ಈ ಜಾಲ

ಒಂದಷ್ಟು ಬಿಟ್ಟಿಯಾಗಿ ಅಥವಾ ರಿಯಾಯಿತಿ ದರದಲ್ಲಿ ಏನಾದರೂ ಸಿಗುತ್ತದೆ ಎಂದಾಗ...
ಈ ಜಾಲ
Updated on

ಒಂದಷ್ಟು ಬಿಟ್ಟಿಯಾಗಿ ಅಥವಾ ರಿಯಾಯಿತಿ ದರದಲ್ಲಿ ಏನಾದರೂ ಸಿಗುತ್ತದೆ ಎಂದಾಗ ನಮ್ಮ ಜನ ಇನ್ನಿಲ್ಲದಂತೆ ಮುಗಿಬೀಳುತ್ತಾರೆ. ಸಾವಿರ ರು.ಗಳ ವಸ್ತು ರಿಯಾಯಿತಿ ದರದಲ್ಲಿ 910 ರು.ಗಳಿಗೆ ಸಿಗುತ್ತದೆ ಎಂದರೆ ನಮ್ಮ ಜನ ಎದ್ದೂ ಬಿದ್ದು ಖರೀದಿಗೆ ಓಡುತ್ತಾರೆ. ಆ ವಸ್ತು ಬೇಕಿದೆಯೋ ಇಲ್ಲವೋ ಎಂಬುದನ್ನೂ ಯೋಚಿಸುವುದಿಲ್ಲ. ಸರಿಯಾಗಿ ಜನರ ಈ ಮನೋಭಾವವನ್ನೇ ಬಳಸಿಕೊಂಡ ವ್ಯಾಪಾರಿ ಸಂಸ್ಥೆಗಳು, ಲಾಭ ಮಾಡಿಕೊಳ್ಳುತ್ತವೆ.

ಒಂದು ಸರಳವಾದ ತರ್ಕ ಹೀಗಿದೆ. 1,000 ರು.ಗಳ ವಸ್ತುವಿನ ಸಗಟು ದರ 850 ರೂ. ಇರುತ್ತದೆ. ಅದನ್ನು ಮಾರಾಟ ಮಾಡಿದಾಗ 150 ರು. ಲಾಭ. ಇದರಲ್ಲಿ ರಿಯಾಯಿತಿ ಎಂದು 90 ರು.ಬಿಟ್ಟರೆ ಆಗಲೂ ಆ ವ್ಯಾಪಾರಿಗೆ 60 ರು. ಲಾಭ. ಒಂದು ತಿಂಗಳಲ್ಲಿ ಆ ವಸ್ತುವನ್ನು ಹತ್ತು ಜನ ಖರೀದಿಸಿದರೆ 1,500 ರು.ಲಾಭ. ಆದರೆ ಹತ್ತು ದಿನದಲ್ಲಿ ರಿಯಾಯಿತಿ ದರದಲ್ಲಿ 50 ಜನ ಆ ವಸ್ತುವನ್ನು ಖರೀದಿಸಿದರೆ 3,000 ರು. ನಿವ್ವಳ ಲಾಭ. 30 ದಿನಗಳ ವ್ಯಾಪಾರದಲ್ಲಿ ಬರುವ ಲಾಭ 3,000 ರು.30 ದಿನಗಳಲ್ಲಿ ಈ ಲಾಭ ಬಹುತೇಕ ಮೂರು ಪಟ್ಟ ಹೆಚ್ಚು. ಇದು ರಿಯಾಯಿತಿ ಮಾರಾಟದ ರಹಸ್ಯ.

ಇನ್ನೂ ಕೆಲವು ವ್ಯಾಪಾರಿಗಳು ವಸ್ತುಗಳ ಬೆಲೆಯನ್ನು ಅಪಾರವಾಗಿ ಹೆಚ್ಚಿಸಿ ಲಾಭ ಗಿಟ್ಟಿಸಿಕೊಳ್ಳುತ್ತಾರೆ. ಒಂದು ಕೊಂಡರೆ ಒಂದು ಉಚಿತ. 1 ಕೊಂಡರೆ ನಾಲ್ಕು ಉಚಿತ ಎಂಬ ಸ್ಲೋಗನ್ಗಳ ಹಿಂದೆ ಇದೇ ತತ್ವ ಕೆಲಸ ಮಾಡುತ್ತಿರುತ್ತದೆ.

ಈಗ ನಾಗಾಲೋಟದಿಂದ ಮುನ್ನುಗ್ಗುತ್ತಿರುವ ಆನ್ಲೈನ್ ವ್ಯಾಪಾರ ಸಹ ಈ ತಂತ್ರದಿಂದ ಹೊರತಾಗಿಲ್ಲ. ಆನ್ಲೈನ್ ವ್ಯಾಪಾರಿ ಸಂಸ್ಥೆಗಳು ಕಡಿಮೆ ದರದಲ್ಲಿ ವಸ್ತುಗಳ ಮಾರಾಟವನ್ನು ಆಗಾಗ ಏರ್ಪಡಿಸುತ್ತಾ ಬಂದಿದೆ. ಇ-ಕಾಮರ್ಸ್ ಸಂಸ್ಥೆಗಳು ಸತತವಾಗಿ ದರ ಬದಲಾವಣೆ ಮಾಡುತ್ತಾ, ಜನರನ್ನು ಹೇಗೆ ಮುರ್ಖರನ್ನಾಗಿಸುತ್ತಿವೆ ಎಂಬುದರ ಬಗ್ಗೆ ನಡೆಸಲಾದ ಅಧ್ಯಯನವೊಂದು ಆಶ್ಚರ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದೆ.

