ಬ್ಯಾಂಕ್ ರಜೆ

ಪ್ರತಿ ತಿಂಗಳ ಎರಡು ಮತ್ತು ನಾಲ್ಕನೆ ಶನಿವಾರ ಬ್ಯಾಂಕ್‍ಗಳಿಗೆ ರಜೆ ಘೋಷಿಸಿ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಹೊಸ ಆದೇಶ ಸೆಪ್ಟೆಂಬರ್ 1ರಿಂದ ...
ಬ್ಯಾಂಕ್‍
ಬ್ಯಾಂಕ್‍

ನವದೆಹಲಿ: ಪ್ರತಿ ತಿಂಗಳ ಎರಡು ಮತ್ತು ನಾಲ್ಕನೆ ಶನಿವಾರ ಬ್ಯಾಂಕ್‍ಗಳಿಗೆ ರಜೆ ಘೋಷಿಸಿ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಹೊಸ ಆದೇಶ ಸೆಪ್ಟೆಂಬರ್ 1ರಿಂದ ಕಾರ್ಯರೂಪಕ್ಕೆ ಬರಲಿದೆ. ಈ ಎರಡೂ ದಿನ ಬ್ಯಾಂಕ್‍ಗಳಿಗೆ ಬಿಡುವು ನೀಡಬೇಕೆಂದು ನೌಕರರ ಸಂಘಗಳ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದವು. ಈಗ ಅವರ ಬೇಡಿಕೆ ಈಡೇರಿದಂತಾಗಿದೆ. ಸದ್ಯ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳು ಶನಿವಾರ ಅರ್ಧದಿನ ವಹಿವಾಟು ನಡೆಸುತ್ತಿವೆ. ಕೇಂದ್ರ ಸರ್ಕಾರದ ಈ ನೀರ್ಧಾರವನ್ನುಬ್ಯಾಂಕ್ ನೌಕರರ ಸಂಘಟನೆಗಳು ಸ್ವಾಗತಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com