ಜೆನರ್ಮ್ ಯೋಜನೆಯ ಶೇ.25 ಮನೆಗಳು ಖಾಲಿ

ನಗರದಲ್ಲಿರುವ ಬಡವರಿಗೆಂದೇ ಕಟ್ಟಿಸಲಾಗಿರುವ ಜವಾಹರಲಾಲ್ ನೆಹರು ನ್ಯಾಷನಲ್ ಅರ್ಬನ್ ರಿನೀವಲ್ ಮಿಷನ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನಗರದಲ್ಲಿರುವ ಬಡವರಿಗೆಂದೇ ಕಟ್ಟಿಸಲಾಗಿರುವ ಜವಾಹರಲಾಲ್ ನೆಹರು ನ್ಯಾಷನಲ್ ಅರ್ಬನ್ ರಿನೀವಲ್ ಮಿಷನ್(ಜೆಎನ್‍ಎನ್‍ಯುಆರ್‍ಎಂ)ನ ಶೇ.25 ರಷ್ಟು ಮನೆಗಳು ಖಾಲಿ ಇವೆ ಎಂದು ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಇಲಾಖೆಯ ಸಹಾಯಕ ಸಚಿವ ಬಾಬುಲ್ ಸುಪ್ರಿಯೋ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. 
ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಅವರು, 10 ರಾಜ್ಯಗಳಲ್ಲಿ ಭಾರಿ ಪ್ರಮಾಣದ ಮನೆಗಳು ಖಾಲಿ ಇವೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜರಾತ್, ದೆಹಲಿ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಛತ್ತೀಸ್‍ಗಡ ಮತ್ತು ತಮಿಳುನಾಡಿನಲ್ಲಿ ಶೇ.92 ರಷ್ಟು ಮನೆಗಳು ಖಾಲಿ ಇವೆ. ಆದರೆ ತ್ರಿಪುರ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಅಸ್ಸಾಂ, ಮಣಿಪುರ ಮತ್ತು ಜಾರ್ಖಂಡ್‍ಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ. 
ದೆಹಲಿಯಲ್ಲೇ ಅತಿ ಹೆಚ್ಚು ಪ್ರಮಾಣದ ಮನೆಗಳು ಖಾಲಿ ಬಿದ್ದಿವೆ. ಇಲ್ಲಿ ಶೇ.98 ರಷ್ಟು ಮನೆಗಳನ್ನು ಕೇಳುವವರೇ ಇಲ್ಲ. ಮಹಾರಾಷ್ಟ್ರದಲ್ಲಿ ಶೇ.79 ರಷ್ಟು ಖಾಲಿ ಇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com