
ನವದೆಹಲಿ: ಬ್ಯಾಂಕ್‍ನ ಒಟ್ಟಾರೆ ಲಾಭದಲ್ಲಿ ಶೇ.3ರಷ್ಟು ಸಿಬ್ಬಂದಿಗೆ ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಚಿಂತನೆ ನಡೆಸಿದೆ. ಉತ್ತಮವಾಗಿ ಕರ್ತವ್ಯನಿರ್ವಹಿಸುವ ಸಿಬ್ಬಂದಿಯನ್ನು ಉಳಿಸಿಕೊಳ್ಳು ಬ್ಯಾಂಕ್ ಈ ಕ್ರಮಕ್ಕೆ ಮುಂದಾಗಿದೆ. ಈ ಕುರಿತಂತೆ ಹಣಕಾಸು ಸಚಿವಾಲಯದ ಅನುಮತಿ ಕೋರಿರುವುದಾಗಿ ಬ್ಯಾಂಕ್‍ನ ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ. ಬ್ಯಾಂಕ್‍ನ ವಹಿವಾಟನ್ನು ಹೆಚ್ಚಿಸಲು ಮತ್ತು ಸ್ಪರ್ಧಾತ್ಮಕವಾಗಿರಲು ಸಿಬ್ಬಂದಿಗೆ ವಿವಿಧ ಸೌಲಭ್ಯಗಳನ್ನು ನೀಡುವುದು ಉತ್ತಮ. ಇದಕ್ಕಾಗಿ ಶೇ.1ರಷ್ಟು ಲಾಭ ನೀಡುವಂತೆ ಸರ್ಕಾರ ಸೂಚಿಸಿತು. ಇದನ್ನು ಶೇ.3ಕ್ಕೆ ಹೆಚ್ಚಿಸುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.
Advertisement