ಮತ್ತೆ ಶುರುವಾಯ್ತು ವಿಶ್ವ ವಾಣಿಜ್ಯ ಕೇಂದ್ರ

13 ವರ್ಷಗಳ ಹಿಂದೆ, ಜಗತ್ತನ್ನೇ ಬೆಚ್ಚಿ...
ನೂತನವಾಗಿ ನಿಮಾರ್ಣವಾದ ನ್ಯೂಯಾರ್ಕ್ನ ವಿಶ್ವ ವಾಣಿಜ್ಯ ಕೇಂದ್ರ.
ನೂತನವಾಗಿ ನಿಮಾರ್ಣವಾದ ನ್ಯೂಯಾರ್ಕ್ನ ವಿಶ್ವ ವಾಣಿಜ್ಯ ಕೇಂದ್ರ.

13 ವರ್ಷಗಳ ಹಿಂದೆ, ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರ 13 ವರ್ಷಗಳ ನಂತರ ಈಗ ಮತ್ತೆ ತಲೆ ಎತ್ತಿ ನಿಂತಿದೆ. ಭಾರತೀಯ ಕಾಲಮಾನದ ಪ್ರಕಾರ, ಬುಧವಾರ ಬೆಳಗ್ಗೆಯಿಂದ ಕೇಂದ್ರ ಪುನಃ ಕಾರ್ಯಾರಂಭ ಮಾಡಿದೆ.

ಹಿಂದೆ ವಿಶ್ವ ವಾಣಿಜ್ಯ ಕೇಂದ್ರದ ಎರಡು ಕಟ್ಟಡಗಳಿದ್ದವು. ಈ ಬಾರಿ ಒಂದು ಕಟ್ಟಡ ನಿರ್ಮಾಣವಾಗಿದೆ. ಹೊಸ ನಿರ್ಮಾಣಕ್ಕೆ 13 ವರ್ಷಗಳು ಹಿಡಿದಿವೆ. ಭಯೋತ್ಪಾದನೆ ವಿರುದ್ಧದ ವಿಜಯದ ಪ್ರತೀಕ ಎಂದು ಬಣ್ಣಿಸಲ್ಪಟ್ಟಿರುವ ಈ ಕಟ್ಟಡದ ಬಗ್ಗೆ ಒಂದಿಷ್ಟು ಮಾಹಿತಿ.

ಹೇಗಿದೆ ಕಟ್ಟಡ?

  • ಹೊಸ ಕಟ್ಟಡಕ್ಕೆ ಖರ್ಚಾದ ಮೊದ್ದ 1854 ಕೋಟಿ
  • ಹೊಸ ಕೇಂದ್ರದಲ್ಲಿರುವ ಅಂತಸ್ತುಗಳ ಸಂಖ್ಯೆ 102
  • ಹೊಸ ವಾಣಿಜ್ಯ ಕೇಂದ್ರದ ಎತ್ತರ 1776 ಅಡಿ
  • ಕಟ್ಟಡ ನಿರ್ಮಾಣದಲ್ಲಿ ತೊಡಗಿದವರ ಸಂಖ್ಯೆ 10000
  • ಭದ್ರತೆಗಾಗಿ ಒದಗಿಸಲಾಗಿರುವ ಪೊಲೀಸರ ಸಂಖ್ಯೆ 200
ವೈಶಿಷ್ಟ್ಯ
  • ಭೂಮಿಯ ಪಶ್ಚಿಮ ಭಾಗದಲ್ಲಿ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ
  • ಸಂಪೂರ್ಣ ಬಾಂಬ್ ನಿರೋಧಕ
  • ಅಡಿಪಾಯವೇ 20 ಅಂತಸ್ತುಗಳಷ್ಟು ಆಳ
  • 200 ಮೀ. ಆಳದವರೆಗೂ ಸಾಗಿರುವ ಕಟ್ಟಡದ ಪಿಲ್ಲರ್‌ಗಳು.
  • ಹಿಂದಿದ್ದ ಎರಡೂ ಕಟ್ಟಡಗಳಲ್ಲಿದ್ದ ಎಲ್ಲಾ ಸೌಕರ್ಯ, ಸೇವೆಗಳು ಈಗ ಒಂದೇ ಕಟ್ಟಡದಲ್ಲಿ
  • 104 ಅಂತಸ್ತುಗಳ ಕಟ್ಟಡದಲ್ಲಿ ಶೇ.60ರಷ್ಟು ಭಾಗ ಜಾಹೀರಾತು ಸಂಸ್ಥೆ ಕಿಡ್ಸ್ ಕ್ರಿಯೇಟಿವ್, ಲೆಜೆಂಡ್ ಹಾಸ್ಪಿಟಾಲಿಟಿ ಸಂಸ್ಥೆಗಳ ಪಾಲು
  • ಲೋಯರ್ ಮ್ಯಾನ್‌ಹಟನ್‌ನಲ್ಲಿರುವ ಈ ಕಟ್ಟಡಕ್ಕೆ ಅಮೆರಿಕದ ಅತಿ ಸುರಕ್ಷಿತ ಕಟ್ಟಡ ಎಂಬ ಹೆಗ್ಗಳಿಕೆ
  • ಕಚೇರಿಗಳು ಆರಂಭವಾಗಿದ್ದರೂ, ಅಧಿಕೃತ ಉದ್ಘಾಟನೆ ದಿನಾಂಕ ಇನ್ನೂ ನಿಗದಿಯಾಗಿಲ್ಲ
ಅಳಿದ ಅವಳಿ
  • 100 ದಾಳಿಯಿಂದಾಗಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಆರಿಸಲು ಅಗ್ನಿಶಾಮಕ ದಳ ತೆಗೆದುಕೊಂಡ ದಿನಗಳು
  • 1.8 ಮಿಲಿಯನ್ ಟನ್ ದಾಳಿಯಿಂದಾಗಿ ಸೃಷ್ಟಿಯಾದ ಒಟ್ಟು ಅವಶೇಷ
  • ರು.4,500 ಕೋಟಿ- ಅವಶೇಷಗ, ತ್ಯಾಜ್ಯಗಳ ವಿಲೇವಾರಿಗಾಗಿ ಖರ್ಚಾದ ಮೊತ್ತ
  • 291 ಅವಶೇಷಗಳಡಿಯಿಂದ ತೆಗೆಯಲಾದ ಶವಗಳ ಸಂಖ್ಯೆ
ರಕ್ತಸಿಕ್ತ ಇತಿಹಾಸ
  • 60 ಕಟ್ಟಡಗಳ ನಿರ್ಮಾಣ ಹಂತದಲ್ಲೇ ಸಾವಿಗೀಡಾದವರ ಸಂಖ್ಯೆ
  • 19 ಅವಲಿ ಕಟ್ಟಡಗಳಲ್ಲಿ ನಡೆದ ಕೊಲೆ ಪ್ರಕರಣಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com