ಬಂದೇ ಬಿಟ್ಟಿತೇ ಶುಭಕಾಲ

ಕೋಲ್ ಇಂಡಿಯಾದ ಷೇರುಗಳ ಮಾರಾಟದಿಂದ ಕೇಂದ್ರ ಸರ್ಕಾರದ ಖಜಾನೆಗೆ ಸುಮಾರು ರು.22000 ಕೋಟಿ ಹಣ ಭರ್ತಿಯಾಗಿದೆ...
ಕೋಲ್ ಇಂಡಿಯಾದ ಬೃಹತ್ ಷೇರು ಮಾರಾಟ (ಸಾಂದರ್ಭಿಕ ಚಿತ್ರ)
ಕೋಲ್ ಇಂಡಿಯಾದ ಬೃಹತ್ ಷೇರು ಮಾರಾಟ (ಸಾಂದರ್ಭಿಕ ಚಿತ್ರ)

ಕೋಲ್ ಇಂಡಿಯಾದ ಷೇರುಗಳ ಮಾರಾಟದಿಂದ ಕೇಂದ್ರ ಸರ್ಕಾರದ ಖಜಾನೆಗೆ ಸುಮಾರು ರು.22000 ಕೋಟಿ ಹಣ ಭರ್ತಿಯಾಗಿದೆ. ಒಳ್ಳೆಯ ಸುದ್ದಿ. ಇದರ ಪರಿಣಾಮವಾಗಿ ಕೋಲ್ ಇಂಡಿಯಾದ ಬಂಡವಾಳವೇನೂ ಸೊರಗಿಲ್ಲ. ಅದು ಷೇರುಗಳನ್ನು ಕೊಂಡ ಕಾರ್ಪೊರೇಟ್‍ಗಳು ಸ್ವಲ್ಪ ಮಟ್ಟಿಗೆ ವ್ಯಕ್ತಿಗಳ ಬಳಿ ಭದ್ರವಾಗಿದೆ.

ಆದರೆ ಈ ಬೃಹತ್ ಷೇರು ಮಾರಾಟದ ಪರಿಣಾಮ ಪೇಟೆಯಲ್ಲಿ ಬೇರೆ ರೀತಿಯಲ್ಲಿ ಕಂಡು ಬರುವುದು ಖಚಿತ. ಕೋಲ್ ಇಂಡಿಯಾದ ಜತೆಯಲ್ಲೇ ಇನ್ನೂ ಕೆಲವು ಭಾರಿ ಷೇರುಗಳೂ ಈ ತಿಂಗಳಲ್ಲೇ ಅಥವಾ ಮುಂದಿನ ತಿಂಗಳು ಪೇಟೆಗೆ ಬರಬಹುದು. ಅದನ್ನು ಕೊಳ್ಳುವುದಕ್ಕೆ ಎಲ್ಲಿಂದಲೋ ಜನರು ಬರುವುದಿಲ್ಲ.

ಪೇಟೆಯ ವ್ಯವಹಾರಸ್ಥರು, ಕಾರ್ಪೊರೇಟ್‍ಗಳೇ ಆ ಹಣವನ್ನು ``ಹೊಂದಿಸಬೇಕು'' ಎಲ್ಲಿಂದ? ಸದ್ಯಕ್ಕೆ ಬ್ಯಾಂಕ್ ಸಾಲ ಬಿಟ್ಟರೆ ಬೇರೆ ಮೂಲ ಕಂಡು ಬರುತ್ತಿಲ್ಲ. ಈಗ ಪೇಟೆಯಲ್ಲಿ ವ್ಯವಹಾರ ಹೆಚ್ಚಿದರೆ ಮುಕ್ತ ಪೇಟೆಯಲ್ಲಿ ಚಲನಶೀಲತೆ ಕಡಿಮೆಯಾಗಲೂ ಬಹುದು. ಆದರೆ, ನರೇಂದ್ರ ಮೋದಿ-ಜೇಟ್ಲಿ ಜೋಡಿ ಫೆಬ್ರವರಿ 28ರ ಬಜೆಟ್‍ನಲ್ಲಿ ಆರ್ಥಿಕ ವ್ಯವಸ್ಥೆಗೆ ಚುರುಕು ಮುಟ್ಟಿಸುವಂಥ ಕ್ರಮಗಳನ್ನು ಕೈಗೊಂಡರೆ, ಅದರ ಪರಿಣಾಮವಾಗಿ ಪೇಟೆಯಲ್ಲಿನ ವ್ಯವಹಾರ ಉತ್ಸಾಹ ತಾನೇ ತಾನಾಗಿ ಚಿಮ್ಮುವುದೂ ಸಾಧ್ಯ.

