

ನವದೆಹಲಿ: ಆಭರಣ ತಯಾರಕರು ಹೆಚ್ಚಿನ ಖರೀದಿಯಲ್ಲಿ ತೊಡಗಿದ್ದರಿಂದ ಇಲ್ಲಿನ ಚಿನಿವಾರ ಪೇಟೆಯ ಶನಿವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ ರು.290 ಏರಿಕೆ ಕಂಡು ರು.26,000 ಹಂತವನ್ನು ಮತ್ತೆ ಗಳಿಸಿತು.
ಹಾಗಿದ್ದರೂ ಬೆಳ್ಳಿ ದರಗಳು ಕುಸಿತ ಕಂಡವು. ಪ್ರತಿ ಕೆಜಿ ಬೆಳ್ಳಿ ದರ ರು.200 ನಷ್ಟದೊಂದಿಗೆ ರು.33,850ಕ್ಕೆ ತಲುಪಿತು. ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ವಹಿವಾಟು ಕಂಡಿದ್ದು ಮತ್ತು ಮದುವೆ ಸೀಸನ್ ಹಿನ್ನೆಲೆಯಲ್ಲಿ ಆಭರಣ ವರ್ತಕರು ಹೆಚ್ಚಿನ ಖರೀದಿಯಲ್ಲಿ ತೊಡಗಿದ್ದು ಚಿನ್ನದ ದರವನ್ನು ಮೇಲೇರಿಸಿತು. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ದರ ಶೇ.0.25ರಷ್ಟು ಏರಿಕೆಯೊಂದಿಗೆ 1,074.20 ಡಾಲರ್‍ಗೆ ತಲುಪಿತು.
Advertisement