ರೇಟಿಂಗ್ ಸಂಸ್ಥೆ ಫಿಚ್ (ಸಂಗ್ರಹ ಚಿತ್ರ)
ರೇಟಿಂಗ್ ಸಂಸ್ಥೆ ಫಿಚ್ (ಸಂಗ್ರಹ ಚಿತ್ರ)

ಭಾರತ ಶೇ.7 .5 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿದೆ: ಫಿಚ್ ವರದಿ

ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಆಶಾದಾಯಕ ನಿರೀಕ್ಷೆ ವ್ಯಕ್ತಪಡಿಸಿರುವ ರೇಟಿಂಗ್ ಸಂಸ್ಥೆ ಫಿಚ್, ಪ್ರಸಕ್ತ ಸಾಲಿನಲ್ಲಿ ಭಾರತ ಶೇ.7 .5 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿದೆ.

ಮುಂಬೈ: ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಆಶಾದಾಯಕ ನಿರೀಕ್ಷೆ ವ್ಯಕ್ತಪಡಿಸಿರುವ ರೇಟಿಂಗ್ ಸಂಸ್ಥೆ ಫಿಚ್, ಪ್ರಸಕ್ತ ಸಾಲಿನಲ್ಲಿ ಭಾರತ ಶೇ.7 .5 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿದೆ.
ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿರಲಿದೆಯಾದರೂ, ಕೆಲ ಕಾಲ ವ್ಯಾಪಾರಕ್ಕೆ ಸೂಕ್ತವಾದ ವಾತಾವರಣ ದುರ್ಬಲ ಸ್ಥಿತಿಯಲ್ಲೇ ಮುಂದುವರೆಯಲಿದೆ ಎಂದು ಫಿಚ್ ಅಭಿಪ್ರಾಯಪಟ್ಟಿದೆ. 2016 -17 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.8 ರಷ್ಟಾಗುವ ಸಾಧ್ಯತೆ ಇದೆ ಎಂದು ಫಿಚ್ ತನ್ನ ಮುನ್ನೋಟದಲ್ಲಿ ತಿಳಿಸಿದೆ.
ರಚನಾತ್ಮಕ ಸುಧಾರಣೆಗಳನ್ನು ಸುಧಾರಿತ ಸೂಚಕಗಳನ್ನಾಗಿ ಪರಿವರ್ತನೆ ಮಾಡುವುದು ಹಾಗೂ ಜಿಡಿಪಿ ಬೆಳವಣಿಗೆ ನಿಜವಾದ ಅನುಷ್ಠಾನದ ಮೇಲೆ ಅವಲಂಬಿತವಾಗಿರುತ್ತದೆ. ಭಾರತದ ಹಣಕಾಸಿನ ಸ್ಥಿತಿಯಲ್ಲಿ ಸೀಮಿತ ಸುಧಾರಣೆ  ಸಾರ್ವಭೌಮ ರೇಟಿಂಗ್ ನಿರ್ಬಂಧ ಮುಂದುವರಿಯುವುದಕ್ಕೆ ಕಾರಣವಾಗುತ್ತದೆ ಎಂದು ಫಿಚ್ ತಿಳಿಸಿದೆ.
ಕೇಂದ್ರ ಸರ್ಕಾರ ನಿರಂತರವಾಗಿ ರಚನಾತ್ಮಕ ಸುಧಾರಣಾ ನೀತಿಗಳನ್ನು ಜಾರಿಗೆ ತರುತ್ತಿದೆಯಾದರೂ,  ಜಿಎಸ್ ಟಿ ಮಸೂದೆಗಳಂತಹ ಮಹತ್ವದ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಲು ಸಮಸ್ಯೆ ಎದುರಿಸುತ್ತಿದೆ ಎಂದು ಫಿಚ್ ಹೇಳಿದೆ.
ಸುಧಾರೀಕರಣದಿಂದ ಭಾರತದಲ್ಲಿ ವ್ಯಾಪಾರಕ್ಕೆ ಸೂಕ್ತ ವಾತಾವರಣ ಹಾಗೂ ಆಡಳಿತದ ಗುಣಮಟ್ಟ ಸುಧಾರಿಸುತ್ತಿದೆಯಾದರೂ, ಮೂಲಸೌಕರ್ಯದ ಅಡಚಣೆ ಸೇರಿದಂತೆ ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳು ರಾತ್ರೋರಾತ್ರಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಫಿಚ್ ಅಭಿಪ್ರಾಯಪಟ್ಟಿದೆ.    

Related Stories

No stories found.

Advertisement

X
Kannada Prabha
www.kannadaprabha.com