ಚಾಲ್ತಿ ವರ್ಷದಲ್ಲೇ ಸರ್ಕಾರ ತನ್ನ ಉದ್ಯಮಗಳ ಷೇರು ಮಾರಾಟದಿಂದ ರು.43.425 ಕೋಟಿ ಪಡೆಯುವ ಉದ್ದೇಶವನ್ನು ಬಜೆಟ್ ಮಂಡನೆಯ ಕಾಲದಲ್ಲೇ ಪ್ರಸ್ತಾಪಿಸಿತ್ತು. ಕೋಲ್ ಇಂಡಿಯಾ ಷೇರು ಮಾರಾಟದ ದಿನ ಬೇರೆ ಬೇರೆ ಕಾರಣಗಳಿಂದಾಗಿ `ಸೆನ್ಸೆಕ್ಸ್' ಕುಸಿದಿತ್ತು. ಹೀಗೊಂದು ದೂರು ಹಣಕಾಸಿನ ವ್ಯವಹಾರ ಹಾಗೂ ಲಾಭಟ ದೃಷ್ಟಿಯಿಂದ ತೃಪ್ತಿಕರ ಎಂದು ಭಾವಿಸಿದರೂ, ಅದರ ಗ್ರಾಹಕರ (ಪ್ರಧಾನವಾಗಿ ಸರ್ಕಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳೇ) ದೃಷ್ಟಿಯಲ್ಲಿ ಕಳಪೆ ಮಾಲನ್ನು ಪೂರೈಸಿ ಅಧಿಕ ಲಾಭ ಗಳಿಸುತ್ತಿದೆ.

ಇಂಥ ದೂರುಗಳು ಬೇಕಾದಷ್ಟಿವೆ. ಕಲ್ಲಿದ್ದಲು ಗ್ರಾಹಕ ಸಂಸ್ಥೆಗಳು ಪೂರೈಕೆಯಾದ ಮೇಲಿನ ವಿಚಾರದಲ್ಲಿ ದೂರುಗಳನ್ನು ನೀಡಿ (ಕೆಲವು ಸಂಸ್ಥೆಗಳು, ಕಲ್ಲಿದ್ದಲ ಜತೆ ಕಲ್ಲಿನ ಬೋಲ್ಡರ್‍ಗಳೂ ಬರುತ್ತಿವೆ ಎಂದು ಹೇಳಿ) ಬಿಲ್ ಪಾವತಿಸಿಲ್ಲ. ಕೋಲ್ ಇಂಡಿಯಾದ ಉತ್ಪಾದನೆಯ ಗುಣಮಟ್ಟದ ಪರೀಕ್ಷೆಗಳಲ್ಲಿ ಒಂದು ಸ್ವತಂತ್ರ ವ್ಯವಸ್ಥೆ ಇರಬೇಕೆನ್ನುವ ಒತ್ತಾಯ ಕೇಳಿ ಬಂದಿದೆ. ಈ ಸಲಹೆಯನ್ನು ಯಾರೂ ವಿರೋಧಿಸಿಲ್ಲ. ಆದರೆ ಆ ವ್ಯವಸ್ಥೆಯ ನಿಯಂತ್ರಣ ಅಧಿಕಾರ ಯಾರದ್ದು ಎನ್ನುವುದೇ ದೊಡ್ಡ ವಿವಾದವಾಗಿದೆ.

ವಿಪರೀತ ಉತ್ಸಾಹ
ಷೇರು ಬಜಾರಿನಲ್ಲಿ ವ್ಯವಹಾರ ಜೋರಾಗಿ ನಡೆದು ಎಲ್ಲವೂ ಲಾಭ ಗಳಿಸುವಂಥ ಸಂದರ್ಭ ಸೃಷ್ಟಿಯಾದರೆ ಪೇಟೆಯಲ್ಲಿ ಏರುಪೇರಾಗುವುದನ್ನು ಸಂಸ್ಥೆಗಳು ಮರೆತೇ ಬಿಡುತ್ತವೆ. ವೈಯಕ್ತಿಕ ಹೂಡಿಕೆದಾರರಂತೂ ಅದರ ಕಡೆ ಗಮನ ಹರಿಸುವುದೇ ಇಲ್ಲ. ಭಾರತೀಯ ಷೇರು ಪೇಟೆ ಈಗ ಆ ಹಂತ ಮುಟ್ಟಿದಂತೆ ಕಂಡು ಬರುತ್ತಿದೆ.

ಪೇಟೆಯ ಸೂಚ್ಯಂಕಗಳು ಮೇಲ್ಮಟ್ಟದಲ್ಲಿಯೇ ಇವೆ. ಈ ಪರಿಸ್ಥಿತಿಯಲ್ಲಿ ಬೇರೆ ಯಾವುದೋ ಕಾರಣಕ್ಕೆ ಷೇರುಗಳ `ಬೀಳುವ' ಅಥವಾ ಕೆಲವರು ಉದ್ದೇಶಪೂರ್ವಕವಾಗಿ ಬೀಳಿಸುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು. ಪೇಟೆಯ ತಜ್ಞರು ಈ ವಿಚಾರದತ್ತ ನಿರಂತರವಾಗಿ ಕಣ್ಣಿಟ್ಟಿರುತ್ತಾರೆ ಎನ್ನುವುದಂತೂ ನಿಜ. ಕೆಲವರಿಗೆ ಅದೇ ಕೆಲಸ. ಆದರೆ ತಜ್ಞರ ಮಾತು ಕೇಳುವ ಗ್ರಾಹಕ ಸಮಾಜ ಬೇಕಲ್ಲ.

-ಸತ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com