ಕುಸಿದ ಈರುಳ್ಳಿ ರಫ್ತು

ಕೇಂದ್ರ ಸರ್ಕಾರ ರಫ್ತು ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದ್ದರಿಂದ ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ ಈರುಳ್ಳಿ ರಫ್ತು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ ರಫ್ತು ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದ್ದರಿಂದ ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ ಈರುಳ್ಳಿ ರಫ್ತು ಶೇ.18ರಷ್ಟು ಕುಸಿದಿದೆ.
ಕಳೆದ ವರ್ಷ ಏಪ್ರಿಲ್ ಸೆಪ್ಟೆಂಬರ್ ಅವಧಿಯಲ್ಲಿ 5.89 ಲಕ್ಷ ಟನ್ ಈರುಳ್ಳಿ ರಫ್ತಾಗಿದ್ದರೆ ಈ ವರ್ಷ ಇದೇ ಅವಧಿಯಲ್ಲಿ 4.85 ಲಕ್ಷ ಟನ್‍ಗೆ ಇಳಿದಿದೆ. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದರ  ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದರಿಂದ ಕೇಂದ್ರ ಸರ್ಕಾರ ಈರುಳ್ಳು ರಫ್ತು ಕನಿಷ್ಠ ದರವನ್ನು ಪ್ರತಿ ಟನ್‍ಗೆ 700 ಡಾಲರ್ ಹೆಚ್ಚಿಸಿತು. 
ಇದರಿಂದ ರಫ್ತು ಗಣನೀಯವಾಗಿ ಇಳಿಮುಖ ಕಂಡಿದೆ  ಎಂದು ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹೇಳಿದೆ. ದೇಶೀಯ ಮಾರುಕಟ್ಟೆಯಲ್ಲಿ ದರ ನಿಯಂತ್ರಣಕ್ಕೆ ಬಂದ ನಂತರ ಎರಡು ದಿನಗಳ ಹಿಂದಷ್ಟೆ ಕೇಂದ್ರ  ಸರ್ಕಾರ ಕನಿಷ್ಠ ದರವನ್ನು ತೆರವುಗೊಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com