ಹೊಸ ತೆರಿಗೆ ವ್ಯಾಪ್ತಿಯಿಂದ ಮದ್ಯ ಹೊರಕ್ಕೆ

ರಾಜ್ಯಸಭೆಯ ಸೆಲೆಕ್ಟ್ ಕಮಿಟಿ ಶಿಫಾರಸು ಮಾಡಿರುವ ಶೇ.20 ರಷ್ಟು ಜಿಎಸ್‍ಟಿ ತೆರಿಗೆ ಉದ್ಯಮ ಮತ್ತು ಗ್ರಾಹಕರಿಗೂ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

-ಭವಿಷ್ಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸೇರ್ಪಡೆ

ನವದೆಹಲಿ: ರಾಜ್ಯಸಭೆಯ ಸೆಲೆಕ್ಟ್ ಕಮಿಟಿ ಶಿಫಾರಸು ಮಾಡಿರುವ ಶೇ.20 ರಷ್ಟು ಜಿಎಸ್‍ಟಿ ತೆರಿಗೆ ಉದ್ಯಮ ಮತ್ತು ಗ್ರಾಹಕರಿಗೂ ಹೊರೆಯಾಗುವುದಿಲ್ಲ ಎಂದು ವಾಣಿಜ್ಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಜಿಎಸ್‍ಟಿ ಪ್ರಮಾಣ ಶೇ.20 ಮೀರ ಬಾರದು ಏಕೆಂದರೆ ಹೆಚ್ಚಿನ ದರದಿಂದಾಗಿ ಹಣದುಬ್ಬರ ಪ್ರಮಾಣ ಹೆಚ್ಚಲಿದೆ.

ಇದರಿಂದ ಗ್ರಾಹಕರ ವಿಶ್ವಾಸ ಕುಂದಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಇತರ ದೇಶಗಳಲ್ಲಿ ಜಿಎಸ್‍ಟಿ ಪ್ರಮಾಣ ಶೇ.16ರಿಂದ 20ರವರೆಗಿದೆ. 2016ರ ಏಪ್ರಿಲ್ 1ರಿಂದ ಭಾರತದಲ್ಲಿ ಜಿಎಸ್‍ಟಿ ಜಾರಿಗೆ ತರುವ ಯೋಜನೆ ಇದೆ. ಶೇ.20ರಷ್ಟು ತೆರಿಗೆ ವಿಧಿಸುವುದು ಪ್ರಾಯೋಗಿಕವಾದುದಾಗಿದೆ. ಇದರಿಂದ ವಿವಿಧ ರೀತಿಯ ಶೇ.25ರವರೆಗೂ ತೆರಿಗೆ ನೀಡುವ ತಯಾರಕರಿಗೆ ಅನುಕೂಲವಾಗಲಿದೆ. ಇದರೊಂದಿಗೆ ತೆರಿಗೆ ವ್ಯಾಪ್ತಿ ವಿಸ್ತರಿಸುವುದರಿಂದ ಸರ್ಕಾರ ದೀರ್ಘ ಕಾಲೀನಲ್ಲಿ ಅನುಕೂಲ ವಾಗಲಿದೆ ಎಂದು ಪ್ರೈಸ್‍ವಾಟರ್‍ಕೂಪರ್ ಪಾಲುದಾರರಾದ ಅಮಿತ್ ಭಗತ್ ಹೇಳಿದ್ದಾರೆ.

ಸದ್ಯ ಸೇವಾ ತೆರಿಗೆ ಶೇ.14ರಷ್ಟಿದ್ದು ಜಿಎಸ್‍ಟಿ ಜಾರಿಗೆ ಬಂದ ನಂತರ ಶೇ.20ರವರೆಗೂ ತಲುಪಲಿದೆ. ಆದರೆಇದರಿಂದ ಹೆಚ್ಚು ಅನುಕೂಲವಾಗಲಿದ್ದುವಾಸ್ತವದಲ್ಲಿ ಕಡಿಮೆಯಾಗಲಿದೆ.ಬುಧವಾರಜಿಎಸ್‍ಟಿ ಶಿಫಾರಸನ್ನುರಾಜ್ಯಸಭೆಯಲ್ಲಿ ಸಲ್ಲಿಸಲಾಗಿದ್ದು ಅಂತಿಮತೆರಿಗೆ ನಿಗಧಿ ಕುರಿತು ರಾಜ್ಯಗಳ ಹಣಕಾಸುಸಚಿವರನ್ನುಒಳಗೊಂಡ ಪರಿಷತ್ತುಅಂತಿಮಗೊಳಿಸಲಿದೆ.

