ಬ್ಯಾಂಕ್ ಮುಷ್ಕರ ಮುಂದೂಡಿಕೆ

ವೇತನ ಪರಿಷ್ಕರಣೆಗೆ ಆಗ್ರಹಿಸಿ ನೌಕರರ ಯೂನಿಯನ್ ಜ.21ರಿಂದ ಕರೆ ನೀಡಿದ್ದ ನಾಲ್ಕು...
ಬ್ಯಾಂಕ್ ಮುಷ್ಕರ ಮುಂದೂಡಿಕೆ

ನವದೆಹಲಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ನೌಕರರ ಯೂನಿಯನ್ ಜ.21ರಿಂದ ಕರೆ ನೀಡಿದ್ದ ನಾಲ್ಕು ದಿನಗಳ ಬ್ಯಾಂಕ್ ಮುಷ್ಕರವನ್ನು ಸದ್ಯಕ್ಕೆ ಮುಂದೂಡಲಾಗಿದೆ.

ನೌಕರರ ಯೂನಿಯನ್ ಮುಂದಿಟ್ಟಿರುವ ಬೇಡಿಕೆಗೆ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಸರ್ಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನೌಕರರ ಯೂನಿಯನ್‌ಗಳ ಒಕ್ಕೂಟವು ಶೇ.19.50ರಷ್ಟು ವೇತನ ಹೆಚ್ಚಿಸುವಂತೆ ಬೇಡಿಕೆ ಇಟ್ಟಿತ್ತು. ಆದರೆ, ಸೋಮವಾರ ನಡೆದ ಸಭೆಯಲ್ಲಿ ಬ್ಯಾಂಕ್‌ಗಳ ಒಕ್ಕೂಟವು ವೇತನವನ್ನು ಶೇ.12.50ರಿಂದ ಶೇ.12.75ರಷ್ಟು ಹೆಚ್ಚಿಸಲು ಒಲವು ತೋರಿತ್ತು.

ಈ ಹಿನ್ನೆಲೆಯಲ್ಲಿ ನೌಕರರ ಒಕ್ಕೂಟವು ತನ್ನ ಪಟ್ಟು ಸಡಿಲಿಸಿದ್ದು, ಕನಿಷ್ಠ ಶೇ.16ರಷ್ಟಾದರೂ ಹೆಚ್ಚಳ ಮಾಡುವಂತೆ ಆಗ್ರಹಿಸಿದೆ. ಇವರ ಬೇಡಿಕೆ ಪರಿಗಣಿಸುವ ಸಂಬಂಧ ಬ್ಯಾಂಕ್‌ಗಳ ಒಕ್ಕೂಟ ಇನ್ನಷ್ಟು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಷ್ಕರ ಕೈಬಿಡಲು ನಿರ್ಧರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com