ಬಿಎಸ್ಎನ್ ಎಲ್ ಹೊಸ ಆಫರ್ ; ರಾತ್ರಿ ವೇಳೆ ಅನ್ ಲಿಮಿಟೆಡ್ ಉಚಿತ ಕರೆ

ತನ್ನ ಲ್ಯಾಂಡ್ ಲೈನ್ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಬಿಎಸ್ಎನ್ ಎಲ್ ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು ಗುರುವಾರ ಹೊಸ ಆಫರ್ ಘೋಷಿಸಿದೆ....
ಬಿಎಸ್ಎನ್ಎಲ್
ಬಿಎಸ್ಎನ್ಎಲ್
Updated on

ನವದೆಹಲಿ : ತನ್ನ ಲ್ಯಾಂಡ್ ಲೈನ್ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ  ಬಿಎಸ್ಎನ್ ಎಲ್  ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು ಗುರುವಾರ ಹೊಸ ಆಫರ್ ಘೋಷಿಸಿದೆ. ಆಫರ್  ಏನು ಅಂದರೆ, ಲ್ಯಾಂಡ್ ಲೈನ್ ನಲ್ಲಿ  ರಾತ್ರಿ 9ರಿಂದ ಬೆಳಗ್ಗಿನ ಜಾವ 7ಗಂಟೆವರೆಗೆ ಅನ್ ಲಿಮಿಟೆಡ್ ಫ್ರೀ ಕಾಲ್ ಮಾಡಬಹುದು. ಲ್ಯಾಂಡ್ ಲೈನ್ ಟು ಲ್ಯಾಂಡ್ ಲೈನ್, ಲ್ಯಾಂಡ್ ಲೈನ್ ಟು ಯಾವುದೇ ಮೊಬೈಲ್ ಗೂ ಕರೆ ಮಾಡಬಹುದಾಗಿದೆ.

ಬಿಎಸ್ಎನ್ಎಲ್ ನ ಈ ಹೊಸ ಯೋಜನೆ ಮೇ 1ರಿಂದ ಜಾರಿಯಾಗಲಿದೆ. ರಾತ್ರಿ 9ರಿಂದ ಬೆಳಗ್ಗಿನ ಜಾವ 7ಗಂಟೆಯವರೆಗೆ ದೇಶಾದ್ಯಂತ ಎಲ್ಲಿಗೆ ಬೇಕಾದರೂ ಕರೆ ಮಾಡಬಹುದು. ಅದಕ್ಕೆ ಯಾವುದೇ ಜಾರ್ಜ್ ಇಲ್ಲ. ಇದು ಉಚಿತ ಕರೆ ಎಂದು ಬಿಎಸ್ಎನ್ ಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಯೋಜನೆ  ಗ್ರಾಮೀಣ ಹಾಗೂ ನಗರ ಪ್ರದೇಶದ ಲ್ಯಾಂಡ್ ಲೈನ್ ಗಳಿಗೂ ಅನ್ವಯವಾಗಲಿದೆ.

ಟ್ರಾಯ್ ನ ನೂತನ ಅಂಕಿ ಅಂಶದ ಪ್ರಕಾರ ಬಿಎಸ್ಎನ್ ಎಲ್ ಲ್ಯಾಂಡ್ ಲೈನ್ ಮಾರ್ಕೆಟ್ ಬಹುತೇಕ ಕುಸಿತ ಕಂಡಿದೆ. ಕಳೆದ ಫೆಬ್ರುವರಿ ತಿಂಗಳಿನಲ್ಲಿ ಸುಮಾರು 162,556 ಗ್ರಾಹಕರು ಲ್ಯಾಂಡ್ ಲೈನ್ ಸಂಪರ್ಕವನ್ನು ತೆಗೆದುಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com