ನಂಬಿಕೆ ಚೀಟಿ
ಎಂಎಸ್‌ಐಎಲ್ ಸಂಸ್ಥೆ ಹತ್ತಾರು ವ್ಯವಹಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಪೈಕಿ ಮಾಸಿಕ ಚೀಟಿ ಯೋಜನೆಯೂ ಒಂದು. ಆರಂಭದಿಂದಲೇ ಜನಮನ್ನಣೆಗೆ ಪಾತ್ರವಾದ ಈ ಯೋಜನೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗುತ್ತಿದೆ. ಜನ ಸೂಜಿಗಲ್ಲಿನಂತೆ ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಸಣ್ಣ ಮೊತ್ತ ಪಾವತಿ ಮಾಡುತ್ತಾ ನಿಶ್ಚಿತ ಅವಧಿ ನಂತರ ದೊಡ್ಡ ಗಂಟನ್ನು ತಮ್ಮದಾಗಿಸಿಕೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ.
ಚೀಟಿಯಂತಹ ವ್ಯವಹಾರದಲ್ಲಿ ನಂಬಿಕೆ ಬಹಳ ಮುಖ್ಯ. ಎಷ್ಟೋ ಕಷ್ಟಪಟ್ಟು ಜನಸಾಮಾನ್ಯರು ಇದರಲ್ಲಿ ಹಣ ತೊಡಗಿಸುತ್ತಾರೆ. ಜನರಿಗೆ ನಂಬಿಕಾರ್ಹ ಚೀಟಿ ಯೋಜನೆಯನ್ನು ಕಲ್ಪಿಸಿಕೊಡಬೇಕು ಎಂಬ ಏಕಮಾತ್ರ ಉದ್ದೇಶದಿಂದ ಎಂಎಸ್‌ಐಎಲ್ 2005ರಲ್ಲಿ ಮಾಸಿಕ ಚೀಟಿ ಯೋಜನೆಯನ್ನು ಆರಂಭಿಸಿದೆ. ಇಲ್ಲಿ ಮಾಸಿಕ 500 ರು. ನಿಂದ 10 ಸಾವಿರದ ವರೆದೆ ಮತ್ತು 25 ಸಾವಿರ ರುಗಳಿಂದ 5 ಲಕ್ಷ ರುಗಳ ವರೆಗಿನ ಮೊತ್ತದ ವಿವಿಧ ಚೀಟಿ ಯೋಜನೆಗಳಿವೆ.
ಬೆಂಗಳೂರು ನಗರದಲ್ಲೆಡೆ ಸುಮಾರು 20 ಶಾಖೆಗಳಿವೆ. ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಪ್ರಧಾನ ಕಚೇರಿ. ಈ ಮೊತ್ತಗಳಲ್ಲದೆ ಇನ್ನೂ ವಿವಿಧ ಮೊತ್ತದ ಚೀಟಿಗಳೂ ಲಭ್ಯ. ಚೀಟಿಯ ಮೊತ್ತದ ಶೇ.40ರವರೆಗೂ ಬಿಡ್ ಕೂಗಬಹುದಾಗಿದೆ. ಈ ರೀತಿಯಲ್ಲಿ ಉಳಿಯುವ ಹಣವನ್ನು ಚಂದಾದಾರರಿಗೆ ಸಮಾನವಾಗಿ ಹಂಚಲಾಗುವುದು. ಹಾಗಾಗಿ ಎಲ್ಲ ಚೀಟಿ ಯೋಜನೆಗಳಂತೆ ಇಲ್ಲೂ ಸಹ ಚಂದಾಹಣದ ಮೊತ್ತ ಕಡಿಮೆಯಾಗುತ್ತದೆ. ಬೇಡಿಕೆ ಅಧಿಕ ಇದ್ದರೆ, ಒಂದು ತಿಂಗಳಿಗೆ ಗರಿಷ್ಠ ಮೂರು ಚೀಟಿಗಳನ್ನು ಕೂಗುವ ಅವಕಾಶವಿದೆ. ಇದರಿಂದ ಚೀಟಿಗಳು ಮುಕ್ತವಾಗುವ ಕಾಲಾವಧಿಯೂ ಕಡಿಮೆಯಾಗುತ್ತದೆ.
ಅತ್ಯಂತ ಕಟ್ಟುನಿಟ್ಟಾಗಿ ಎಂಎಸ್‌ಐಎಲ್ ಚೀಟಿ ಯೋಜನೆ ನಡೆಯುವ ಕಾರಣ ಇಲ್ಲಿ ಮೋಸ ಎಂಬ ಮಾತೇ ಇಲ್ಲ. ಸರ್ಕಾರದ ಯೋಜನೆಯಾದ ಕಾರಣ ಜನ ಕಣ್ಣುಮುಚ್ಚಿ ಇದರ ಮೇಲೆ ನಂಬಿಕೆ ಇಡಬಹುದು. ಎಲ್ಲೆಲ್ಲೋ ಖಾಸಗಿ ಜನರ, ಸಂಸ್ಥೆಗಳ ಬಳಿ ಚೀಟಿ ಹಾಕಿ ಮೋಸ ಹೋಗುವ ಬದಲು ಸರ್ಕಾರದ ಈ ಯೋಜನೆಯಲ್ಲಿ ಹಣ ಹೂಡಲು ಹೆಚ್ಚು ಯೋಚಿಸಬೇಕಿಲ್ಲ. ನಿಮ್ಮ ಹಣ ಭದ್ರವಾದ ತಿಜೋರಿಯಲ್ಲಿದ್ದಂತೆ ಸುರಕ್ಷಿತವಾಗಿರುತ್ತದೆ. ಇಲ್ಲಿ ವಂಚನೆಯ ಭಯ ಇರುವುದಿಲ್ಲ. ಹನಿಹನಿ ಗೂಡಿದರೆ ಹಳ್ಳ ಎಂಬಂತೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಹಣ ಹೂಡಬಹುದು. ನಂಬಿಕೆಗೆ ಮತ್ತೊಂದು ಹೆಸರು ಎಂಬಂತಿರುವ ಎಂಎಸ್‌ಐಎಲ್ ಮಾಸಿಕ ಚೀಟಿ ಯೋಜನೆಯಲ್ಲಿ ಕೈ ಜೋಡಿಸಿ. ಹಾಯಾಗಿರಿ.
ಹೆಚ್ಚಿನ ಮಾಹಿತಿಗೆ-080-22353068, 22250173, 22264021-25
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