ಕುಪ್ಪಳಿಸಿದ ಬಜಾರು

ಕಳೆದ ವಾರದಲ್ಲಿ ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಸಂವೇದಿ...
ಸಂವೇದಿ ಸೂಚ್ಯಂಕ
ಸಂವೇದಿ ಸೂಚ್ಯಂಕ

ಕಳೆದ ವಾರದಲ್ಲಿ ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮೇಲೇರುತ್ತಲೇ ಜಿಗಿದಿತ್ತು. ಅದರಲ್ಲಿ ಬ್ಯಾಂಕಿಂಗ್ ಷೇರುಗಳ ಪಾತ್ರವೇ ಬಲು ದೊಡ್ಡದು ಹಾಗೂ ನಿರ್ಣಾಯಕ. ಸೆನ್ಸೆಕ್ಸ್ 28000ರ ಗಡಿ ದಾಟಿ ನಿಂತಾಗ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಸೂಚ್ಯಂಕದ ನಿಫ್ಟಿ 8470ರಲ್ಲಿತ್ತು. ಇದ್ದಕ್ಕಿದ್ದಂತೆ ಈ ಜಿಗಿತಕ್ಕೇನು ಕಾರಣ?

ಪಂಡಿತರ ಪ್ರಕಾರ ಬ್ಯಾಂಕ್ ಷೇರುಗಳ ಬೆಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿದ್ದರ ಜತೆಯಲ್ಲೇ ಚೀನಾದ ಕೇಂದ್ರ ಬ್ಯಾಂಕ್ ಬಡ್ಡಿ ದರವನ್ನು ಇಳಿಸಿದ್ದು, ಭಾರತದಲ್ಲೂ ಈಗ ಬ್ಯಾಂಕ್ ಬಡ್ಡಿದರವನ್ನು ಇಳಿಸಲು ಭಾರಿ ಒತ್ತಾಯವಿದೆ.

ವಾಣೀಜ್ಯೋದ್ಯಮಿಗಳ ಪ್ರಾತಿನಿಧಿಕ ಸಂಸ್ಥೆಗಳು ಬಡ್ಡಿ ದರಗಳ ಇಳಿತಕ್ಕೆ ಒತ್ತಾಯ ಪಡಿಸುತ್ತಲೇ ಇವೆ. ಈಗ ವಿತ್ತ ಮೇತ್ರಿ ಅರುಣ್‌ಜೇಟ್ಲಿಯವರೂ ಬಹಿರಂಗವಾಗಿಯೇ ಬಡ್ಡಿ ದರದ ಇಳಿಕೆ ದೇಶದ ಆರ್ಥಿಕ ಪರಿಸ್ಥಿತಿಯ ಈಗಿನ ಸ್ಥಿತಿಗತಿಯಲ್ಲಿ ಆರೋಗ್ಯಕರ ಎಂದಿದ್ದಾರೆ. ಆದರೆ, ಅದಕ್ಕೆ ಅಂತಿಮವಾಗಿ ಹೊಣೆಗಾರ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮನ್ ರಾಜನ್. ಹಣದ ಅತಿಪ್ರಸರಣದ ವೇಗದ ಇಳಿಕೆಯಲ್ಲಿ ರಾಜನ್‌ಗೆ ಇನ್ನೂ ವಿಶ್ವಾಸ ಮೂಡಿದಂತಿಲ್ಲ. ಆದರೂ, ಅವರೂ ಉದ್ಯಮ ವಲಯಕ್ಕೆ ಅನುಕೂಲಕರ ರೀತಿಯಲ್ಲೇ ಮಾತಾಡಿದ್ದಾರೆ.

ತೀರ್ಮಾನ-ಡಿಸೆಂಬರ್ 2
ಈಗ ಉಳಿದಿರುವ ಪ್ರಶ್ನೆ, ಬ್ಯಾಂಕ್ ಬಡ್ಡಿ ದರದ ಇಳಿಕೆಯಲ್ಲ. ಆ ಇಳಿಕೆ ಜಾರಿಯಾಗುವ ದಿನಾಂಕದ್ದು. ಈ ವಿಚಾರದಲ್ಲಿ ಅಷ್ಟರ ಮಟ್ಟಿಗೆ ಒಮ್ಮತ ಮೂಡಿಬರುವಂತಿದೆ. ಈ ವಿಷಯಕ್ಕೆ ಹೊಂದಿಕೊಂಡಂತೆಯೇ ಇರುವ ಇನ್ನೊಂದು ವಿಷಯ ಸರ್ಕಾರಿ ಬಾಂಡ್‌ಗಳ ಬೆಲೆಯದ್ದು. ಹಣದ ಅತಿಪ್ರಸರಣದ ವೇಗ (ಇನ್‌ಫ್ಲೇಷನ್) ಇಳಿಮುಖವಾದಂತೆ, ಅಂತಾರಾಷ್ಟ್ರೀಯ ಪೇಟೆಗಳಲ್ಲಿ ವಸ್ತುಗಳ (ಆಹಾರ ಧನ ಇತ್ಯಾದಿ) ಬೆಲೆ ಇಳಿದಿರುವುದರಿಂದ ಹತ್ತು ವರ್ಷ ಅವಧಿಯ ಸರ್ಕಾರಿ ಬಾಂಡ್ ದರ ಸಾಲಿಯಾನ ಶೇ. 7.7 ರಲ್ಲಿ ನೆಲೆ ಕಂಡುಕೊಳ್ಳಬಹುದು.

