ತಮಿಳುನಾಡು ಜಲಪ್ರವಾಹ: ಐಟಿ ವಲಯಕ್ಕೆ 60 ಮಿಲಿಯನ್ ಡಾಲರ್ ನಷ್ಟ

ಚೆನ್ನೈ ನಲ್ಲಿ ಉಂಟಾಗಿರುವ ಜಲಪ್ರವಾಹದಿಂದ ತಮಿಳುನಾಡಿನಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗಿದ್ದು ಐಟಿ ವಲಯ ನಷ್ಟ ಅನುಭವಿಸಿದೆ.
ಕಚೇರಿಗಳಿಗೆ ನುಗ್ಗಿದ ನೀರು(ಸಂಗ್ರಹ ಚಿತ್ರ)
ಕಚೇರಿಗಳಿಗೆ ನುಗ್ಗಿದ ನೀರು(ಸಂಗ್ರಹ ಚಿತ್ರ)

ಚೆನ್ನೈ: ಚೆನ್ನೈ ನಲ್ಲಿ ಉಂಟಾಗಿರುವ ಜಲಪ್ರವಾಹದಿಂದ ತಮಿಳುನಾಡಿನಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗಿದ್ದು ಐಟಿ ವಲಯ ನಷ್ಟ ಅನುಭವಿಸಿದೆ. ಕಳೆದ ಒಂದು ವಾರದಿಂದ ತಮಿಳುನಾಡು ರಾಜಧಾನಿ ಚೆನ್ನೈ ಜಲಾವೃತಗೊಂಡಿರುವುದರಿಂದ ಕಚೇರಿಗಳು ಕಾರ್ಯನಿರ್ವಹಿಸದೇ ಸಾಮಾನ್ಯ ಐಟಿ ಕಂಪನಿ ಸುಮಾರು 5 -10 ಮಿಲಿಯನ್ ಡಾಲರ್  ನಷ್ಟ ಅನುಭವಿಸಿದ್ದರೆ, ಪ್ರಮುಖ ಐಟಿ ಕಂಪನಿಗಳು 40 -50 ಮಿಲಿಯನ್ ಡಾಲರ್ ನಷ್ಟ ಅನುಭವಿಸಿವೆ.
ಕಾಗ್ನಿಜೆಂಟ್, ಇನ್ಫೋಸಿಸ್, ಟಿಸಿಎಸ್ ನಂತಹ ಪ್ರಮುಖ ಐಟಿ ಸಂಸ್ಥೆಗಳಿ ತನ್ನ ಉದ್ಯೋಗಿಗಳನ್ನು ಬೆಂಗಳೂರಿಗೆ ಕಳಿಸಲು ಪ್ರತಿ ಗಂಟೆಗೊಮ್ಮೆ ಬಸ್ ಸೌಲಭ್ಯ ಕಲ್ಪಿಸುತ್ತಿದೆ. ಈ ಪೈಕಿ ಈಗಾಗಲೇ 2000 ಉದ್ಯೋಗಿಗಳು ಬೆಂಗಳುರಿಗೆ ತೆರಳಿದ್ದಾರೆ. ಐಟಿ ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗಗಳು ಚೆನ್ನೈ ನಲ್ಲಿರುವ ತಮ್ಮ ಉದ್ಯೋಗಿಗಳ ಸ್ಥಿತಿಯನ್ನು ತಿಳಿಯುವುದಕ್ಕಾಗಿ ಉದ್ಯೋಗಿಗಳನ್ನು ಸಂಪರ್ಕಿಸಲು ಯತ್ನಿಸುತ್ತಿವೆ. ಆದರೆ ಉದ್ಯೋಗಿಗಳು ಮನೆಯಲ್ಲೇ ಸಿಲುಕಿಕೊಂಡಿದ್ದಾರೆ.
ಐಟಿ ವಲಯ ಹೊರತುಪಡಿಸಿ, ಆಟೋಮೊಬೈಲ್ ವಲಯವೂ 15 ,000 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿದೆ. ಉದ್ಯಮ ಸಂಸ್ಥೆ ಅಸ್ಸೋಛಾಮ್ ಪ್ರಕಾರ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಎಂಜಿನಿಯರಿಂಗ್, ಟೆಕ್ಸ್ ಟೈಲ್, ಟೂರಿಸಂ ವಲಯಗಳು ತಮಿಳುನಾಡಿನಲ್ಲಿ ಉಂತಾಗಿರುವ ಪ್ರವಾಹದ ಪರಿಣಾಮ ನಷ್ಟ ಅನುಭವಿಸಿವೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com