ಐಟಿ, ಬ್ಯಾಂಕ್ ಷೇರು ಆಕರ್ಷಣೆ

ಕಳೆದ ವಾರದ ಕೊನೆ ಶುಕ್ರವಾರ ಮಾರುಕಟ್ಟೆ ಸೂಚ್ಯಂಕಗಳು ಗಣನೀಯ ಏರಿಕೆದಾಖಲಿಸಿದವು. ಸೆನ್ಸೆಕ್ಸ್ 500ಕ್ಕೂ ಹೆಚ್ಚು ಅಂಕ ಏರಿಕೆ ದಾಖಲಿಸಿದರೆ...
ಸೆನ್ಸೆಕ್ಸ್
ಸೆನ್ಸೆಕ್ಸ್

ಬೆಂಗಳೂರು: ಕಳೆದ ವಾರದ ಕೊನೆ ಶುಕ್ರವಾರ ಮಾರುಕಟ್ಟೆ ಸೂಚ್ಯಂಕಗಳು ಗಣನೀಯ ಏರಿಕೆದಾಖಲಿಸಿದವು. ಸೆನ್ಸೆಕ್ಸ್ 500ಕ್ಕೂ ಹೆಚ್ಚು ಅಂಕ ಏರಿಕೆ ದಾಖಲಿಸಿದರೆ ನಿಫ್ಟಿ 100ಕ್ಕೂ ಹೆಚ್ಚು ಅಂಕ ಗಳಿಸಿತು. ಆದರೂ ಇಡೀ ವಾರದ ವಹಿವಾಟನ್ನು ಒಟ್ಟಾರೆಯಾಗಿ ನೋಡಿದರೆ ನಷ್ಟದೊಂದಿಗೆ ವಾರಾಂತ್ಯ ಕಂಡಿದೆ.ಕಳೆದ ವಾರ ಮಾರುಕಟ್ಟೆ ಚಲನೆಯನ್ನು ನಿರ್ಧರಿಸಿದ್ದ ಕೆಲವು ಅಂಶಗಳು ಈ ವಾರವೂ ಮುಂದುವರೆಯುವ ಸಾಧ್ಯತೆಗಳಿವೆ. ಪ್ರಮುಖವಾಗಿ ಚೀನಾ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿರುವುದು, ಹಣದುಬ್ಬರ ಇಳಿಮುಖ ಕಂಡಿರುವುದು, ಡಾಲರ್ ಮೌಲ್ಯ ಏರುತ್ತಿರುವುದು ವಹಿವಾಟಿನ ಗತಿಯನ್ನು ನಿರ್ಧರಿಸಲಿವೆ.ಚೀನಾದ ಆರ್ಥಿಕತೆ ನಿಧಾನವಾಗಿ ಹಿನ್ನಡೆ ಕಾಣುತ್ತಿರುವುದರಿಂದ ಜಾಗತಿಕ ಹೂಡಿಕೆದಾರರು ಭಾರತದತ್ತ ಮುಖ ಮಾಡಲಿದ್ದಾರೆ. ಇದರಿಂದ ದೇಶೀಯ ಸಂವೇದಿ ಸೂಚ್ಯಂಕಗಳು ಗಗನಮುಖಿಯಾಗಲಿವೆ ಎಂದು ಕೆಲವು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಈ ಸಾಧ್ಯತೆಗಳನ್ನು ತಳ್ಳಿಹಾಕಿದ್ದಾರೆ.ಚೀನಾದಲ್ಲಿನ ಆರ್ಥಿಕ ಪ್ರಗತಿ ಭಾರತದ ಆಮದು ಮತ್ತು ರಫ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಇತ್ತ ಹೂಡಿಕೆ ಇತ್ತ ಹರಿದುಬರುವ ಸಾಧ್ಯತೆಗಳು ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಚೀನಾ ಉಕ್ಕು, ತಾಮ್ರ ಮತ್ತಿತರ ಲೋಹಗಳ ಆಮದು ಸ್ಥಗಿತಗೊಳಿಸಿದೆ. ಇದು ಟಾಟಾ ಸ್ಟೀಲ್‍ನಂತಹ ಲೋಹ ಕಂಪನಿಗಳಿಗೆ ಹೊಡೆತ ನೀಡಲಿದೆ. ಹೀಗಾಗಿ ಲೋಹ ವಲಯದ ಷೇರುಗಳು ಮಾರಾಟ ಒತ್ತಡಕ್ಕೆ ಸಿಲುಕುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಚೀನಾ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸುತ್ತಿರುವುದು ಹೂಡಿಕೆ ದಾರರಲ್ಲಿ ಇನ್ನಷ್ಟು ಭೀತಿ ಮೂಡಿಸಿದೆ. ಡಾಲರ್ ಮೌಲ್ಯ ಏರಿಕೆ ಕಾಣುತ್ತಿರುವುದು ಭಾರತದ ಐಟಿ ಕಂಪನಿಗಳಿಗೆ ಒಳ್ಳೆಯ ವರದಿಯಾಗಿದೆ. ಇದರಿಂದ ಐಟಿ ಕಂಪನಿಗಳ ಆದಾಯ ಹೆಚ್ಚಲಿದೆ. ಇದರಿಂದ ಐಟಿ ಕಂಪನಿಗಳ ಷೇರು ದರಗಳು ಏರಿಕೆ ಕಾಣುವ ಸಾಧ್ಯತೆಗಳಿವೆ. ನಿಫ್ಟಿ  ಸದ್ಯ 8,500ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ವಹಿವಾಟಾಗುತ್ತಿದೆ. ಈ ವಾರದಲ್ಲಿ ಸಣ್ಣ ಮತ್ತು ಮಧ್ಯಮ ಬಂಡವಾಳ ಸರಕು ಷೇರುಗಳು ಹೆಚ್ಚು  ಆಕರ್ಷಕವಾಗಲಿದ್ದು 9,000 ಮುಟ್ಟಲಿದೆ ಎಂಬ ಅಂದಾಜುಗಳನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಬ್ಯಾಂಕ್ ಗಳನ್ನು ಸ್ವಚ್ಛಗೊಳಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.  ಅಂದರೆ ಬ್ಯಾಂಕ್‍ಗಳಲ್ಲಿನ ಅನುತ್ಪಾದಕ ಆಸ್ತಿ ಮತ್ತು ವಸೂಲಾಗದ ಸಾಲಗಳನ್ನುಕಡಿಮೆಗೊಳಿಸುವುದು, ಖಾಲಿ ಇರುವ ಉನ್ನತ ಮಟ್ಟದಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿರುವುದರಿಂದ ಬ್ಯಾಂಕ್ ಷೇರುಗಳು ಹೂಡಿಕೆದಾರರನ್ನು ಆಕರ್ಷಿಸಬಹುದು. ಕಂಪನಿಗಳು ಪ್ರಕಟಿಸುವ ಮೊದಲ ತ್ರೈಮಾಸಿಕಹಣಕಾಸು ವರದಿಗಳು ಸಹ ಆಯಾ ಕಂಪನಿಗಳಷೇರುಗಳ ಬೇಡಿಕೆ ನಿರ್ಧರಿಸಲಿದೆ. ಹಣದುಬ್ಬರಇಳಿಮುಖ ಕಂಡಿರುವುದು, ಜಿಎಸ್‍ಟಿ ಕುರಿತಂತೆ ಕೇಂದ್ರ ಸರ್ಕಾರ ಬದ್ಧತೆ ತೋರಿರುವುದು ಈ ವಾರವೂ ಸ್ವಲ್ಪಮಟ್ಟಿಗೆ ಪೇಟೆಗೆ ಉತ್ಸಾಹ ತುಂಬುವ ನಿರೀಕ್ಷೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com