social_icon
  • Tag results for alcohol

ಹಾಸನದಲ್ಲಿ ಆಲ್ಕೋಹಾಲ್ ಚಾಲೆಂಜ್: ಅರ್ಧಗಂಟೆಯಲ್ಲಿ 900 ಎಂಎಲ್ ಮದ್ಯ ಸೇವಿಸಿದ್ದ ವ್ಯಕ್ತಿ ಸಾವು!

ಅರ್ಧ ಗಂಟೆಯಲ್ಲಿ 90 ಎಂಲ್‌ನ 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್ ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ವ್ಯಕ್ತಿ ಮೃತಪಟ್ಟ ಪ್ರಕರಣ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಸಿಗರನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

published on : 20th September 2023

ಬೀದರ್: ಮದ್ಯ ಕುಡಿಯಲು ಹಣ ಕೊಡದ ತಾಯಿ‌, ಕೊಡಲಿಯಿಂದ ಹೊಡೆದು ಕೊಂದ ಮದ್ಯವ್ಯಸನಿ ಮಗ!

ಬೀದರ್ ಜಿಲ್ಲೆಯಲ್ಲಿ 55 ವರ್ಷದ ಮಹಿಳೆಯನ್ನು ಆಕೆಯ ಮದ್ಯವ್ಯಸನಿ ಮಗನೇ ಕಡಿದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

published on : 13th September 2023

ಬೆಂಗಳೂರು: ಬುದ್ಧಿ ಹೇಳಿದ್ದಕ್ಕೆ ಸಂಬಂಧಿಯನ್ನು ಕೊಂದ ಮದ್ಯವ್ಯಸನಿ!

ಕೆಲಸದ ನಿಮಿತ್ತ ಜಾರ್ಖಂಡ್‌ನಿಂದ ಬೆಂಗಳೂರಿಗೆ ಬಂದಿದ್ದ 32 ವರ್ಷದ ಮದ್ಯವ್ಯಸನಿಯೊಬ್ಬ ತನ್ನ ಸಂಬಂಧಿಯನ್ನು ಕೊಲೆ ಮಾಡಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

published on : 31st July 2023

ಬಜೆಟ್​ನಲ್ಲಿ ದರ ಪರಿಷ್ಕರಣೆ: ಇಂದಿನಿಂದ ಮದ್ಯದ ಬೆಲೆ ಶೇ.20ರಷ್ಟು ಏರಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ ಪ್ರಕಾರ, ಮದ್ಯದ ಬೆಲೆ ಇಂದಿನಿಂದ (ಜುಲೈ 20) ಅನ್ವಯವಾಗುವಂತೆ ಹೆಚ್ಚಳವಾಗಿದೆ. ಇದರೊಂದಿಗೆ ಗರಿಷ್ಠ ಶೇ.20ರಷ್ಟು ಹೆಚ್ಚಿನ ದರದೊಂದಿಗೆ ಹೊಸ ಬೆಲೆಯಲ್ಲಿ ಶುಕ್ರವಾರದಿಂದ ಮದ್ಯ ಮಾರಾಟವಾಗಲಿದೆ.

published on : 21st July 2023

'ಒಳ್ಳೇದಾಯ್ತು, ನಾವಿಬ್ರೂ ಕುಡಿಯೋದಿಲ್ಲ': ಜೋ ಬೈಡನ್ ಮಾತಿಗೆ ಜೋರಾಗಿ ನಕ್ಕ ಪ್ರಧಾನಿ ಮೋದಿ!

ಜನಪ್ರತಿನಿಧಿಗಳು ವಿದೇಶಗಳಿಗೆ ಹೋದಾಗ ಅಲ್ಲಿನ ಗಣ್ಯರು, ಅಧ್ಯಕ್ಷರು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಏರ್ಪಡಿಸುವ ಔತಣ ಕೂಟಗಳಲ್ಲಿ ಡ್ರಿಂಕ್ಸ್ ತೆಗೆದುಕೊಳ್ಳುವುದು ಸಾಮಾನ್ಯ. ವಿದೇಶಗಳಲ್ಲಿ ಆಲ್ಕೋಹಾಲ್ ಸೇವಿಸುವುದು ಪ್ರತಿಷ್ಠೆಯ ವಿಷಯ.

published on : 23rd June 2023

'ಆದಿಪುರುಷ' ರಾಮನ ಪಾತ್ರಕ್ಕಾಗಿ ಮದ್ಯ, ಮಾಂಸ ಸೇವನೆ ಬಿಟ್ಟ ನಟ ಪ್ರಭಾಸ್!

ಬಾಹುಬಲಿ ಪ್ರಭಾಸ್ ನಾಯಕ ನಟನಾಗಿ ನಟಿಸಿರುವ ಆದಿಪುರುಷ ಸಿನಿಮಾ ಇಂದು ಶುಕ್ರವಾರ ತೆರೆಕಂಡಿದೆ. ಆದಿಪುರುಷನಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿರುವ ಪ್ರಭಾಸ್ ಪಾತ್ರದಲ್ಲಿ ಸಂಪೂರ್ಣ ತಲ್ಲೀನವಾಗಲು ಮದ್ಯ, ಮಾಂಸ ಸೇವನೆಯನ್ನು ತ್ಯಜಿಸಿದ್ದರಂತೆ.