ಸಣ್ಣ ಎಂಎಫ್‌ಗಳ ದೊಡ್ಡಾಸೆ

ಐವತ್ತು ಕೋಟಿ ರುಪಾಯಿಗಿಂತ ಕಡಿಮೆ 'ಆಸ್ತಿಯ ಮೌಲ್ಯ' ವಿರುವ ಸಣ್ಣ ಮ್ಯೂಚುವಲ್ ಫಂಡ್‌ಗಳು ಬದಲಾದ ಸನ್ನಿವೇಶದಲ್ಲಿ ಕೆಲವು ನೂತನ ಯೋಜನೆಗಳನ್ನು ಪ್ರಕಟಿಸುವ ಸಂಭವವಿದೆ. ಇದುವರೆಗೆ ಇಂಥ ಫಂಡ್‌ಗಳಿಗೆ ಹೊಸ ಯೋಜನೆ ಆರಂಭಿಸುವ ಅವಕಾಶ ಇರಲಿಲ್ಲ. ಅಂಥ ಅವಕಾಶವನ್ನು ಪೇಟೆಯ ಕಾವಲುಗಾರ ಸಂಸ್ಥೆ ಸೆಬಿ ಈಗ ನೀಡಿದೆ. ದೇಶದಲ್ಲಿ ಇಂಥ ಹತ್ತು ಸಂಸ್ಥೆಗಳಿವೆ. ವಿತ್ತೀಯ ನಿಯಂತ್ರಣ ಸಂಸ್ಥೆಯ ಈ ವಿಶೇಷ ಅನುಮತಿ ಸ್ವಾಗತಾರ್ಹ. ಸಣ್ಣ ಸಂಸ್ಥೆಗಳಿಗೂ ವ್ಯವಹಾರ ನಡೆಸಲು ಅವಕಾಶ ಸಿಗುತ್ತದೆ. ಈ ವರ್ಷ ದೊಡ್ಡ ಫಂಡ್ ಕಂಪನಿಗಳು 55 ಹೊಸ ಯೋಜನೆಗಳನ್ನು ಆರಂಭಿಸಿದ್ದರು.

ಸಕ್ಕರೆ ಸಬ್ಸಿಡಿ ವಿವಾದ
ವಿಶ್ವ ವಾಣಿಜ್ಯ ಸಂಸ್ಥೆಗಳ ಕೆಲವು ರಾಷ್ಟ್ರಘ (ಆಸ್ಟ್ರೇಲಿಯಾ, ಪಾಕಿಸ್ತಾನ ಸೇರಿದಂತೆ) ಭಾರತ ಸಕ್ಕರೆ ರಫ್ತಿಗೆ ನೀಡುತ್ತಿರುವ ಸಬ್ಲಿಡಿಯ ಪ್ರಮಾಣದ ವಿಚಾರದಲ್ಲಿ ತಗಾದೆಯನ್ನು ಎತ್ತಿದೆ. ವಿಶ್ವ ವಾಣಿಜ್ಯ ಸಂಸ್ಥೆಯ ಬಾಲಿ ಸಮ್ಮೇಳನದಲ್ಲಿ ಸಕ್ಕರೆ ಸಬ್ಲಿಡಿಯನ್ನು ಕೈ ಬಿಡುವ ಕ್ರಮಗಳನ್ನು ಕುರಿತು ಚರ್ಚಿಸಲಾಗಿತ್ತು. ಬ್ರೆಜಿಲ್ ಬಿಟ್ಟರೆ ಭಾರತವೇ ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದ ಸಕ್ಕರೆಯನ್ನು ಉತ್ಪಾದಿಸುವ ರಾಷ್ಟ್ರ. (560,000ಟನ್‌ಗಳು). ಭಾರತ ಕನಿಷ್ಠ ಬೆಂಬಲ ರುಪಾಯಿ ಲೆಕ್ಕದಲ್ಲಿ ಪ್ರಕಟಿಸದೇ ಡಾಲರ್ ಲೆಕ್ಕವನ್ನೇಕೆ ಬಳಸಿದ್ದು? ಯಾರಿಗೂ ಉತ್ತರ ಗೊತ್ತಿದ್ದಂತೆ ಇಲ್ಲ.

ಕೊನೆ ಮಾತು
ದೇಶದಲ್ಲಿ ಈ ಬಾರಿ ಸಕ್ಕರೆಯ ಉತ್ಪಾದನೆ ಹೆಚ್ಚಿದೆ. ಬೇಡಿಕೆ ಹೆಚ್ಚಿಲ್ಲ. ಬೆಲೆ ಈಗಾಗಲೇ ಇಳಿಮುಖವಾಗಿದೆ.

- ಸತ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com