ಕೇಂದ್ರ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ಕೇಂದ್ರ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)

ರು.2 ಲಕ್ಷ ವಹಿವಾಟಿನವರೆಗೂ ಪ್ಯಾನ್‍ಕಾರ್ಡ್ ಕಡ್ಡಾಯ ಇಲ್ಲ

ಕಪ್ಪು ಹಣ ಮತ್ತು ನಕಲಿ ನೋಟು ನಿಯಂತ್ರಿಸಲು ಕೇಂದ್ರ ಸರ್ಕಾರ ಕೆಲ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕ್ರೆಡಿಟ್‍ಕಾರ್ಡ್, ಡೆಬಿಟ್‍ಕಾರ್ಡ್ ಮತ್ತಿತರ ಆನ್ ಲೈನ್ ಮೂಲಕ ವಹಿವಾಟು ನಡೆಸುವವರಿಗೆ ಹಲವು ರಿಯಾಯಿತಿಗಳನ್ನು ಘೋಷಿಸಿದೆ...

ನವದೆಹಲಿ: ಕಪ್ಪು ಹಣ ಮತ್ತು ನಕಲಿ ನೋಟು ನಿಯಂತ್ರಿಸಲು ಕೇಂದ್ರ ಸರ್ಕಾರ ಕೆಲ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕ್ರೆಡಿಟ್‍ಕಾರ್ಡ್, ಡೆಬಿಟ್‍ಕಾರ್ಡ್ ಮತ್ತಿತರ  ಆನ್ ಲೈನ್ ಮೂಲಕ ವಹಿವಾಟು ನಡೆಸುವವರಿಗೆ ಹಲವು ರಿಯಾಯಿತಿಗಳನ್ನು ಘೋಷಿಸಿದೆ.

ಕೇಂದ್ರ ಸರ್ಕಾರದ ಈ ಕ್ರಮದಿಂದ ಪ್ಲಾಸ್ಟಿಕ್‍ಕಾರ್ಡ್ (ಡೆಬಿಟ್, ಕ್ರೆಡಿಟ್ ಕಾರ್ಡ್) ಅಥವಾ ಆನ್‍ಲೈನ್ ಮೂಲಕ ವಾಹನಕ್ಕೆ ಹಾಕಿಸಿಕೊಳ್ಳುವ ಇಂಧನ ಬಿಲ್ ಪಾವತಿ, ರೈಲ್ವೆ ಟಿಕೆಟ್, ದೂರವಾಣಿ  ಬಿಲ್ ಮತ್ತಿತರ ಪಾವತಿಗಳಿಗೆ ರಿಯಾಯಿತಿ ಸಿಗಲಿದೆ. ಈ ರೂಪದಲ್ಲಿ ಬಿಲ್‍ಗಳನ್ನು ಪಾವತಿಸುವವರಿಗೆ, ಖರೀದಿ, ಪಾವತಿ ಮಾಡುವವರಿಗೆ ಆದಾಯ ತೆರಿಗೆ ವಿನಾಯಿತಿ ನೀಡುವ ನಿರೀಕ್ಷೆಗಳಿವೆ.

ಪ್ಯಾನ್ ಮಿತಿ ವಿಸ್ತರಣೆ
ಇದುವರೆಗೂ ರು.50,000ವರೆಗಿನ ಎಲ್ಲ ವಹಿವಾಟಿಗೆ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಡ್ಡಾಯವಾಗಿತ್ತು. ಈ ಮಿತಿಯನ್ನು ರು.2 ಲಕ್ಷಕ್ಕೆ ವಿಸ್ತರಿಸುವ ಕುರಿತೂ ಕೇಂದ್ರ ಚಿಂತನೆ ನಡೆಸಿದೆ. ಅಲ್ಲದೆ  ಜನಧನ ಬಿಟ್ಟು ಉಳಿದ ಬ್ಯಾಂಕ್ ಅಕೌಂಟ್ ಮಾಡಿಸುವಾಗ ಪ್ಯಾನ್ ಕಡ್ಡಾಯವಾಗಲಿದೆ.

Related Stories

No stories found.

Advertisement

X
Kannada Prabha
www.kannadaprabha.com