published on : 16th June 2023

ಕರ್ನಾಟಕ ಚುನಾವಣೆ 2023: ಮೂರು ದಿನ ಸಿಗಲ್ಲ ಎಣ್ಣೆ; ಬಾರ್​ಗಳಿಗೆ ಮುಗಿಬಿದ್ದ ಮದ್ಯಪ್ರಿಯರು

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಸಂಜೆ 6 ಗಂಟೆಯ ನಂತರ ಬೃಹತ್ ಪ್ರಚಾರಕ್ಕೆ ಬ್ರೇಕ್ ಬಿದ್ದಿದೆ. ಇದೇ ವೇಳೆ ರಾಜ್ಯಾದ್ಯಂತ ಇಂದು ಸಂಜೆ 6 ಗಂಟೆಯಿಂದ ಮದ್ಯ ಮಾರಟಕ್ಕೆ ನಿರ್ಬಂಧ ಹೇರಲಾಗಿದೆ.

published on : 8th May 2023

ಪ್ರಯಾಣಿಕರ ಅಶಿಸ್ತಿನ ವರ್ತನೆ ಬೆನ್ನಲ್ಲೇ 'ಎಣ್ಣೆ ನೀತಿ' ಮಾರ್ಪಡಿಸಿದ ಏರ್ ಇಂಡಿಯಾ

ಇತ್ತೀಚಿಗೆ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಗಳು ಹೆಚ್ಚುತ್ತಿದ್ದು, ಇದರಿಂದ ಎಚ್ಚೆತ್ತುಕೊಂಡ ಏರ್ ಇಂಡಿಯಾ, ತನ್ನ ವಿಮಾನದಲ್ಲಿನ ಆಲ್ಕೋಹಾಲ್ ಸೇವಾ ನೀತಿಯನ್ನು ಮಾರ್ಪಡಿಸಿದೆ.

published on : 25th January 2023

ಉತ್ತರ ಪ್ರದೇಶ: ಗರ್ಭಿಣಿ ಪತ್ನಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ಮದ್ಯವ್ಯಸನಿ ಪತಿ

ಮದ್ಯವ್ಯಸನಿ ಪತಿ ತನ್ನ ಕುಡಿಯುವ ಚಟವನ್ನು ವಿರೋಧಿಸಿದ್ದಕ್ಕೆ ಗರ್ಭಿಣಿಯಾಗಿದ್ದ ಪತ್ನಿಯನ್ನು ತನ್ನ ಮೋಟಾರ್‌ ಸೈಕಲ್‌ಗೆ ಕಟ್ಟಿ 200 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದ ಆಘಾತಕಾರಿ ಘಟನೆ ನಡೆದಿದೆ.

published on : 15th January 2023

ನಿಮಗೆ ಗೊತ್ತೇ... ಆರೋಗ್ಯಕ್ಕಾಗಿ ಆಲ್ಕೋಹಾಲ್ ಸೇವನೆಗೆ ಯಾವುದೇ ಸುರಕ್ಷತೆಯ ಮಿತಿ ಇಲ್ಲ!

ಆಲ್ಕೋಹಾಲ್ ಸೇವನೆಗೆ ಯಾವುದೇ ಸುರಕ್ಷತೆಯ ಮಿತಿಯಿಲ್ಲ ಮತ್ತು ಯಾವುದೇ ಪ್ರಮಾಣದ ಮದ್ಯಪಾನ ಒಬ್ಬರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ಹೇಳಲಾಗಿದೆ.

published on : 13th January 2023

ಭಾರತ್ ಜೋಡೋ ಯಾತ್ರೆ ವೇಳೆ ಚಿಕನ್​​, ಮದ್ಯದ ಗ್ಲಾಸ್​​​ ಮುಂದೆ ರಾಹುಲ್ ಗಾಂಧಿ: ಫೋಟೋ ವೈರಲ್!

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಕಾಶ್ಮೀರದತ್ತ ಸಾಗುತ್ತಿದೆ. ಪ್ರಯಾಣ ಅಂತಿಮ ಹಂತಕ್ಕೆ ಬಂದಿದೆ.

published on : 11th January 2023

ವಿಮಾನದಲ್ಲಿ ಕುಡಿದು ಗದ್ದಲ, ಇಬ್ಬರು ಪ್ರಯಾಣಿಕರ ಬಂಧನ

ವಿಮಾನದಲ್ಲಿ ಪ್ರಯಾಣಿಕರ ಅನುಚಿತ ವರ್ತನೆ ಮುಂದುವರೆದಿದೆ. ಇಂಡಿಗೋ ವಿಮಾನ ಹಾರಾಟದ ಮಾರ್ಗ ಮಧ್ಯ ಮಧ್ಯದಲ್ಲಿ ಕುಡಿದು ಗದ್ದಲ ಉಂಟುಮಾಡಿದ ಆರೋಪದ ಮೇರೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ ಎಫ್) ನೆರವಿನಿಂದ ಇಬ್ಬರು ಪ್ರಯಾಣಿಕರನ್ನು ಪಾಟ್ನಾ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

published on : 9th January 2023

ಭಾರತದ 62,100 ಸೇರಿ, 2020ರಲ್ಲಿ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣ: ಸಂಶೋಧನಾ ವರದಿ

ಕಳೆದ ವರ್ಷ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧನಾ ವರದಿಯೊಂದು ಹೊರಹಾಕಿದೆ.

published on : 16th July 2021

ರಾಜ್ಯ ಬಜೆಟ್; ಹೊಸ ಯೋಜನೆಗಳಿಲ್ಲ, ಮದ್ಯಪ್ರಿಯರಿಗೆ ಬರೆ!

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಪರೋಕ್ಷವಾಗಿ ಜನ ಸಾಮಾನ್ಯರ ಜೇಬಿಗೆ ಮತ್ತಷ್ಟು ಭಾರದ ಹೊರೆ ಹೊರಿಸಿದ್ದಾರೆ. ಹೊಸ ಯೋಜನೆ ಪ್ರಕಟ ಮಾಡದೇ ಇರುವ ಯೋಜನೆಗೆ ಬೆಲ್ಲ ಸವರಿದ್ದಾರೆ.   

published on : 5th March 2020

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9