ಮಧ್ಯ ವಾರ್ಷಿಕ ಆರ್ಥಿಕ ವಿಶ್ಲೇಷಣೆ: ಶೇ.7 -7 .5 ರಷ್ಟು ಜಿಡಿಪಿ ಬೆಳವಣಿಗೆ ನಿರೀಕ್ಷೆ

ಮಧ್ಯ-ವಾರ್ಷಿಕ ಆರ್ಥಿಕ ವಿಶ್ಲೇಷಣೆ ಪ್ರಕಟಗೊಂಡಿದ್ದು 2015-16 ರಲ್ಲಿ ದೇಶದ ಜಿಡಿಪಿ 7 -7 .5 ವರೆಗೆ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಶೇ.7 -7 .5 ರಷ್ಟು ಜಿಡಿಪಿ ಬೆಳವಣಿಗೆ ನಿರೀಕ್ಷೆ
ಶೇ.7 -7 .5 ರಷ್ಟು ಜಿಡಿಪಿ ಬೆಳವಣಿಗೆ ನಿರೀಕ್ಷೆ

ನವದೆಹಲಿ: ಮಧ್ಯ-ವಾರ್ಷಿಕ ಆರ್ಥಿಕ ವಿಶ್ಲೇಷಣೆ ಪ್ರಕಟಗೊಂಡಿದ್ದು 2015-16 ರಲ್ಲಿ ದೇಶದ ಜಿಡಿಪಿ 7 -7 .5 ವರೆಗೆ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಸರ್ಕಾರದ ಸುಧಾರಣೆ ಕ್ರಮಗಳು ವೇಗ ಗತಿ ಪಡೆದುಕೊಂಡಿದ್ದು 2015 -16 ರ ಪ್ರಥಮಾರ್ಧದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.7.2 ರಷ್ಟಾಗಲಿದೆ. 2015 -16 ರ ಪ್ರಥಮ ತ್ರೈಮಾಸಿಕದಲ್ಲಿ ಶೇ.7 ರಷ್ಟಿದ್ದ ಆರ್ಥಿಕ ಬೆಳವಣಿಗೆ ಎರಡನೇ ತ್ರೈಮಾಸಿಕದಲ್ಲಿ ಶೇ.7 .4 ರಷ್ಟಾಗಿದೆ. ಆರ್ಥಿಕ ಬೆಳವಣಿಗೆಯ ಜೊತೆಗೆ, ಸಮಾಧಾನಕರ ಹಣದುಬ್ಬರ ಸೂಚಕ, ಉತ್ತಮ ಹಣಕಾಸು ಸ್ಥಿತಿ, ಚಾಲ್ತಿ ಖಾತೆಯನ್ನು ಸಮತೋಲನ ಸುಧಾರಣೆಗಳ ಪರಿಣಾಮಮ ಆರ್ಥಿಕ ಸ್ಥಿರತೆ ಕೂಡ ಉಂಟಾಗಿದ್ದು, ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಮಧ್ಯ-ವಾರ್ಷಿಕ ಆರ್ಥಿಕ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com