ಷೇರುಪೇಟೆ ಮತ್ತೆ ಚೇತರಿಕೆ

ಹಾವು-ಏಣಿ ಆಟ ಆಡುತ್ತಿರುವ ಮುಂಬೈ ಷೇರುಪೇಟೆ ವ್ಯವಹಾರದಲ್ಲಿ ಮಧ್ಯಾಹ್ನ ನಂತರದ ವಹಿವಾಟಿನಲ್ಲಿ ತಕ್ಷಣ ಜಿಗಿತ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಹಾವು-ಏಣಿ ಆಟ ಆಡುತ್ತಿರುವ ಮುಂಬೈ ಷೇರುಪೇಟೆ ವ್ಯವಹಾರದಲ್ಲಿ ಮಧ್ಯಾಹ್ನ ನಂತರದ ವಹಿವಾಟಿನಲ್ಲಿ ತಕ್ಷಣ ಜಿಗಿತ ಕಂಡುಬಂದಿದೆ. ಯುರೋಪಿಯನ್ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ಮತ್ತು ಷೇರುಗಳನ್ನು ಕಡಿಮೆ ಬೆಲೆಗೆ ಕೊಂಡುಕೊಂಡದ್ದರಿಂದ ಚೇತರಿಕೆ ಕಂಡುಬಂತು. ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ 66.50ಕ್ಕೆ ಹೆಚ್ಚಾಗಿದೆ.

ಕರಾಳ ಸೋಮವಾರದ ಟ್ರೆಂಡಿನಿಂದ ಹೊರಬಂದು ಇಂದು ಬೆಳಗಿನ ವಹಿವಾಟು ಆರಂಭಕ್ಕೆ 380 ಅಂಕಗಳ ಏರಿಕೆ ಕಂಡಿದ್ದ ಸೆನ್ಸೆಕ್ಸ್ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕುಸಿತ ಕಂಡುಬಂದಿತ್ತು. ಆದರೆ ಇತ್ತೀಚಿನ ವರದಿ ನೋಡಿದಾಗ ಮತ್ತೆ ಏರಿಕೆ ಕಂಡುಬಂದಿದೆ.

ಇಂದು ಮಧ್ಯಾಹ್ನ 1.30ರ ಹೊತ್ತಿಗೆ ಸೆನ್ಸೆಕ್ಸ್‌ 25 ಸಾವಿರದ 998 (+ 241.51) ಮತ್ತು ನಿಫ್ಟಿ 7,876.80 (+ 66.60) ಅಂಕಗಳಲ್ಲಿ ವ್ಯವಹಾರ ನಡೆಸುತ್ತಿದ್ದವು.

ಚೀನಾದ ಶಾಂಘೈ ಮಾರುಕಟ್ಟೆಯಲ್ಲಿ ಷೇರುಪೇಟೆ ಶೇಕಡಾ 8ರಷ್ಟು ಕುಸಿತ ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com