೧ ಘಂಟೆಯಲ್ಲಿ ೨ ಬಿಲಿಯನ್ ಡಾಲರ್ ವಹಿವಾಟು ನಡೆಸಿದ ಆಲಿಬಾಬಾ

ಭಾರತೀಯ ಇ ಕಾಮರ್ಸ್ ಸಂಸ್ಥೆಗಳಾದ ಫ್ಲಿಪ್ ಕಾರ್ಟ್ ಆಗಲಿ, ಅಮೇರಿಕಾ ಮೂಲದ ಅಮೆಜಾನ್ ಆಗಲಿ, ಇವುಗಳಿಗಿಂತ ದೈತ್ಯ...
ಆಲಿಬಾಬಾ ಇ-ಕಾಮರ್ಸ್ ಸಂಸ್ಥೆ (ಸಂಗ್ರಹ ಚಿತ್ರ)
ಆಲಿಬಾಬಾ ಇ-ಕಾಮರ್ಸ್ ಸಂಸ್ಥೆ (ಸಂಗ್ರಹ ಚಿತ್ರ)

ಹಾಂಕಾಂಗ್: ಭಾರತೀಯ ಇ-ಕಾಮರ್ಸ್ ಸಂಸ್ಥೆಗಳಾದ ಫ್ಲಿಪ್ ಕಾರ್ಟ್ ಆಗಲಿ, ಅಮೇರಿಕಾ ಮೂಲದ ಅಮೆಜಾನ್ ಆಗಲಿ, ಇವುಗಳಿಗಿಂತ ದೈತ್ಯ ಸಂಸ್ಥೆಯಾಗಿರುವ ಚೈನಾ ಮೂಲದ ಇ-ಕಾಮರ್ಸ್ ಮಾರಾಟಗಾರ ಸಂಸ್ಥೆ  'ಆಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್' ತನ್ನ ವಾರ್ಷಿಕ ಶಾಪಿಂಗ್ ಹಬ್ಬ ಶುರುವಾದ ೧ ಘಂಟೆ ೧೨ ಸೆಕಂಡುಗಳಲ್ಲಿ ೨ ಬಿಲಿಯನ್ ಯು ಎಸ್ ಡಾಲರ್ ಮೊತ್ತದ ವಸ್ತುಗಳನ್ನು ಮಾರಾಟ ಮಾಡಿದೆ.

ಆಲಿಬಾಬ ಕಳೆದ ವರ್ಷ ತನ್ನ ವಾರ್ಷಿಕ ಶಾಪಿಂಗ್ ಹಬ್ಬದಲ್ಲಿ ಅರ್ಧ ದಿನದಲ್ಲಿ ೩.೨ ಬಿಲಿಯನ್ ಡಾಲರ್ ವಹಿವಾಟು ನಡೆಸಿತ್ತು. ಅದರ ಹಿಂದಿನ ವರ್ಷದ ಹಬ್ಬದಲ್ಲಿ ನಡೆಸಿದ ಒಂದು ದಿನದ ವಹಿವಾಟು ಅದು.

೨ ಬಿಲಿಯನ್ ಡಾಲರ್ ವಹಿವಾಟಿನ ಅರ್ಧ ಭಾಗದ ವಸ್ತುಗಳನ್ನು "೧೧.೧೧ ಶಾಪಿಂಗ್ ಹಬ್ಬ" ಪ್ರಾರಂಭವಾದ ೧೮ ನಿಮಿಷದಲ್ಲಿ ಮಾರಾಟ ಮಾಡಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.

೨೪ ಘಂಟೆಗಳಲ್ಲಿ ನಡೆದ ವಿಶ್ವದ ಅತಿ ದೊಡ್ಡ ಅಂತರ್ಜಾಲ ಮಾರಾಟ ಇದು ಎಂದು ಹೇಳಿಕೊಳ್ಳುವ ಈ ಸಂಸ್ಥೆ ಪ್ರಾರಂಭವಾದದ್ದು ೨೦೦೯ ರಲ್ಲಿ.

ಈ ವರ್ಷದ ಶಾಪಿಂಗ್ ಹಬ್ಬ ಜಾಗತಿಕವಾಗಿದ್ದು ೨೦೦ ರಾಷ್ಟ್ರಗಳಿಂದ ಗ್ರಾಹಕರು ವಸ್ತುಗಳನ್ನು ಖರೀದಿಸುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com