ಉದಾಹರಣೆಗೆ, ಬೃಹತ್ ಅಂತಾರಾಷ್ಟ್ರೀಯ ಆನ್ಲೈನ್ ವ್ಯಾಪಾರಿ ಸಂಸ್ಥೆಯೊಂದು ಗಂಟೆಗೊಮ್ಮೆ ತನ್ನ ದರಪಟ್ಟಿಯಲ್ಲಿ ಬದಲಾವಣೆ ಮಾಡುತ್ತಿರುತ್ತದೆ. ಈ ಮೂಲಕ, ತಾವು ಅತ್ಯುತ್ತಮ ದರದಲ್ಲಿ ಖರೀದಿ ಮಾಡಿದ್ದೇವೆ ಎಂದು ಗ್ರಾಹಕರು ಭಾವಿಸುವಂತೆ ಮಾಡುತ್ತದೆ. ಹೆಚ್ಚು ಬೇಡಿಕೆಯ ವಸ್ತುಗಳಾದ ಟಿವಿ ಇತ್ಯಾದಿಗಳ ಮೇಲೆ ಹೆಚ್ಚು ರಿಯಾಯಿತಿ ನೀಡುವುದು. ಹೆಚ್ಚು ಬೇಡಿಕೆಯಿಲ್ಲದ ವಸ್ತುಗಳ ಬೆಲೆ ಹೆಚ್ಚಿಸುವುದು ಕೆಲ ತಂತ್ರಗಳು. ಹೆಚ್ಚು ಮಾರಾಟವಾಗವು ವಸ್ತುಗಳು ಎಂಬ ಶೀರ್ಷಿಕೆಯಲ್ಲಿ ಜನರು ಸತತವಾಗಿ ಇವನ್ನು ವೀಕ್ಷಿಸುವುದರಿಂದಾಗಿ ಈ ಸಂಶ್ಥೆ ಎಲ್ಲಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತದೆ ಎಂಬ ಭಾವನೆ ಉಂಟಾಗುತ್ತದೆ. ಇದಕ್ಕೆ ಒಂದು ಉದಾಹರಣೆ: 35,000ರು.ಗಳ ಟಿವಿಯನ್ನು ಸಂಸ್ಥೆ ರಿಯಾಯಿತಿ ದರದಲ್ಲಿ 25,000 ರು.ಗೆ ಮಾರಿದೆ. ಆದರೆ ಅದೇ ಸಂದರ್ಭದಲ್ಲಿ ಟಿವಿಗೆ ಅಗತ್ಯವಾಗಿ ಬೇಕಿರುವ ಎಚ್ಡಿಎಂಐ ಕೇಬಲ್ನ ಬೆಲೆಯನ್ನು ಹೆಚ್ಚಿಸಿದೆ. ದೊಡ್ಡ ವಸ್ತು(ಟಿವಿ) ದರದ ಮನೋಭೂಮಿಕೆ, ಕೇಬಲ್ನ ಬೆಲೆ ಹೆಚ್ಚಳದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವಂತೆ ಮಾಡುವುದಿಲ್ಲ. ಮತ್ತೊಂದು ಭಾರಿ ಬೇಡಿಕೆಯ ರೌಟರ್ ಅನ್ನು ಪ್ರತಿಸ್ಪರ್ಧಿಯ ದರಕ್ಕಿಂತ ಶೇ.20 ಕಡಿಮೆ ದರದಲ್ಲಿ ಮಾರಿದರೆ, ಇನ್ನೊಂದು ಮಾದರಿಯನ್ನು ಅದಕ್ಕಿಂತ ಶೇ.29 ಹೆಚ್ಚಿಸಿ ಮಾರಿದೆ.

ಒಟ್ಟಾರೆ, ದಿನವೊಂದರಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಬೆಲೆಗಳಲ್ಲಿ ಪರಿವರ್ತನೆ ಮಾಡುತ್ತಾ ಗ್ರಾಹಕರ ದರ ಸಂಬಂದಿ ಮನೋಭಾವವನ್ನು ತಿರುಚುತ್ತಾ ಇ-ಕಾಮರ್ಸ್ ಸಂಸ್ಥೆಗಳು ಹೇಗೆ ಲಾಭ ಮಾಡಿಕೊಲ್ಳುತ್ತವೆ ಎಂಬುದನ್ನು ಈ ಅಧ್ಯಯನ ಸಾರಿ ಹೇಳುತ್ತದೆ. ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಎಂದು ಮರುಳಾಗುವ ಗ್ರಾಹಕರೇ ಇದರ ಕುರಿತು ವಿವೇಚನೆ ಬೆಳೆಸಿಕೊಂಡರೆ ಒಳಿತು.


-ಪ್ರೇಮ್ ರಾಜ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com