ಜಿಎಸ್‍ಟಿ ದರ ನಿಗಧಿಗೆ ರಾಜ್ಯಗಳು ವಿಧಿಸುವ ತಟಸ್ಥ ಕಂದಾಯ ದರ (ಆರ್ ಎನ್‍ಆರ್) ವನ್ನು ಕಡ್ಡಾಯವಾಗಿ ಅನುಸರಿಸುವಂತಿಲ್ಲ. ಏಕೆಂದರೆ ಹೆಚ್ಚಿನ ಜಿಎಸ್‍ಟಿ ಮತ್ತು ಆರ್‍ಎನ್‍ಆರ್ ಹಣದುಬ್ಬರ ಹೆಚ್ಚಲು ಕಾರಣವಾಗಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಅತಿ ಹೆಚ್ಚಿನ ಹಣದುಬ್ಬರ ಪ್ರಮಾಣವನ್ನು ಭಾರತದ ಆರ್ಥಿಕತೆ ಸಹಿಸಿಕೊಳ್ಳಲು ಸಾಧ್ಯವಿಲ್ಲ.

ಜಿಎಸ್‍ಟಿ ಅನುಷ್ಠಾನಕ್ಕೆ ಬಂದ ನಂತರ ರಾಜ್ಯಗಳಿಗೆ ಬರುವ ಆದಾಯ ಕಡಿಮೆಯಾಗಲಿದೆ ಎಂಬ ಆತಂಕಗಳಿವೆ. ಆದರೆ ಆರ್‍ಎನ್‍ಆರ್ ಇರವುದರಿಂದ ಅಂತಹ ಆತಂಕ ಇಲ್ಲ ಎನ್ನಲಾಗಿದೆ. ರಾಜ್ಯಗಳ ಹಣಕಾಸು ಸಚಿವರುಗಳನ್ನು ಒಳಗೊಂಡಿರುವ ಜಿಎಸ್‍ಟಿ ಸಮಿತಿಯ ಉಪ ಸಮಿತಿ ಈ ಹಿಂದೆ ಶೇ.27ರಷ್ಟು ಆರ್ ಎನ್‍ಆರ್ ಗೆ ಸಲಹೆ ನೀಡಿತ್ತು. ಆದರೆ ಈ ದರ ಕುರಿತಂತೆ ಮತ್ತೆ ಚರ್ಚೆಗಳನ್ನು ನಡೆಸಿದ ಉಪ ಸಮಿತಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ರಾಜ್ಯಗಳು ವಿಧಿಸುವ ಶೇ.1ರಷ್ಟು ಲೆವಿ ಎಲ್ಲ ಲೆಕ್ಕ ಹಾಕಿದವು.

ಮದ್ಯವನ್ನು ಜಿಎಸ್‍ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್‍ನ್ನು ಜಿಎಸ್‍ಟಿ ವ್ಯಾಪ್ತಿಗೆ ಒಳಪಡಿಸಲಾಗುವುದು. ಆದರೆ ಈ ಕುರಿತ ದಿನಾಂಕವನ್ನು ಜಿಎಸ್‍ಟಿ ಪರಿಷತ್ತು ಅಂತಿಮಗೊಳಿಸಲಿದೆ. ಪರಿಷತ್ತಿನಲ್ಲಿ ಯಾವುದೇ ನಿರ್ಧಾರ ಗೊಳ್ಳಬೇಕಾದರೆ ಶೇ.75ರಷ್ಟು ಸದಸ್ಯರ ಬೆಂಬಲ ಬೇಕಾಗಲಿದೆ. ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಜಿಎಸ್‍ಟಿ ಅತ್ಯಂತ ಪ್ರಮುಖವಾದ ಅಂಶವಾಗಿದೆ.

ಜಿಎಸ್‍ಟಿ ಹೆಚ್ಚಾಗಿದ್ದರೆ ಖಂಡಿತವಾಗಿಯೂ ಹಕರ ವಿಶ್ವಾಸ ಕಳೆದುಕೊಳ್ಳುತ್ತೇವೆ ಮತ್ತು ಹಣದುಬ್ಬರ ಪ್ರಮಾಣವೂ ಹೆಚ್ಚಲಿದೆ ಎಂದು ಸೆಲೆಕ್ಟ್ ಕಮಿಟಿ ಅಭಿಯಪಟ್ಟಿದೆ. ಜಪಾನ್, ಆಸ್ಟ್ರೇಲಿಯಾಮತ್ತು ಜರ್ಮನಿಗಳಲ್ಲಿ ಈಗಾಗಲೇ ಜಿಎಸ್‍ಟಿ ನೀತಿಯನ್ನು ಜಾರಿಗೆ ತರಲಾಗಿದೆ. ದೇಶಾದ್ಯಂತ ಒಂದೇ ರೀತಿಯ ತೆರಿಗೆ ವ್ಯವಸ್ಥೆ ಇದೆ. ಇಂತದೇ ಆಡಳಿತವನ್ನು ಭಾರತದಲ್ಲೂ ಜಾರಿಗೆ ತರಬೇಕೆಂಬುದು ಭಾರತ ಮಾತ್ರವಲ್ಲದೆ ಜಾಗತಿಕ ಉದ್ಯಮಿಗಳ ಒತ್ತಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com