ಕೆವಿಪಿ ಯೋಜನೆ ಪುನಾರಂಭ: 100 ತಿಂಗಳಲ್ಲಿ ಹಣ ದುಪ್ಪಟ್ಟಾಗಲಿದೆ

'ಕಿಸಾನ್ ವಿಕಾಸ್ ಪತ್ರ'(ಕೆವಿಪಿ) ಯೋಜನೆಯಡಿಯಲ್ಲಿ ಹಣ ಹೂಡಿದರೆ 100...
ಕೆವಿಪಿ ಯೋಜನೆ ಪುನಾರಂಭ: 100 ತಿಂಗಳಲ್ಲಿ ಹಣ ದುಪ್ಪಟ್ಟಾಗಲಿದೆ

ನವದೆಹಲಿ: 'ಕಿಸಾನ್ ವಿಕಾಸ್ ಪತ್ರ'(ಕೆವಿಪಿ) ಯೋಜನೆಯಡಿಯಲ್ಲಿ ಹಣ ಹೂಡಿದರೆ 100 ತಿಂಗಳಲ್ಲಿ ಹೂಡಿಕೆ ಹಣ ದುಪ್ಪಟ್ಟವಾಗಲಿದೆ.

ಸಾರ್ವಜನಿಕರಿಗಾಗಿಯೇ ಕೇಂದ್ರ ಸರ್ಕಾರ ಸಣ್ಣ ಉಳಿತಾಯದ ಜನಪ್ರಿಯ ಯೋಜನೆ 'ಕಿಸಾನ್ ವಿಕಾಸ್ ಪತ್ರ'(ಕೆವಿಪಿ) ಮಂಗಳವಾರದಿಂದ ಪುನಾರಂಭ ಮಾಡಲಿದೆ.

ಜನಪ್ರಿಯ ಉಳಿತಾಯ ಯೋಜನೆ 'ಕಿಸಾನ್ ವಿಕಾಸ್ ಪತ್ರ' ಪುನಾರಂಭಕ್ಕೆ ಕೇಂದ್ರ ಸರ್ಕಾರ ಇಂದು ಚಾಲನೆ ನೀಡಲಿದ್ದು, ಸಾರ್ವಜನಿಕರ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಪುನಾರಂಭಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಯೋಜನೆ ಪುನಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿಯಲ್ಲಿ ಹಣ ಹೂಡಲು ಗರಿಷ್ಠ ಮಿತಿ ಇರುವುದಿಲ್ಲ. 1,000, 5000, 10000, 50000ರಂತೆ ಹಣ ಹೂಡಬಹುದು.

ಅಂಚೆ ಕಚೇರಿಗಳ ಮೂಲಕ ಕೆವಿಪಿ ವಿತರಣೆ ಮಾಡಲಾಗುವುದು. ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿದ ಹಣ ಎಂಟು ವರ್ಷ 4 ತಿಂಗಳಲ್ಲಿ ದುಪ್ಪಟ್ಟಾವಾಗುತ್ತದೆ.

ಮುಂದಿನ ಮಾರ್ಚ್ ವೇಳೆಗೆ ಕೆವಿಪಿ ಮೂಲಕ 20,000 ಕೋಟಿ ರು. ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

ಈ ಯೋಜನೆಯ ಸಣ್ಣ ಹೂಡಿಕೆದಾರರ ಹಣ ದುರುಪಯೋಗವಾಗುವುದನ್ನು ತಪ್ಪಿಸುತ್ತದೆ. ಸಣ್ಣ ಪ್ರಮಾಣದ ಹೂಡಿಕೆಗಳನ್ನು ಉತ್ತೇಜಿಸುವ ಮತ್ತು ದೇಶದಲ್ಲಿ ಉಳಿತಾಯ ಮೊತ್ತವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತೆ ಈ ಯೋಜನೆಗೆ ಚಾಲನೆಗೆ ಮುಂದಾಗಿದೆ.

ಕೆವಿಪಿ  ಯೋಜನೆ ದುರುಪಯೋಗ ಆಗುತ್ತಿದೆ ಎಂದು ಶ್ಯಾಮಲಾ ಗೋಪಿನಾಥ್ ಸಮಿತಿ ವರದಿ ನೀಡಿದ ಬಳಿಕ 2011ರಲ್ಲಿ ಯುಪಿಎ ಸರ್ಕಾರ 'ಕೆವಿಪಿ' ವಿತರಣೆಯನ್ನು ರದ್ದುಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com