ಮುಂಬೈ: ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ರು.4,713.57 ಕೋಟಿ ನಿವ್ವಳ ಲಾಭ ಗಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ ರು.4,448.15 ಕೋಟಿಗೆ ಹೋಲಿಸಿದರೆ ಶೇ.5.9ರಷ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಬ್ಯಾಂಕ್ ರು.62,927.46 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರು.60,620.93 ಕೋಟಿ ಗಳಿಸಿತ್ತು.
ವಸೂಲಾಗದ ಸಾಲಗಳನ್ನು ಕೈಬಿಡಲು ಮಾಡಿದ ವೆಚ್ಚ ಈ ಬಾರಿ ಇಳಿಮುಖ ಕಂಡಿದೆ. ಇದೇ ಅವಧಿಯಲ್ಲಿ ಬ್ಯಾಂಕ್‍ನ ಅನುತ್ಪಾದಕ ಆಸ್ತಿ (ಎನ್‍ಪಿಎ) ಪ್ರಮಾಣ ಸಹ ಕಳೆದ ವರ್ಷ ಶೇ.4.90 ಇದ್ದದು ಈ ಬಾರಿ ಶೇ.4.29ಕ್ಕೆ ಇಳಿಮುಖ ಕಂಡಿದೆ.
Advertisement