ಎಸ್‍ಇಜೆಡ್ ಭೂಮಿ ಖಾಲಿ

ವಿಶೇಷ ಆರ್ಥಿಕ ವಲಯ(ಎಸ್ ಇಜಡ್) ಸ್ಥಾಪನೆಗೆ ನೀಡಿರುವ ಭೂಮಿಯಲ್ಲಿ ಶೇ.90ರಷ್ಟು ಖಾಲಿ ಬಿದ್ದಿದೆ ಎಂದು ಸೋಮವಾರ ಲೋಕಸಭೆಗೆ ಮಾಹಿತಿ ನೀಡಲಾಗಿದೆ...
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
ನವದೆಹಲಿ: ವಿಶೇಷ ಆರ್ಥಿಕ ವಲಯ(ಎಸ್ ಇಜಡ್) ಸ್ಥಾಪನೆಗೆ ನೀಡಿರುವ ಭೂಮಿಯಲ್ಲಿ ಶೇ.90ರಷ್ಟು ಖಾಲಿ ಬಿದ್ದಿದೆ ಎಂದು ಸೋಮವಾರ ಲೋಕಸಭೆಗೆ ಮಾಹಿತಿ ನೀಡಲಾಗಿದೆ. 
ಕಳೆದ ಐದು ವರ್ಷಗಳಲ್ಲಿ 58 ಎಸ್ ಇಜಡ್ ಸ್ಥಾಪನೆಗೆ ನೀಡಿದ್ದ ಭೂಮಿಯಲ್ಲಿ ಬಹುತೇಕ ಬಳಕೆಯಾಗಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 58 ಎಸ್‍ಇಜಡ್‍ಗಳಿಗೆ ನೀಡಲು 4,842.38 ಹೆಕ್ಟೇರ್ ಸ್ವಾಧೀನ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ 4,480.13 ಹೆಕ್ಟೇರ್ ಖಾಲಿ ಬಿದ್ದಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಇದ್ದ ಸರ್ಕಾರಗಳು ರೂಪಿಸಿದ್ದ ನೀತಿಗಳಿಗೆ ಅನುಗುಣವಾಗಿ ಭೂಮಿ ಸ್ವಾಧಿೀನ ಮಾಡಿಕೊಳ್ಳಲಾಗಿತ್ತು. 
ಎಸ್‍ಇಜಡ್ ಅನುಮೋದನಾ ಮಂಡಳಿ ಈ ಪ್ರಸ್ತಾವಗಳನ್ನು ಪರಿಶೀಲಿಸಿತ್ತು ನಂತರ ಆಯಾ ರಾಜ್ಯ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದವು ಎಂದು ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಆಂಧ್ರದಲ್ಲಿ ಅತಿ ಹೆಚ್ಚು 2,044.15 ಹೆಕ್ಟೇರ್, ಮಹಾರಾಷ್ಟ್ರ 536.13, ತಮಿಳುನಾಡಿನಲ್ಲಿ 295.51 ಹೆಕ್ಟೇರ್ ವಶಪಡಿಸಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ ಈ ಎಸ್‍ಇಜಡ್‍ಗಳಿಂದ ರು. 2.21 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳು ರಫ್ತಾಗಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ ಈ ಮೌಲ್ಯ ರು. 4.63 ಲಕ್ಷ ಕೋಟಿ ಇತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com