ವೈದ್ಯಕೀಯ ಸಾಧನ ಕರ್ನಾಟಕ ನಂ.1

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆ ಮಾಡುವ ಸಾಧನಗಳ ತಯಾರಿಕೆ ಕಾರ್ಖಾನೆಗಳು ಕರ್ನಾಟಕದಲ್ಲಿ ಶೇ.8ರಷ್ಟು ಮಾತ್ರ ಇದೆ...
ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆ ಮಾಡುವ ಸಾಧನ
ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆ ಮಾಡುವ ಸಾಧನ

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆ ಮಾಡುವ ಸಾಧನಗಳ ತಯಾರಿಕೆ ಕಾರ್ಖಾನೆಗಳು ಕರ್ನಾಟಕದಲ್ಲಿ ಶೇ.8ರಷ್ಟು ಮಾತ್ರ ಇದೆ. ಮಾರುಕಟ್ಟೆಗೆ ಸರಬರಾಜು ಮಾಡುವ ಪ್ರಮಾಣವೂ ಕಡಿಮೆ. ಆದರೆ ಗುಣಮಟ್ಟದ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಒಟ್ಟಾರೆ ವೈದ್ಯಕೀಯ ಸಾಧನಗಳ ಮಾರಾಟ ಕ್ಷೇತ್ರದಲ್ಲಿ ರಾಜ್ಯದ ಪಾಲು ಶೇ.25ರಷ್ಟಿದ್ದು ಇದರ ಮೌಲ್ಯ  ರು. 5,300 ಕೋಟಿಗಳಾಗಿದೆ. ವೈದ್ಯಕೀಯ ಸಾಧನಗಳ ಉತ್ಪಾದನೆ ಮತ್ತು ಸರಬರಾಜು ಕುರಿತಂತೆ ಅಸೋಚಾಮ್  ರಾಜ್ಯವಾರು ಸಮೀಕ್ಷೆ ನಡೆಸಿದ್ದು `ಇಂಡಿಯನ್ ಮೆಡಿಕಲ್ ಡಿವೈಸಸ್ ಇಂಡಸ್ಟ್ರಿ; ದಿ ವೇ ಅಹೆಡ್' ವರದಿಯಲ್ಲಿ ಹೇಳಿದೆ. ಕೇಂದ್ರ ಸರ್ಕಾರ 2011-12ರಲ್ಲಿ ನಡೆಸಿದ್ದ ವಾರ್ಷಿಕ ಸಮೀಕ್ಷೆ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟಾರೆ 26 ಕಾರ್ಖಾನೆಗಳಿದ್ದು ಈ ಪೈಕಿ 2011-12ರಲ್ಲಿ 25 ಕಾರ್ಖಾನೆಗಳು ಉತ್ಪಾದಿಸುತ್ತಿದ್ದವು. ಕರ್ನಾಟಕದಲ್ಲಿ ಈ ಕ್ಷೇತ್ರದಲ್ಲಿ 18,100 ನೇರ ಉದ್ಯೋಗ ಕಲ್ಪಿಸಿದ್ದು ದೇಶದಲ್ಲಿ ಆರನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com