯನ್.

ಭಾರತದ ಈ ವಾಣಿಜ್ಯ ರಾಜಧಾನಿಯ ಇಂಟರ್‏ನೆಟ್ ಬಳಕೆದಾರರ ಸಂಖ್ಯೆ ಅಕ್ಟೋಬರ್ ೨೦೧೩ ರಲ್ಲಿನ ೧೨ ಮಿಲಿಯನ್ ನಿಂದ ಅಕ್ಟೋಬರ್ ೨೦೧೪ ಕ್ಕೆ ೧೬.೪ ಮಿಲಿಯನ್ ಗೆ ಏರಿಕೆ ಕಂಡಿದೆ ಎಂದು ಇಂಟರ್ ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಎಐ) ಮತ್ತು ಐ ಎಂ ಆರ್ ಬಿ ನಡೆಸಿದ ಜಂಟಿ ಅಧ್ಯಯನದಲ್ಲಿ ತಿಳಿಸಿದೆ.

ರಾಷ್ಟ್ರದ ರಾಜಧಾನಿ ದೆಹಲಿ ೧೨.೧ ಮಿಲಿಯನ್ ಬಳಕೆದಾರರೊಂದಿಗೆ ಎರಡನೆ ಸ್ಥಾನದಲ್ಲಿದ್ದು, ವರ್ಷದಿಂದ ವರ್ಷಕ್ಕೆ ಅತಿ ಹೆಚ್ಚಿನ ಏರಿಕೆ ಅಂದರೆ ೫೦% ಏರಿಕೆ ಕಂಡಿದೆ.

ಮುಂಚೂಣಿಯಲ್ಲಿರುವ ಎಂಟು ನಗರಗಳು: ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆ ನಗರಗಳು ಒಟ್ಟಿಗೆ ೫೮ ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಈ ಅಧ್ಯಯನ ತಿಳಿಸಿದೆ.

ದೇಶದ ನಾಲ್ಕು ಮುಖ್ಯ ಮೆಟ್ರೋಗಳು ೨೩% ಇಂಟರ್‏ನೆಟ್ ಬಳಕೆದಾರರನ್ನು ಹೊಂದಿದ್ದು, ಇನ್ನಿತರ ೪ ಮೆಟ್ರೊಗಳಲ್ಲಿ ೧೧% ಇಂಟರ್‏ನೆಟ್ ಬಳಸುವವರಿದ್ದಾರೆ.

ಇಂಟರ್‏ನೆಟ್ ಬಳಸುವ ಇನ್ನುಳಿದ ಪ್ರಮುಖ ನಗರಗಳೆಂದರೆ, ಸೂರತ್ (೨.೯೭ ಮಿಲಿಯನ್), ಜೈಪುರ (೨.೩೫ ಮಿಲಿಯನ್) ಲಕ್ನೌ (೧.೯೫ ಮಿಲಿಯನ್) ಮತ್ತು ವಡೋದರ (೧.೮೫ ಮಿಲಿಯನ್) .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com