ಎರಡು ಕೇಂದ್ರ

ಬ್ಯಾಂಕ್‌ಗಳ ಪ್ರಮುಖ ಹುದ್ದೆಗೆ ಸಂಬಂಧಿಸಿದಂತೆ, 2 ಕೇಂದ್ರಗಳನ್ನು ಸೃಷ್ಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ..
ಸಿಂಡಿಕೇಟ್ ಬ್ಯಾಂಕು (ಸಾಂದರ್ಭಿಕ ಚಿತ್ರ)
ಸಿಂಡಿಕೇಟ್ ಬ್ಯಾಂಕು (ಸಾಂದರ್ಭಿಕ ಚಿತ್ರ)

ಬ್ಯಾಂಕ್‌ಗಳ ಪ್ರಮುಖ ಹುದ್ದೆಗೆ ಸಂಬಂಧಿಸಿದಂತೆ, 2 ಕೇಂದ್ರಗಳನ್ನು ಸೃಷ್ಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಬ್ಯಾಕಿಂಗ್ ಕ್ಷೇತ್ರದಲ್ಲಿ ಸಂಕ್ರಮಣದ ಕಾಲ ಬಂದಿದೆ. ಅದೂ ವಿಶೇಷವಾಗಿ ಸಿಂಡಿಕೇಟ್ ಬ್ಯಾಂಕು ಲಂಚ ಪ್ರಕರಣ ಬಯಲಾದ ಬಳಿಕ ಅಧ್ಯಕ್ಷ ಮತ್ತು ವ್ಯವಸ್ಥಾಪಕರ ಹುದ್ದೆಗೆ ಸಂಬಂಧಿಸಿದಂತೆ ಬದಲಾವಣೆ ಮಾಡಬೇಕೆಂಬ ರೀತಿಯ ಹಕ್ಕೊತ್ತಾಯ ಕೇಳಿ ಬಂದಿತ್ತು.

ಅದಕ್ಕೆ ಪೂರಕವಾಗಿ ಹಾಲಿ ಕೇಂದ್ರ ಸರ್ಕಾರ 2 ಹುದ್ದೆಗಳನ್ನು ವಿಭಜಿಸಲು ನಿರ್ಧರಿಸಿದೆ. ಅಂದರೆ ವ್ಯವಸ್ಥಾಪಕ ನಿರ್ದೇಶಕ (ಮ್ಯಾನೇಜಿಂಗ್ ಡೈರೆಕ್ಟರ್) ಮತ್ತು ಚೇರ್‌ಮನ್ (ಅಧ್ಯಕ್ಷ) ಎಂಬ 2 ಹುದ್ದೆಗಳು. ಈ ಹಿಂದಿನ ವ್ಯವಸ್ಥೆಯಲ್ಲಿ ಸಿಎಂಡಿ ಹುದ್ದೆಗೆ ಬರುವವಷ್ಟರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ಅಧಿಕಾರಿಗಳು ನಿವೃತ್ತಿಯ ಅಂಚಿನಲ್ಲಿರುತ್ತಿದ್ದರು. ಅಧಿಕಾರದ ಪೂರ್ಣಾವಧಿ ಪೂರೈಸುತ್ತಾ ಇದ್ದದ್ದು, ಕೆಲವರು ಮಾತ್ರ. ಬ್ಯಾಂಕಿನ ಆಳ ಮತ್ತು ಅಗಲ ತಿಳಿಯುತ್ತಿರುವಂತೆಯೇ ನಿವೃತ್ತಿಯಾಗುತ್ತಿದ್ದರು.

ಹೀಗಾಗಿಯೇ ಅಧ್ಯಕ್ಷರಿಗೆ ಐದು ವರ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಿಗೆ ಕನಿಷ್ಠ 3 ವರ್ಷ ಅಧಿಕಾರದ ಅವಧಿ ನೀಡಬೇಕೆಂದು ಬ್ಯಾಂಕಿಂಗ್ ಉದ್ದಿಮೆ ವಲಯ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿತ್ತು. ಅದಕ್ಕೆ ಪೂರಕವಾಗಿ ಪಿಜೆ ನಾಯಕ್ ನೇತೃತ್ವ ಸಮಿತಿಯೂ ಈ ರೀತಿಯ ಶಿಫಾರಸ್ಸನ್ನು ಮಾಡಿತ್ತು.

ಅನುಕೂಲಗಳೇನು?
ಬ್ಯಾಂಕಿನ ಅವ್ಯವಹಾರದಲ್ಲಿ ಸ್ಥಿರತೆ ದೊರೆಯುತ್ತದೆ.
ಅಧ್ಯಕ್ಷರಿಗೆ ಹೆಚ್ಚಿನ ಹೊಣೆಗಾರಿಕೆ. ಜತೆಗೆ ಯೋಜನೆ ಅನುಷ್ಠಾನಗೊಳಿಸಲು ಹೆಚ್ಚಿನ ಸಮಯಾವಕಾಶ ಸಿಗುತ್ತದೆ.
ಎಸ್‌ಬಿಐನಲ್ಲಿ ಅಧ್ಯಕ್ಷ ಮತ್ತು ನಾಲ್ವರು ಮ್ಯಾನೇಜಿಂಗ್ ಡೈರೆಕ್ಟರ್‌ಗಳು ಇರುತ್ತಾರೆ. ಇತರ ಖಾಸಗಿ ಬ್ಯಾಂಕ್‌ಗಳಲ್ಲಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಪ್ರತ್ಯೇಕವಾಗಿಯೇ ಇದೆ.
ವ್ಯವಸ್ಥಾಪಕ ನಿರ್ದೇಶಕರಿಗೆ ಮಂಡಳಿಯಲ್ಲಿ ಅಧಿಕಾರದ ಜತಗೆ ಕಾರ್ಯನಿರ್ವಾಹಕ ಅಧಿಕಾರವೂ ಇರುತ್ತದೆ. ಅಂಶವೆಂದರೆ ಅಧ್ಯಕ್ಷರ ಹುದ್ದೆ ಎಂದರೆ ಅಲಂಕಾರಿಕ ಎಂದೇ ಹೇಳಲಾಗುತ್ತದೆ.

ಇನ್ನು ಆಡಳಿತ ಮಂಡಳಿಯಲ್ಲಿ ಅಧಿಕಾರೇತರ ನಿರ್ದೇಶಕರು ಮತ್ತು ಷೇರುದಾರು ಆಯ್ಕೆಯಾದ ಮೂವರಿರುತ್ತಾರೆ. ಇವರ ಬಗ್ಗೆ ಸಾಕಷ್ಟು ಟೀಕೆ ಕೇಳಿ ಬರುತ್ತಿದೆ. ಅದರಲ್ಲಿ ಪಾರದರ್ಶಕತೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ವಿಭಾಗದಿಂದ ಚಾರ್ಟರ್ಡ್ ಅಕೌಂಟೆಂಟ್ ಗಳು ಹೆಚ್ಚಾಗಿ ಆರಿಸಿ ಬರುತ್ತಿದ್ದಾರೆ. ಅವರು ಬ್ಯಾಂಕ್‌ಗಳ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಟೀಕೆಗಳಿವೆ.

-ರಮಾನಂದ ಶರ್ಮಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com