
ಮಹಿಳೆ, ಯಾವಾಗಲೂ ಇತರರ ಪೈಕಿ ತಾನು ಎದ್ದು ಕಾಣಿಸುವ ಹಾಗೆ ಮಾಡುವಂತಹ ಯಾವುದಾದರೂ ವಸ್ತುವನ್ನು ಎದುರು ನೋಡುತ್ತಾಳೆ ಮತ್ತು ಸೌಂದರ್ಯವರ್ಧಕಗಳ ಕಡೆ ಮಹಿಳೆಯರ ಆಕರ್ಷಣೆ ಈಗ ಮುಚ್ಚಿಟ್ಟ ನಿಜವೇನಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ನಾರಿಯರಿಗಾಗಿ ಸಮಿ ಡೈರೆಕ್ಟ್ ಪರಿಚಯಿಸುತ್ತಿದೆ ‘ಜೊಹರ’, ಒಂದು ಪ್ರೀಮಿಯಂ ಬ್ರ್ಯಾಂಡ್.
ಅತೀ ವೇಗವಾಗಿ ಮಾರಾಟವಾಗುವ ಕಂಪನಿಗಳ ಪೈಕಿ ಒಂದಾಗಿರುವ ಹಾಗೂ ಭಾರತೀಯ ಬಹುರಾಷ್ಟ್ರೀಯ ಆರೋಗ್ಯ ವಿಜ್ಞಾನ ಕಂಪನಿ ಸಮಿ ಲ್ಯಾಬ್ಸ್ ಲಿ.ನ ಅಂಗ ಸಂಸ್ಥೆ ಸಮಿ ಡೈರೆಕ್ಟ್, ಚರ್ಮದ ಆರೈಕೆ, ದೇಹದ ಆರೈಕೆ ಹಾಗೂ ದೇಹದ ಬಣ್ಣಕ್ಕೆ ಸಂಬಂಧಪಟ್ಟಂತಹ ಸರಣಿ ಉತ್ಪನ್ನಗಳನ್ನು ಒಳಗೊಂಡ ‘ಜೊಹರ’ - ಸೌಂದರ್ಯವರ್ಧಕಗಳ ವಿಜ್ಞಾನ’ ಎಂಬ ಶೀರ್ಷಿಕೆಯಡಿ ಮಹಿಳೆಯರ ಸೌಂದರ್ಯ ಹಾಗೂ ಚರ್ಮದ ತ್ವಚೆಯ ಉತ್ಪನ್ನಗಳ ಮಾರುಕಟ್ಟೆಗೆ ದೊಡ್ಡ ರೀತಿಯಲ್ಲಿ ಪ್ರವೇಶಿಸಿದೆ.
ವಿಜ್ಞಾನ ಹಾಗೂ ಜಗತ್ತಿನಾದ್ಯಂತ ವಿವಿಧ ಸ್ಥಳಗಳಲ್ಲಿನ ಪುರಾಣಗಳಿಂದ ವಿಕಸನಗೊಳಿಸಿದ, ಆಯ್ದ ಪರಿಣಾಮಕಾರಿ ಸಸ್ಯ ಆಧಾರಿತ ಪದಾರ್ಥಗಳಿಂದ ತಯಾರಿಸಲ್ಪಟ್ಟ ಹಾಗೂ ಸಮಯ ಪರೀಕ್ಷೆಯಲ್ಲಿ ತನ್ನ ಈ ಎಲ್ಲಾ ನೂತನ ಉತ್ಪನ್ನಗಳು ಉತ್ತೀರ್ಣವಾಗಿದೆ ಎಂದು ಸಮಿ ತಿಳಿಸಿದೆ. ಅನೇಕ ವರ್ಷಗಳ ಕಾಲ, ಅತಿ ಎಚ್ಚರಿಕೆಯಿಂದ ನಡೆಸಲ್ಪಟ್ಟ ಸಂಶೋಧನೆಯಿಂದ ಸಿದ್ಧಗೊಂಡ ‘ಜೊಹರ’ ಎಂದರೆ ಅರಬ್ಬಿ ಭಾಷೆಯಲ್ಲಿ ‘ಆಭರಣ’ ಎಂದರ್ಥ. ಜೊತೆಗೆ ಈ ಉತ್ಪನ್ನಗಳು ವೈಜ್ಞಾನಿಕವಾಗಿಯೂ ಆಧಾರಿತವಾಗಿದ್ದು, ಇದರ ಫಲಿತಾಂಶ ಕೇವಲ ನಿಜವಾದ ಹಾಗೂ ಶುದ್ಧ ಸೌಂದರ್ಯ.
ಜೊಹರದ ಸರಣಿ ಉತ್ಪನ್ನಗಳನ್ನು ಸೌಂದರ್ಯ ಹಾಗೂ ಸೊಬಗಿಗೆ ಸಮರ್ಪಿಸಲಾಗಿದೆ. ಜೊತೆಗೆ ಈ ಉತ್ಪನ್ನಗಳು ಪ್ಯಾರಾಬೆನ್ಸ್, ಸಲ್ಫೇಟ್, ಸಿಂಥೆಟಿಕ್ ಡೈ ಅಥವಾ ಫಾರ್ಮಲ್‍ಡೀಹೈಡ್‍ನಂತಹ ರಾಸಾಯನಿಕಗಳಿಂದ ಮುಕ್ತವಾಗಿದ್ದು, ಪೇಟೆಂಟ್‍ಗಳನ್ನು ಹೊಂದಿರುವ ಫಾರ್ಮುಲಗಳಿವೆ. ಈ ಉತ್ಪನ್ನಗಳು ಚಿಕಿತ್ಸಾಪೂರಕ ಗುಣಮಟ್ಟ ಹೊಂದಿರುವ ಸಸ್ಯಗಳ ಸಾರದಿಂದ ಕೂಡಿದ್ದು, ಚರ್ಮ ವೈದ್ಯಕೀಯಶಾಸ್ತ್ರದ ಪ್ರಕಾರ ಪರಿಶೀಲಿಸಲಾಗಿದೆ ಹಾಗೂ ಇದು ಚರ್ಮಕ್ಕೆ ಯಾವುದೇ ರೀತಿ ಹಾನಿಯುಂಟು ಮಾಡುವುದಿಲ್ಲ.
Advertisement